For Quick Alerts
  ALLOW NOTIFICATIONS  
  For Daily Alerts

  ರಜನೀಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ: ಎದ್ದಿತು ತಕರಾರು

  |

  ನಟ ರಜನೀಕಾಂತ್‌ಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಏಪ್ರಿಲ್ 1 ರಂದು ಘೋಷಿಸಲಾಗಿದೆ. ಪ್ರಧಾನಿ ಮೋದಿ ಸಹಿತ ಹಲವು ಪ್ರಮುಖ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ರಜನೀಕಾಂತ್‌ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

  ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್ | Filmibeat Kannada

  ಆದರೆ ರಜನೀಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವ ಸಮಯದ ಬಗ್ಗೆ ಈಗ ಆಕ್ಷೇಪಣೆಗಳು ಎದ್ದಿವೆ. ಬಿಜೆಪಿಯು ರಾಜಕೀಯ ಲಾಭ ಪಡೆದುಕೊಳ್ಳಲು ರಜನೀಕಾಂತ್ ಅವರಿಗೆ ತಮಿಳುನಾಡು ವಿಧಾನಸಭೆ ಚುನಾವಣೆ ಸಮಯದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದೆ ಎಂದು ಆರೋಪಿಸಲಾಗುತ್ತಿದೆ.

  'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್

  ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ, 'ರಜನೀಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಈ ಹಿಂದೆಯೇ ನೀಡಬೇಕಿತ್ತು. ಅದಕ್ಕೆ ಅವರು ಅರ್ಹರು. ಆದರೆ ಇದೇ ವರ್ಷ ಇದೇ ಸಮಯದಲ್ಲಿ ಏಕೆ ನೀಡಲಾಗುತ್ತಿದೆ. ರಾಜಕೀಯಕ್ಕೆ ಸೆಲೆಬ್ರಿಟಿಗಳನ್ನು ಅನಗತ್ಯವಾಗಿ ಎಳೆದು ತರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬಾರದು' ಎಂದಿದ್ದಾರೆ.

  ರಜನೀಕಾಂತ್ ಗೌರವಾನ್ವಿತ ವ್ಯಕ್ತಿ: ಅಶೋಕ್ ಶುಕ್ಲಾ

  ರಜನೀಕಾಂತ್ ಗೌರವಾನ್ವಿತ ವ್ಯಕ್ತಿ: ಅಶೋಕ್ ಶುಕ್ಲಾ

  'ರಜನೀಕಾಂತ್ ಅವರು ಗೌರವಾನ್ವಿತ ವ್ಯಕ್ತಿ. ಬಿಜೆಪಿ ಸರ್ಕಾರದ ಬಗ್ಗೆ ಅವರು ಎಚ್ಚರದಿಂದಿರಬೇಕು. ಕೇಂದ್ರ ಸರ್ಕಾರವು, ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಿದ್ದರೆ, ಖಂಡಿತ ಇದು ಸೂಕ್ತವಲ್ಲ. ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ' ಎಂದಿದ್ದಾರೆ ಅಶೋಕ್ ಶುಕ್ಲಾ.

