For Quick Alerts
  ALLOW NOTIFICATIONS  
  For Daily Alerts

  ಒಂದೂವರೆ ವರ್ಷ ಸಿನಿಮಾ ಮಾಡಲ್ಲ? ಅಜಿತ್ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್!

  |

  ತಮ್ಮ ವಿಭಿನ್ನ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ತಮಿಳು ನಟ ಅಜಿತ್ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. 'ವೀರಂ' ನಟನ ಬೈಕ್ ಕ್ರೇಜ್ ಬಗ್ಗೆ ಗೊತ್ತೇಯಿದೆ. ಬೈಕ್ ಏರಿ ವಾರಗಳಗಟ್ಟಲೆ ಸುತ್ತಾಡುತ್ತಿರುತ್ತಾರೆ. ಇದೀಗ ಬೈಕ್‌ನಲ್ಲಿ ಪ್ರಪಂಚ ಪರ್ಯಟನೆಗೆ ಕಾಲಿವುಡ್ ನಟ ಮುಂದಾಗಿದ್ದಾರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

  ಬೈಕ್‌ನಲ್ಲಿ ಅಜಿತ್ ಸಾಕಷ್ಟು ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇತ್ತೀಚೆಗೆ 'ವಾಲಿಮೈ' ಚಿತ್ರದಲ್ಲೂ ಇಂಥದ್ದೇ ಸಾಹಸ ಮಾಡಿದ್ದರು. ಶೂಟಿಂಗ್ ವೇಳೆ ಬೈಕ್‌ನಿಂದ ಬಿದ್ದಿದ್ದರು. ನಂತರ ಬೈಕ್ ಏರಿ ಮತ್ತೆ ಆ ಸೀನ್‌ನಲ್ಲಿ ನಟಿಸಿ ಗೆದ್ದಿದ್ದರು. ಇತ್ತೀಚೆಗೆ 'ತುನಿವು' ಸಿನಿಮಾ ಶೂಟಿಂಗ್ ನಡುವೆಯೇ ಸ್ನೇಹಿತರ ಜೊತೆ ಲಡಾಕ್‌ಗೆ ಬೈಕ್ ಟ್ರಿಪ್ ಹೋಗಿ ಬಂದಿದ್ದರು. ಬೈಕ್ ರಿಪೇರಿಯಾಗಿ ಸಹಾಯ ಕೇಳಿದ್ದ ಕನ್ನಡಿಗ ಬೈಕ್ ರೈಡರ್‌ ಮಂಜು ಕಶ್ಯಪ್ ಎಂಬುವವರಿಗೆ ಖುದ್ದು ನಟ ಅಜಿತ್ ಸಹಾಯ ಮಾಡಿದ್ದರು.

  ಲಡಾಖ್‌ನಲ್ಲಿ ಕೆಟ್ಟು ನಿಂತಿದ್ದ ಕನ್ನಡಿಗನ ಬೈಕ್ ಸರಿಪಡಿಸಿ ಸಹಾಯ ಮಾಡಿದ ತಮಿಳು ನಟ ಅಜಿತ್ಲಡಾಖ್‌ನಲ್ಲಿ ಕೆಟ್ಟು ನಿಂತಿದ್ದ ಕನ್ನಡಿಗನ ಬೈಕ್ ಸರಿಪಡಿಸಿ ಸಹಾಯ ಮಾಡಿದ ತಮಿಳು ನಟ ಅಜಿತ್

  ನಟ ಅಜಿತ್ ಈಗ ಬೈಕ್ ಏರಿ ಪ್ರಪಂಚ ಪರ್ಯಟನೆಗೆ ಮನಸ್ಸು ಮಾಡಿದ್ದಾರಂತೆ. ಇದು ಒಂದೆರಡು ವಾರದ ಬೈಕ್ ಟ್ರಿಪ್ ಅಲ್ಲವೇ ಅಲ್ಲ. ಬರೋಬ್ಬರಿ ಒಂದೂವರೆ ವರ್ಷದ ದೊಡ್ಡ ಟ್ರಿಪ್. ಈ ಸುದ್ದಿ ಅಜಿತ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

  7 ಖಂಡ.. 62 ದೇಶ.. 18 ತಿಂಗಳು ಬೈಕ್

  7 ಖಂಡ.. 62 ದೇಶ.. 18 ತಿಂಗಳು ಬೈಕ್

  ನಟ ಅಜಿತ್ ಬಿಡುವು ಸಿಕ್ಕಾಗಲೆಲ್ಲಾ ಬೈಕ್ ಏರಿ ದೇಶದ ಮೂಲೆ ಮೂಲೆಗೆ ಟ್ರಿಪ್ ಹೋಗುತ್ತಿರುತ್ತಾರೆ. ಆದರೆ ಇದೀಗ ಬರೋಬ್ಬರಿ 18 ತಿಂಗಳ ಕಾಲ ಬೈಕ್ ಏರಿ ಪ್ರಪಂಚ ಪರ್ಯಟನೆಗೆ ಮುಂದಾಗಿದ್ದಾರಂತೆ. 7 ಖಂಡಗಳ ಸುತ್ತಾ 16 ದೇಶಗಳಲ್ಲಿ ಬೈಕ್ ಸವಾರಿಗೆ ಮನಸ್ಸು ಮಾಡಿದ್ದಾರಂತೆ. ಹೀಗೊಂದು ಸುದ್ದಿ ಕಾಲಿವುಡ್‌ನಲ್ಲಿ ಚಕ್ಕರ್ ಹೊಡೀತಿದೆ. ಈ ಸುದ್ದಿ ಕೇಳಿ ಕೆಲ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕಾಲಿವುಡ್ ಮಂದಿ ಕೂಡ ಶಾಕ್ ಆಗಿದ್ದಾರೆ.

