For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಆಫರ್

  By Rajendra
  |

  ಬಚ್ಚನ್ ಚಿತ್ರದ ಬಳಿಕ ಕಿಚ್ಚ ಸುದೀಪ್ ಅವರು ಬಚ್ಚನ್ 2 ಚಿತ್ರಕ್ಕೆ ಸಿದ್ಧವಾಗಿದ್ದಾರೆ. ಏತನ್ಮಧ್ಯೆ ರಾಜಮೌಳಿ ನಿರ್ದೇಶನದ ತೆಲುಗಿನ 'ಬಾಹುಬಲಿ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ಈಗ ತಮಿಳಿನಿಂದಲೂ ಸುದೀಪ್ ಅವರಿಗೆ ಆಫರ್ ಬಂದಿದೆ.

  ಸಾಕ್ರೆಟೀಸ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ 'ಬ್ರಹ್ಮನ್' ಎಂಬ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಪೋಷಿಸುವಂತೆ ಆಹ್ವಾನ ನೀಡಲಾಗಿದೆ. ಆದರೆ ಸುದೀಪ್ ಅವರು ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲದಿದ್ದರೂ ಶೀಘ್ರದಲ್ಲೇ ಈ ಬಗ್ಗೆ ಅವರ ನಿರ್ಧಾರ ಪ್ರಕಟವಾಗಲಿದೆ ಎನ್ನುತ್ತವೆ ಮೂಲಗಳು.

  ಅಂದಹಾಗೆ ಈ ಚಿತ್ರವನ್ನು ನಿರ್ಮಿಸುತ್ತಿರುವವರು ಗಂಡುಗಲಿ ನಿರ್ಮಾಪಕ ಕೆ.ಮಂಜು. ಚಿತ್ರದಲ್ಲಿ ಕನ್ನಡ ನಟನೊಬ್ಬನ ಪ್ರಸ್ತಾಪ ಬರಲಿದ್ದು ಆ ಪಾತ್ರವನ್ನು ಸುದೀಪ್ ಪೋಷಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೆ ಬ್ರಹ್ಮನ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. (ಬಚ್ಚನ್ ಚಿತ್ರ ವಿಮರ್ಶೆ)

  ಸುದೀಪ್ ಅಭಿನಯದ ತೆಲುಗಿನ 'ಈಗ' ಚಿತ್ರ ತಮಿಳಿಗೆ 'ನಾನ್ ಈ' ಹೆಸರಿನಲ್ಲಿ ಡಬ್ ಆಗಿತ್ತು. ಈಗ ಅವರು ಒಂದುವೇಳೆ 'ಬ್ರಹ್ಮನ್' ಚಿತ್ರದಲ್ಲಿ ಅಭಿನಯಿಸಿದರೆ ತಮಿಳಿನಲ್ಲಿ ಸುದೀಪ್ ಅಭಿನಯದ ಮೊಟ್ಟಮೊದಲ ಚಿತ್ರ ಎನ್ನಿಸಿಕೊಳ್ಳುತ್ತದೆ. ಬ್ರಹ್ಮನ್ ಚಿತ್ರದಲ್ಲಿ ಶಶಿಕುಮಾರ್ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Tamil film director Sacratis approached Kannada actor Sudeep to to play an important role in his film Brahman. But, Sudeep is not yet confirmed whether he will act in the Tamil film or not.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X