For Quick Alerts
  ALLOW NOTIFICATIONS  
  For Daily Alerts

  ನಟಿ ಹೀರಾ ಜೊತೆ ತಲಾ ಅಜಿತ್ ಲವ್: ಬ್ರೇಕ್ ಅಪ್ ಆಗಿದ್ದು ಏಕೆ?

  |

  ತಮಿಳು ಇಂಡಸ್ಟ್ರಿಯ ಮಾಸ್ ಮಹಾರಾಜ ಅಂದ್ರೆ ತಲಾ ಅಜಿತ್. ರಜನಿಕಾಂತ್ ಬಳಿಕ ಅಷ್ಟು ದೊಡ್ಡ ಕ್ರೇಜ್ ಹುಟ್ಟುಹಾಕಿರುವ ಅಜಿತ್, ಮುಂದಿನ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಭೇಟಿ ನೀಡದ ಕೆಲವೇ ನಟರಲ್ಲಿ ಅಜಿತ್ ಸಹ ಒಬ್ಬರು. ಆದರೂ, ಅಜಿತ್ ಸಿನಿಮಾಗಳು ಅಂದ್ರೆ ಬಹುದೊಡ್ಡ ಕ್ರೇಜ್ ಇಂಡಸ್ಟ್ರಿಯಲ್ಲಿದೆ.

  ಖಾಸಗಿ ಜೀವನದ ಬಗ್ಗೆ ನೋಡುವುದಾದರೆ 2000ನೇ ವರ್ಷದಲ್ಲಿ ಶಾಲಿನಿ ಜೊತೆ ಅಜಿತ್ ಮದುವೆಯಾದರು. ಅಜಿತ್ ಮತ್ತು ಶಾಲಿನಿ ದಂಪತಿಗೆ ಇಬ್ಬರು ಮಕ್ಕಳು. ಎಲ್ಲೂ ಗಾಸಿಪ್ ಸಿಲುಕದ ನಟ ಮದುವೆಗೂ ಮುಂಚೆ ಸ್ಟಾರ್ ನಟಿ ಹೀರಾ ರಾಜ್‌ಗೋಪಾಲ್ ಅವರನ್ನು ಪ್ರೀತಿಸುತ್ತಿದ್ದರು ಎಂಬ ವಿಷಯ ಸ್ಮರಿಸಬಹುದು. ಮುಂದೆ ಓದಿ....

  ಹೀರಾ ಜೊತೆ ಅಜಿತ್ ಲವ್

  ಹೀರಾ ಜೊತೆ ಅಜಿತ್ ಲವ್

  1990ರಲ್ಲಿ ನಟ ಅಜಿತ್ ಕುಮಾರ್ ಮತ್ತು ಹೀರಾ ರಾಜ್‌ಗೋಪಾಲ್ ಸಂಬಂಧದ ಕುರಿತು ವರದಿಯಾಗಿದ್ದವು. ಅಜಿತ್ ಮತ್ತು ಹೀರಾ ಲವ್ವಲ್ಲಿ ಇದ್ದಾರೆ, ಇಬ್ಬರು ಮದುವೆಯಾಗಬಹುದು ಎಂದೆಲ್ಲ ಸುದ್ದಿಗಳು ಪ್ರಕಟವಾಗಿದ್ದವು.

  ಚಿತ್ರೀಕರಣ ವೇಳೆ ಗಾಯಗೊಂಡ ನಟ ಅಜಿತ್; ಹೈದರಾಬಾದ್ ನಲ್ಲಿ ಚಿಕಿತ್ಸೆ

  ಮೊದಲ ಸಿನಿಮಾದಲ್ಲಿ ಪರಿಚಯ

  ಮೊದಲ ಸಿನಿಮಾದಲ್ಲಿ ಪರಿಚಯ

  'ಕಾದಲ್ ಕೋಟೈ' ಚಿತ್ರೀಕರಣದ ವೇಳೆ ಅಜಿತ್ ಮತ್ತು ಹೀರಾ ರಾಜ್‌ಗೋಪಾಲ್ ನಡುವೆ ಸ್ನೇಹ ಬೆಳೆಯಿತು. ಈ ಸ್ನೇಹ ಪ್ರೀತಿಗೆ ತಿರುಗಿತ್ತಂತೆ. ಶೂಟಿಂಗ್ ಸೆಟ್‌ನಲ್ಲಿ ಅಜಿತ್ ಅವರು ಹೀರಾಗೆ ಪ್ರೇಮ ಪತ್ರ ಸಹ ಬರೆದಿದ್ದರಂತೆ. ಈ ವಿಚಾರವನ್ನು ಪೋಷಕ ನಟರೊಬ್ಬರು ಹೇಳಿಕೊಂಡಿದ್ದರು.

  ಹೀರಾ ತಾಯಿ ವಿರೋಧ

  ಹೀರಾ ತಾಯಿ ವಿರೋಧ

  ಅಷ್ಟೋತ್ತಿಗಾಲೇ ಹೀರಾ ರಾಜ್‌ ಗೋಪಾಲ್ ದೊಡ್ಡ ನಟಿಯಾಗುವ ಭರವಸೆ ಹುಟ್ಟುಹಾಕಿದ್ದರು. ಅಜಿತ್ ಜೊತೆಗಿನ ಸಂಬಂಧಕ್ಕೆ ಹೀರಾ ತಾಯಿ ವಿರೋಧ ಇದ್ದರಂತೆ. ಮಗಳ ವೃತ್ತಿ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಮದುವೆ ಖಂಡಿಸಿದ್ದರಂತೆ. ಆ ನಂತರ ಹೀರಾ ಅವರ ವರ್ತನೆಯೂ ಅಜಿತ್ ಅವರಿಗೆ ಇಷ್ಟ ಆಗಲಿಲ್ಲ ಎಂದು ವರದಿಯಾಗಿದೆ. ಈ ಬೆಳವಣಿಗೆ ಬಳಿಕ ಅಜಿತ್ ಸಹ ಹೀರಾ ಜೊತೆಗಿನ ಸಂಬಂಧ ಮುರಿದುಕೊಂಡರು.

  ಇವರ ಧೈರ್ಯವನ್ನು ನಾವು ಮೆಚ್ಚಲೇ ಬೇಕು | Neethu Shetty | Filmibeat Kannada
  ನಟಿ ಶಾಲಿನಿ ಜೊತೆ ವಿವಾಹ

  ನಟಿ ಶಾಲಿನಿ ಜೊತೆ ವಿವಾಹ

  2000ನೇ ವರ್ಷದಲ್ಲಿ ನಟಿ ಶಾಲಿನಿ ಜೊತೆ ಅಜಿತ್ ವಿವಾಹವಾದರು. ಇವರಿಬ್ಬರ ಸುಖಕರ ದಾಂಪತ್ಯದ ಪ್ರತೀಕವಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ಶಾಲಿನಿ ಮತ್ತು ಅಜಿತ್ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಶಾಲಿನಿ ನಟನೆ ನಿಲ್ಲಿಸಿದರು.

  English summary
  Flashback: Tamil actor Ajith kumar was wrote love letter to actress heera rajagopal in shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X