For Quick Alerts
    ALLOW NOTIFICATIONS  
    For Daily Alerts

    ಕಮಲ್ ಹಾಸನ್ ಚಿತ್ರತಂಡ ಸೇರಿದ 'ಕೆಜಿಎಫ್' ಸಾಹಸ ನಿರ್ದೇಶಕರು

    |

    ರಾಜಕೀಯದಿಂದ ಮತ್ತೆ ಬ್ರೇಕ್ ತೆಗೆದುಕೊಂಡಿರುವ ಕಮಲ್ ಹಾಸನ್ ಸಿನಿಮಾ ಕಡೆ ಗಮನ ಹರಿಸಿದ್ದಾರೆ. ಮಾಸ್ಟರ್ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ವಿಕ್ರಂ ಎಂಬ ಚಿತ್ರ ಮಾಡುತ್ತಿದ್ದು, ಆರಂಭಿಕ ಹಂತದಲ್ಲಿ ಕುತೂಹಲ ಮೂಡಿಸಿದೆ.

    ಫಸ್ಟ್ ಲುಕ್ ಟೀಸರ್ ಮೂಲಕ ಸದ್ದು ಮಾಡುತ್ತಿರುವ ವಿಕ್ರಂ ಚಿತ್ರಕ್ಕೆ ಈಗ ಕೆಜಿಎಫ್, ರಾಬರ್ಟ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಅನ್ಬು-ಅರಿವು ಮಾಸ್ಟರ್‌ಗಳು ಎಂಟ್ರಿ ಕೊಟ್ಟಿದ್ದಾರೆ.

    ಕಮಲ್ ಹಾಸನ್ ಸಿನಿಮಾಕ್ಕೆ ಮತ್ತೊಬ್ಬ ನಟ ರಾಕ್ಷಸನ ಪ್ರವೇಶಕಮಲ್ ಹಾಸನ್ ಸಿನಿಮಾಕ್ಕೆ ಮತ್ತೊಬ್ಬ ನಟ ರಾಕ್ಷಸನ ಪ್ರವೇಶ

    ಈ ಕುರಿತು ನಿರ್ದೇಶಕ ಲೋಕೇಶ್ ಕನಕರಾಜ್ ಶನಿವಾರ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ನಟ ಕಮಲ್ ಹಾಸನ್ ಜೊತೆ, ಅನ್ಬು, ಅರಿವ್ ಭೇಟಿ ಮಾಡಿರುವ ಫೋಟೋ ಹಂಚಿಕೊಂಡು ಥ್ರಿಲ್ ಹೆಚ್ಚಿಸಿದ್ದಾರೆ.

    ಅನ್ಬು ಮತ್ತು ಅರಿವ್ ಇಬ್ಬರು ಸಾಹಸ ನಿರ್ದೇಶಕರು. 2013ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ತಮಿಳು, ತೆಲುಗು, ಕನ್ನಡ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮದ್ರಾಸ್, ಕಬಾಲಿ, ಕೆಜಿಎಫ್, ರಾಬರ್ಟ್, ಧ್ರುವ, ಇರು ಮುಗನ್, ಖೈದಿ, ಸಲ್ಮಾನ್ ಖಾನ್ ರಾಧೆ ಸಿನಿಮಾ ಸೇರಿದಂತೆ ಹಲವು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಸಾಹಸಕ್ಕಾಗಿ 2019ರ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ.

    'ವಿಕ್ರಂ' ಸಿನಿಮಾ ಸಂಪೂರ್ಣ ಆಕ್ಷನ್ ಎಂಟರ್‌ಟೈನ್ಮೆಂಟ್ ಕಥೆಯಾಗಿದೆ. ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ಈ ಚಿತ್ರದಲ್ಲಿ ನಟಿಸುವ ಕುರಿತು ವರದಿಯಾಗಿದೆ. ವಿಜಯ್ ಸೇತುಪತಿ ಜೊತೆಯೂ ಲೋಕೇಶ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

    ಅಂದ್ಹಾಗೆ, ಈ ಚಿತ್ರವನ್ನು ರಾಜ್ ಕಮಲ್ ಬ್ಯಾನರ್‌ನಲ್ಲಿ ಸ್ವತಃ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ ನಿರ್ದೇಶನವಿದೆ. ಲಾಕ್‌ಡೌನ್‌ನಿಂದ ರಿಲೀಫ್ ಸಿಕ್ಕಮೇಲೆ ಮತ್ತೆ ಚಿತ್ರೀಕರಣ ಶುರುವಾಗಲಿದೆ.

    English summary
    Stunt Choreographer Anbu-Arivu Join hands With Director Lokesh for Kamal Hassan Vikram.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X