For Quick Alerts
  ALLOW NOTIFICATIONS  
  For Daily Alerts

  ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್

  |

  ದಕ್ಷಿಣ ಭಾರತದ ಖ್ಯಾತ ನಟಿ, ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತನ್ನ ತಂದೆ-ತಾಯಿಯ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಆಂಗ್ಲ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ತಂದೆ ಕಮಲ್ ಹಾಸನ್ ಮತ್ತು ತಾಯಿ ಸಾರಿಕಾ ಪ್ರತ್ಯೇಕವಾದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

  Recommended Video

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada

  ಕಮಲ್ ಹಾಸನ್ 1988ರಲ್ಲಿ ಸಾರಿಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಈ ದಂಪತಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಇಬ್ಬರು ಪುತ್ರಿಯರು. ಕಮಲ್ ಮದುವೆಯಾಗಿ 16 ವರ್ಷದಲ್ಲೇ ಪತ್ನಿ ಸಾರಿಕಾಯಿಂದ ದೂರ ಆದರು. 2004ರಲ್ಲಿ ಕಮಲ್ ಮತ್ತು ಸಾರಿಕಾ ದಂಪತಿ ವಿಚ್ಛೇದನ ಪಡೆದರು.

  ಬಾಯ್ ಫ್ರೆಂಡ್ ಜೊತೆ ಲಾಕ್ ಡೌನ್ ಕಳೆಯುತ್ತಿರುವ ಶ್ರುತಿ ಹಾಸನ್; ಫೋಟೋ ವೈರಲ್ಬಾಯ್ ಫ್ರೆಂಡ್ ಜೊತೆ ಲಾಕ್ ಡೌನ್ ಕಳೆಯುತ್ತಿರುವ ಶ್ರುತಿ ಹಾಸನ್; ಫೋಟೋ ವೈರಲ್

  ತಂದೆ-ತಾಯಿ ವಿಚ್ಛೇದನದ ಸಮಯದಲ್ಲಿ ಶ್ರುತಿ ಹಾಸನ್ ಇನ್ನು ಚಿಕ್ಕವರಾಗಿದ್ದರು ಈ ಬಗ್ಗೆ ಈಗ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ತಂದೆ-ತಾಯಿ ಬೇರೆ ಆಗಿದ್ದು ಸಂತೋಷವಾಗಿದೆ, ಇಬ್ಬರು ಜೊತೆಯಾಗದಿದ್ದರೆ, ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದಿದ್ದಾರೆ. ಜೊತೆಗೆ ಇಬ್ಬರು ಅದ್ಭುತ ಪೋಷಕರು ಎಂದಿದ್ದಾರೆ.

  'ಅವರು (ತಂದೆ-ತಾಯಿ) ತಮ್ಮ ಜೀವನವನ್ನು ತಾವೆ ನಡೆಸುವ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೆ.ಇಬ್ಬರು ಕೆಲವು ಕಾರಣಗಳಿಗೆ ಜೊತೆಯಾಗಿ ಬದುಕಬೇಕು ಎನ್ನುವುದನ್ನು ನಾನು ಭಾವಿಸದ ಕಾರಣ ಅವರು ಬೇರೆ ಆಗಿದ್ದು ನನಗೆ ಸಂತೋಷವಾಯಿತು.' ಎಂದಿದ್ದಾರೆ.

  'ಅವರು ಅದ್ಭುತ ಪೋಷಕರಾಗಿ ಮುಂದುವರೆದಿದ್ದಾರೆ. ನಾನು ನನ್ನ ತಂದೆಗೆ ಹತ್ತಿರವಾಗಿದ್ದೇನೆ. ಅಮ್ಮ ಕೂಡ ನಮ್ಮ ಜೀವನದ ಒಂದು ಭಾಗವಾಗಿದ್ದಾರೆ. ನಿಜಕ್ಕೂ ಇದು ಉತ್ತಮವಾಗಿದೆ. ಅವರು ಒಟ್ಟಿಗೆ ಇರುವುದಕ್ಕಿಂತ ಸಂತೋಷವಾಗಿ ಇದ್ದರು' ಎಂದಿದ್ದಾರೆ.

  ಶ್ರುತಿ ಹಾಸನ್ ಆಗಾಗ ತಂದ ಕಮಲ್ ಹಾಸನ್ ಜೊತೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಶ್ರುತಿ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.

  English summary
  Actress Shruti Haasan says She was glad Kamal Haasan And Sarika divorce.
  Tuesday, May 25, 2021, 8:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X