  ಪ್ರಶಸ್ತಿಯನ್ನು ಈಗ ಘೋಷಿಸಿರುವ ಉದ್ದೇಶವೇನು: ಕಸ್ತೂರಿ ಶಂಕರ್

  ಪ್ರಶಸ್ತಿಯನ್ನು ಈಗ ಘೋಷಿಸಿರುವ ಉದ್ದೇಶವೇನು: ಕಸ್ತೂರಿ ಶಂಕರ್

  ನಟಿ, ಹೋರಾಟಗಾರ್ತಿ ಆಗಿರುವ ಕಸ್ತೂರಿ ಶಂಕರ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ದಾದಾ ಸಾಹೇಬ್ ಫಾಲ್ಕೆ ಗೌರವ ಪಡೆದ ರಜನೀಕಾಂತ್ ಅವರಿಗೆ ಅಭಿನಂದನೆಗಳು. ರಜನೀಕಾಂತ್ ಅವರು ಪ್ರಶಸ್ತಿಗೆ ಅರ್ಹರು ಆದರೆ ಪ್ರಶಸ್ತಿಯನ್ನು ಇಂದೇ ಏಕೆ ಘೋಷಿಸಲಾಗಿದೆ. ಮತದಾನ ಮುಗಿದ ಮೇಲೆ ಅಥವಾ ಈ ಹಿಂದೆ ಏಕೆ ಘೋಷಣೆ ಮಾಡಲಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ.

  ಪ್ರಧಾನಿ ಮೋದಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ರಜನಿಕಾಂತ್

  'ಕಮಲ್‌ ಹಾಸನ್ ಅವರಿಗೆ ಹಿನ್ನಡೆ ಉಂಟುಮಾಡುವ ತಂತ್ರ'

  'ಕಮಲ್‌ ಹಾಸನ್ ಅವರಿಗೆ ಹಿನ್ನಡೆ ಉಂಟುಮಾಡುವ ತಂತ್ರ'

  'ಇದು ರಜನೀಕಾಂತ್ ಅವರಿಗೆ ಪ್ರಶಸ್ತಿ ನೀಡುವ ಬದಲಿಗೆ ಕಮಲ್ ಹಾಸನ್ ಅವರಿಗೆ ರಾಜಕೀಯ ಹಿನ್ನೆಡೆ ಉಂಟುಮಾಡುವ ತಂತ್ರದಂತೆ ಕಾಣುತ್ತಿದೆ. ಪ್ರಶಸ್ತಿ ನೀಡಿದ್ದಕ್ಕೆ ಗೌರಪೂರ್ವಕವಾಗಿ ರಜನೀಕಾಂತ್ ಅವರು ಬಿಜೆಪಿಗೆ ಬೆಂಬಲಿಸುತ್ತಾರೆ ಎಂದು ತಿಳಿದಿದ್ದರೆ ಅದು ತಪ್ಪು' ಎಂದು ಕಸ್ತೂರಿ ಶಂಕರ್ ಟ್ವೀಟ್ ಮಾಡಿದ್ದಾರೆ.

  'ರಾಜಕೀಯದಿಂದ ಹಿಂದೆ ಸರಿದಿರುವುದು ಬೇಸರ ತಂದಿದೆ'

  'ರಾಜಕೀಯದಿಂದ ಹಿಂದೆ ಸರಿದಿರುವುದು ಬೇಸರ ತಂದಿದೆ'

  'ರಜನೀಕಾಂತ್ ಅವರು ರಾಜಕೀಯದಿಂದ ಹಿಂದೆ ಸರಿದಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ ಈಗ ರಜನಿಗೆ ಪ್ರಶಸ್ತಿ ಬಂದಿರುವುದು ಅಭಿಮಾನಿಗಳಿಗೆ ಹೆಚ್ಚೇನೂ ಸಂತಸ ತಂದಿಲ್ಲ ಎಂದಿದ್ದಾರೆ. ಅಲ್ಲದೆ, ಡಿಎಂಕೆ ಪಕ್ಷಕ್ಕೆ ಸಂಬಂಧಿಸಿದ ದೊಡ್ಡ ನಿರ್ಮಾಣ ಸಂಸ್ಥೆಯೊಂದು ರಜನೀಕಾಂತ್ ಜೊತೆಗೆ ದೊಡ್ಡ ಬಜೆಟ್ ಸಿನಿಮಾ ಮಾಡುತ್ತಿದೆ. ಅವರೂ ಸಹ ಸಿನಿಮಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ' ಎಂದಿದ್ದಾರೆ ಕಸ್ತೂರಿ ಶಂಕರ್.

  English summary
  Some questioning BJP why Dada Saheb Award given to Rajinikanth in middle of Tamil Nadu assembly elections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X