'ಸೂರರೈ ಪೊಟ್ರು' ಚಿತ್ರಕ್ಕಾಗಿ ಮೋಹನ್ ಬಾಬುಗೆ ಅಪ್ರೋಚ್ ಮಾಡಿದ್ದು ಯಾರು?
ತಮಿಳು ನಟ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ರೇಕ್ಷಕರ ಜೊತೆಗೆ ಇಂಡಸ್ಟ್ರಿಯಿಂದಲೂ ಈ ಸಿನಿಮಾ ಮೆಚ್ಚುಗೆ ಪಡೆದಿದೆ.
Recommended Video
ಈ ಚಿತ್ರದ ಸಕ್ಸಸ್ ಮೂಲಕ ತೆಲುಗು ನಟ ಮೋಹನ್ ಬಾಬು ಸಿನಿ ಜಗತ್ತಿನಲ್ಲಿ 45 ವರ್ಷ ಪೂರೈಸಿದ್ದಾರೆ. ಈ ವಿಶೇಷವಾಗಿ ಸೂರ್ಯ ಮತ್ತು ಸೂರರೈ ಪೊಟ್ರು ಚಿತ್ರತಂಡ ಟ್ರಿಬ್ಯೂಟ್ ಸಲ್ಲಿಸಿದೆ.
ಮೋಹನ್ ಅವರ ಸಿನಿ ಜರ್ನಿ ಹಾಗೂ ಸೂರರೈ ಪೊಟ್ರು ಚಿತ್ರದಲ್ಲಿ ಅವರ ನಟಿಸಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಶುಭಕೋರಿದೆ. ನಟ ಸೂರ್ಯ ಅವರು ಮೋಹನ್ ಬಾಬು ಅವರ ಜೊತೆಗಿನ ಶೂಟಿಂಗ್ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಈ ಪಾತ್ರಕ್ಕಾಗಿ ಕೆಲವರನ್ನು ಸಂಪರ್ಕಿಸಲಾಗಿತ್ತು. ಆದ್ರೆ, ಅವರು ಮಾಡಲ್ಲ ಎಂದು ಹೇಳಿದ್ದರು. ಮೋಹನ್ ಬಾಬು ಅವರನ್ನು ಹೇಗೆ ಕೇಳುವುದು ಎಂದು ಯೋಚಿಸುವ ವೇಳೆ ಅವರ ಮಗಳು ಲಕ್ಷ್ಮಿ ಮಂಚುಗೆ ವಿಷಯ ತಿಳಿಸಿ ಭೇಟಿ ಮಾಡಿದೆವು. ಮೋಹನ್ ಬಾಬು ಅವರು ಸಹ ಕಥೆ ಕೇಳಿ ''ನಾನು ಮಾಡ್ತೀನಿ'' ಅಂತ ಒಪ್ಪಿಕೊಂಡರು ಎಂದು ಸೂರ್ಯ ತಿಳಿಸಿದ್ದಾರೆ.
''ಸೆಟ್‌ನಲ್ಲಿ ಅವರಿಂದ ಕಲಿಯುವುದು ತುಂಬಾ ಇದೆ. ಒಬ್ಬ ವಿದ್ಯಾರ್ಥಿಯಂತೆ ಬಂದು ನಿಲ್ಲುತ್ತಿದ್ದರು. ಪ್ರತಿ ದೃಶ್ಯದ ಬಳಿಕಯೂ ಇದು ಓಕೆನಾ ಅದು ಓಕೆನಾ ಎಂದು ಕೇಳುತ್ತಿದ್ದರು. ಅವರ ಈ ಗುಣ ನಮ್ಮ ಹೃದಯ ಮುಟ್ಟಿದೆ'' ಎಂದು ನಟ ಸೂರ್ಯ ಹೇಳಿಕೊಂಡಿದ್ದಾರೆ.
ಇನ್ನು ಸೂರರೈ ಪೊಟ್ರು ಚಿತ್ರದಲ್ಲಿ ಮೋಹನ್ ಬಾಬು ಚೀಫ್ ಏರ್ ಮಾರ್ಷಲ್ ಪಾತ್ರದಲ್ಲಿ ನಟಿಸಿದ್ದಾರೆ. ಸುಧಾ ಕೊಂಗರಾ ಈ ಚಿತ್ರ ನಿರ್ದೇಶಿಸಿದ್ದು, ಸೂರ್ಯ, ಅಪರ್ಣ, ಪರೇಶ್ ರಾವತ್, ಊರ್ವಶಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











