Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
20 ವರ್ಷಗಳ ಬಳಿಕ ರೀ-ರಿಲೀಸ್ ಆಗುತ್ತಿರೋ 'ಬಾಬಾ' ಸಿನಿಮಾಗೆ ಡಬ್ ಮಾಡಿದ ರಜನಿಕಾಂತ್!
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ರಾತ್ರಿಯಿಡಿ ಥಿಯೇಟರ್ ಮುಂದೆ ನಿಲ್ಲುತ್ತಾರೆ. ರಜನಿಕಾಂತ್‌ಗೆ ಈಗ 71 ವರ್ಷ. ಹಾಗಿದ್ದರೂ ಸೂಪರ್‌ಸ್ಟಾರ್ ಖದರ್ ಬದಲಾಗಿಲ್ಲ. ಈ ವಯಸ್ಸಿನಲ್ಲೂ ತಲೈವನನ್ನು ತೆರೆಮೇಲೆ ನೋಡುವುದಕ್ಕೆ ಜನರು ಮುಗಿಬೀಳುತ್ತಾರೆ.
ಇನ್ನು ರಜನಿಕಾಂತ್ ನಟಿಸಿದ 20 ವರ್ಷದ ಹಳೆಯ ಸಿನಿಮಾ ಮತ್ತೆ ರಿ-ರಿಲೀಸ್ ಆಗುತ್ತಿದೆ ಅಂದರೆ ಕ್ರೇಜ್ ಹೇಗಿರಬೇಡಾ? ಕಳೆದ ಕೆಲವು ದಿನಗಳಿಂದ ರಜನಿಕಾಂತ್ ಅಭಿನಯದ 'ಬಾಬಾ' ಸಿನಿಮಾ ಮರುಬಿಡುಗಡೆಯಾಗುತ್ತಿದೆ ಅನ್ನೋ ಸುದ್ದಿ ಹರಿದಾಡಿತ್ತು. ಅದಕ್ಕೆ ಸರಿಯಾಗಿ ಈಗ ಸಾಕ್ಷಿಯೊಂದು ಸಿಕ್ಕಿದೆ.
20
ವರ್ಷಗಳ
ಬಳಿಕ
ರಜನಿ
'ಬಾಬಾ'
ಮತ್ತೆ
ರಿಲೀಸ್:
ಅಸಲಿ
ಟ್ವಿಸ್ಟ್
ಇರೋದೇ
ಇಲ್ಲಿ!
ಸೂಪರ್‌ಸ್ಟಾರ್ ರಜನಿಕಾಂತ್ 20 ವರ್ಷಗಳ ಹಿಂದೆ ನಟಿಸಿದ 'ಬಾಬಾ' ಸಿನಿಮಾಗಾಗಿ ಡಬ್ಬಿಂಗ್ ಆರಂಭಿಸಿದ್ದಾರೆ. ಈ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

'ಬಾಬಾ'ಗೆ ರಜನಿಕಾಂತ್ ಡಬ್
20 ವರ್ಷಗಳ ಹಿಂದೆ ದೇಶಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ 'ಬಾಬಾ'. ಆದರೆ, ರಿಲೀಸ್ ಆದ್ಮೇಲೆ ಬಾಕ್ಸಾಫೀಸ್‌ನಲ್ಲಿ ಮಾತ್ರ ಸದ್ದು ಮಾಡಲಿಲ್ಲ. ಈಗ ದಿಢೀರನೇ ಮತ್ತೆ ಸಿನಿಮಾವನ್ನು ಮರು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಸಿನಿಮಾದಲ್ಲಿ ಕೆಲವು ಸೀನ್‌ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಈ ಸೀನ್‌ಗಳಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಹೊಸದಾಗಿ ಡಬ್ ಮಾಡಿದ್ದಾರೆ. ಆ ಪೋಟೊನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಜನಿಕಾಂತ್ ಕಥೆ-ಚಿತ್ರಕಥೆ
'ಬಾಬಾ' ಸಿನಿಮಾಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದರು. ಅಲ್ಲದೆ 'ಬಾಬಾ' ಸಿನಿಮಾ ನಿರ್ಮಾಣ ಕೂಡ ಮಾಡಿದ್ದರು. ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಸಿನಿಮಾವನ್ನು ಸೂಪರ್‌ಸ್ಟಾರ್ ಇಷ್ಟ ಪಟ್ಟು ನಿರ್ಮಾಣ ಮಾಡಿದ್ದರು. ಆದರೆ, ಅದ್ಯಾಕೋ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಿರಲಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತು ನೆಲಕ್ಕಚ್ಚಿತ್ತು. ಈಗ ಮತ್ತೆ 20 ವರ್ಷಗಳ ಬಳಿಕ ಇದೇ ಸಿನಿಮಾವನ್ನು ರಿ-ರಿಲೀಸ್ ಮಾಡುವುಕ್ಕೆ ಹೊರಟಿದ್ದಾರೆ. ಆದರೆ, ಮರುಬಿಡುಗಡೆ ಮಾಡುವುದಕ್ಕೆ ಅಸಲಿ ಕಾರಣವೇನು ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ.

ವಿತರಕರಿಗೆ ಹಣ ಹಿಂತಿರುಗಿಸಿದ್ದ ರಜನಿ
2002ರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾವನ್ನು ರಿಲೀಸ್ ಮಾಡಿದ್ದರು. ಸುರೇಶ್ ಕೃಷ್ಣ 'ಬಾಬಾ' ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, ಎ ಆರ್ ರೆಹಮಾನ್ ಸಂಗೀತ ನೀಡಿದ್ದರು. ಅಲ್ಲದೆ ರಜನಿಕಾಂತ್ ಜೊತೆ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಮನಿಷಾ ಕೋಯಿರಾಲ ನಟಿಸಿದ್ದರು. ಇಷ್ಟೆಲ್ಲಾ ಇದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು. ವಿತರಕರು ತುಂಬಾನೇ ನಷ್ಟ ಅನುಭವಿಸಿದ್ದರು. ಹೀಗಾಗಿ ರಜನಿಕಾಂತ್ ವಿತರಕ ನಷ್ಟವನ್ನು ಹಿಂತಿರುಗಿದ್ದರು.

'ಜೈಲರ್' ಶೂಟಿಂಗ್‌ನಲ್ಲಿ ಬ್ಯುಸಿ
ರಜನಿಕಾಂತ್ ಈಗ 'ಜೈಲರ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ದಳಪತಿ ವಿಜಯ್ ನಟಿಸಿದ್ದ 'ಬೀಸ್ಟ್' ಸಿನಿಮಾವನ್ನು ನಿರ್ದೇಶನ ಮಾಡಿದ್ದು ಇದೇ ನಿರ್ದೇಶಕ. ಈಗ ರಜನಿಕಾಂತ್ ಹೊಸ ಸಿನಿಮಾದಲ್ಲಿ 'ಜೈಲರ್' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು, ಏಪ್ರಿಲ್ 14ರಂದು ಬಿಡುಗಡೆ ಸಿನಿಮಾ ಸಜ್ಜಾಗಿದೆ.