ಫೋಟೋ ವೈರಲ್: ಅಭಿಮಾನಿ ಮದುವೆಗೆ ಹಾಜರಾಗಿ ಶುಭಕೋರಿದ ನಟ ಸೂರ್ಯ
ಕಾಲಿವುಡ್ ನಟ ಸೂರ್ಯ ಇತ್ತೀಚಿಗೆ ಸೂರರೈ ಪೊಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸೂರರೈ ಪೊಟ್ರು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಸಿನಿಮಾವಾಗಿದೆ. ಈ ಸಿನಿಮಾ ಮೂಲಕ ಸೂರ್ಯ ಖ್ಯಾತಿ ಮತ್ತಷ್ಟು ಹೆಚ್ಚಿಸಿದೆ.
ಕಾಲಿವುಡ್ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿ ಬಳಗ ಹೊಂದಿದ್ದಾರೆ ನಟ ಸೂರ್ಯ. ಕಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ನಟ ಸೂರ್ಯ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಭಿಮಾನಿಗಳ ನೆಚ್ಚಿನ ನಟ ಸೂರ್ಯ ಇತ್ತೀಚಿಗೆ ಅಭಿಮಾನಿಯೊಬ್ಬರ ಮದುವೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸೂರ್ಯ ಅವರ ಡೈ ಹಾರ್ಡ್ ಫ್ಯಾನ್ ಹರಿ ಮತ್ತು ಪ್ರಿಯಾ ಅವರ ಮದುವೆಗೆ ಹಾಜರಾಗಿದ್ದಾರೆ. ಸಾರ್ಯ, ಅಭಿಮಾನಿ ಮತ್ತು ಮದುಮಗ ಹರಿ ಅವರ ಪಕ್ಕದಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಈ ಫೋಟೋ ಸೂರ್ಯ ಅಭಿಮಾನಿ ಬಳಗದಲ್ಲಿ ಹರಿದಾಡುತ್ತಿದೆ.

ಅಭಿಮಾನಿಯ ಮದುವೆಯಲ್ಲಿ ಭಾಗಿಯಾಗಿರುವ ಸೂರ್ಯ ಅವರ ಒಂದಿಷ್ಟು ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೂರ್ಯ ಸದ್ಯ ನಿರ್ದೇಶಕ ಮಣಿರತ್ನಂ ಅವರ ನವರಸ ವೆಬ್ ಸೀರಿಸ್ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೂ ಸೂರ್ಯ 45ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











