For Quick Alerts
  ALLOW NOTIFICATIONS  
  For Daily Alerts

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ವೈರಸ್ ನೆಗೆಟಿವ್

  |

  ಕೊರೊನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಾಣಿಸಿಕೊಂಡಿದೆ.

  ವೈರಲ್ ಆಯ್ತು Prashanth Sambaragi ಪಾರ್ಟಿ ಫೋಟೋ | Oneindia Kannada

  ಅವರ ಇತ್ತೀಚಿನ ಕೊರೊನಾ ವೈರಸ್ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ವೈರಸ್ ಎಸ್‌ಪಿ ಬಾಲಸುಬ್ರಹ್ಮಣ್ಯಂ ದೇಹ ಬಿಟ್ಟು ತೊಲಗಿದೆ. ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

  ಕೊರೊನಾ ನೆಗೆಟಿವ್ ಬಂದಿದೆಯಾದರೂ, ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ತೀವ್ರ ನಿಗಾಘಟಕದಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

  ಈ ವಿಷಯವನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಪಿ.ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೊರೊನಾ ವರದಿ ನೆಗೆಟಿವ್ ಬಂದಿದೆ ಆದರೆ, ಅವರ ಶ್ವಾಸಕೋಶಗಳು ಪೂರ್ಣ ಆರೋಗ್ಯಯುತವಾಗುವವರೆಗೂ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ' ಎಂದು ಹೇಳಿದ್ದಾರೆ ಚರಣ್.

  ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ ಎಸ್‌ಪಿಬಿ

  ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ ಎಸ್‌ಪಿಬಿ

  ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ದಿಂದ ಚೇತರಿಸಿಕೊಂಡಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಶ್ವಾಸಕೋಶಗಳು ಮೊದಲಿನ ಸ್ಥಿತಿಗೆ ಬರುತ್ತಿವೆ. ಅವರು ಪೂರ್ಣ ಆರೋಗ್ಯವಂತರಾಗುವ ವರೆಗೂ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ ಎಂದಿದ್ದಾರೆ ಚರಣ್.

  ಕ್ರಿಕೆಟ್, ಟೆನ್ನಿಸ್ ನೋಡುತ್ತಿದ್ದಾರೆ

  ಕ್ರಿಕೆಟ್, ಟೆನ್ನಿಸ್ ನೋಡುತ್ತಿದ್ದಾರೆ

  ಆಸ್ಪತ್ರೆಯಲ್ಲಿಯೇ ಅವರು ಸಕ್ರಿಯವಾಗಿದ್ದಾರೆ. ಬರವಣಿಗೆ ಮಾಡುತ್ತಿದ್ದಾರೆ. ಅವರ ಇಷ್ಟದ ಕ್ರಿಕೆಟ್ ಹಾಗೂ ಟೆನ್ನಿಸ್ ಮ್ಯಾಚ್‌ಗಳನ್ನು ಆಸ್ಪತ್ರೆಯಲ್ಲಿದ್ದುಕೊಂಡೇ ನೋಡುತ್ತಿದ್ದಾರೆ. ಐಪಿಎಲ್ ಪ್ರಾರಂಭವಾಗಲು ಎಸ್‌ಪಿಬಿ ಕಾಯುತ್ತಿದ್ದಾರೆಂದು ಚರಣ್ ಹೇಳಿದ್ದಾರೆ.

  ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ

  ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ

  ಕೆಲವು ದಿನಗಳ ಹಿಂದಷ್ಟೆ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು ಅಂದು ಆಸ್ಪತ್ರೆಯಲ್ಲಿಯೇ ಸಣ್ಣದಾಗಿ ಸಂಭ್ರಮಿಸಿದೆವು. ಅವರು ಸಕ್ರಿಯರಾಗಿದ್ದಾರೆ, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ಅವರಿಗೆ ಬರುತ್ತಿರುವ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದರು ಚರಣ್.

  ಫಲಿಸಿದ ಪ್ರಾರ್ಥನೆ

  ಫಲಿಸಿದ ಪ್ರಾರ್ಥನೆ

  ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರು ಶೀಘ್ರವಾಗಿ ಗುಣಮುಖವಾಗಲಿ ಎಂದು ಕನ್ನಡ ಚಿತ್ರರಂಗದ ಸದಸ್ಯರು ಸೇರಿದಂತೆ ಹಲವಾರು ಸ್ಟಾರ್ ನಟ-ನಟಿಯರು, ಗಾಯಕರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಫಲಿಸಿದ್ದು, ಎಸ್‌ಪಿಬಿ ಗುಣಮುಖವಾಗುತ್ತಿದ್ದಾರೆ.

  English summary
  Singer SP Balasubrahmanyam tested Coronavirus negative. His son said SPB recovering well.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X