  ಥಲಾ ಅಜಿತ್ ಮುಂದಿನ ಸಿನಿಮಾ 'ತುನಿವು': ಈ ಟೈಟಲ್ ಅರ್ಥ ಏನು?

  ಅಜಿತ್ ಬೈಕ್ ಟ್ರಿಪ್ ಸುದ್ದಿ ಕೇಳಿ ಫ್ಯಾನ್ಸ್ ಶಾಕ್

  ಅಜಿತ್ ಬೈಕ್ ಟ್ರಿಪ್ ಸುದ್ದಿ ಕೇಳಿ ಫ್ಯಾನ್ಸ್ ಶಾಕ್

  ಅಭಿಮಾನಿಗಳು ಥಲಾ ಅಂತಲೇ ನೆಚ್ಚಿನ ನಟನನ್ನು ಕರೆಯುತ್ತಾರೆ. ಅಜಿತ್ ಸಿನಿಮಾ ಬಂದರೆ ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಆದರೆ ಅಜಿತ್ ಈಗ 18 ತಿಂಗಳು ಬಿಡುವು ಮಾಡಿಕೊಂಡು ಬೈಕ್ ಟ್ರಿಪ್ ಹೋಗುತ್ತಾರೆ ಎನ್ನುವ ಸುದ್ದಿ ಬೇಸರ ತರಿಸಿದೆ. ವರ್ಷಕ್ಕೆ ಒಂದು ಸಿನಿಮಾ ಮಾಡುವ ಅಜಿತ್ ಈ ರೀತಿ ಒಂದೂವರೆ ವರ್ಷ ಸಿನಿಮಾ ಮಾಡದೇ ಇದ್ದರೆ ಹೇಗೆ ಎನ್ನುತ್ತಿದ್ದಾರೆ. ಅಜಿತ್ ಮಾತ್ರ ನಾಲ್ಕೈದು ಜನ ಬೈಕ್ ಹವ್ಯಾಸಿ ಬೈಕರ್‌ಗಳ ಜೊತೆ ಪ್ರಪಂಚ ಸುತ್ತಾಡಲು ಚಿಂತನೆ ನಡೆಸಿದ್ದಾರಂತೆ.

  ಕನ್ನಡಿಗನಿಗೆ ಲಡಾಕ್‌ನಲ್ಲಿ ಥಲಾ ಸಹಾಯ

  ಕನ್ನಡಿಗನಿಗೆ ಲಡಾಕ್‌ನಲ್ಲಿ ಥಲಾ ಸಹಾಯ

  ಮಂಜು ಕಶ್ಯಪ್ ಎಂಬ ಕನ್ನಡಿಗ ತಮ್ಮ ಬಿಎಂಡಬ್ಲ್ಯೂ ಬೈಕ್ ಏರಿ ಲಡಾಕ್‌ಗೆ ಬೈಕ್ ಟ್ರಿಪ್ ಹೋಗಿದ್ದರು. ಆದರೆ ಲಡಾಖ್ ತಲುಪುವ ಮುನ್ನವೇ ಮಂಜು ಕಶ್ಯಪ್ ಅವರ ಬೈಕ್‌ನ ಟೈರ್ ಗಾಳಿ ಖಾಲಿಯಾಗಿ ಕೈಕೊಟ್ಟಿತ್ತು. ಈ ಸಂದರ್ಭದಲ್ಲಿ ಅಲ್ಲಿಯೇ ಬೈಕ್‌ನಲ್ಲಿ ತೆರಳುತ್ತಿದ್ದವರ ಬಳಿ ಮಂಜು ಸಹಾಯ ಕೇಳಿದ್ದಾರೆ.ಈ ಸಂದರ್ಭದಲ್ಲಿ ಬೈಕ್ ನಿಲ್ಲಿಸಿದ ನಟ ಅಜಿತ್ ತಾವೇ ಬಂದು ಟೈರಿಗೆ ಗಾಳಿ ತುಂಬಿಸಲು ಸಹಾಯ ಮಾಡಿದ್ದಾರೆ ಹಾಗೂ ಆತನ ಜತೆ ಕೆಲ ದೂರದವರೆಗೆ ಬೈಕ್ ರೈಡ್‌ನಲ್ಲಿಯೂ ಕೂಡ ಭಾಗಿಯಾಗಿದ್ದಾರೆ. ಈ ವಿಷಯವನ್ನು ಸ್ವತಃ ಮಂಜು ಕಶ್ಯಪ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಡೆದ ಸಂಪೂರ್ಣ ಘಟನೆಯನ್ನು ಬರೆದುಕೊಂಡಿದ್ದರು.

  ಸಂಕ್ರಾಂತಿ ಹಬ್ಬಕ್ಕೆ 'ತುನಿವು' ರಿಲೀಸ್

  ಸಂಕ್ರಾಂತಿ ಹಬ್ಬಕ್ಕೆ 'ತುನಿವು' ರಿಲೀಸ್

  ಥಲಾ ಅಜಿತ್ ನಟನೆಯ 62ನೇ ಸಿನಿಮಾ 'ತುನಿವು'. ಬೋನಿ ಕಪೂರ್ ನಿರ್ಮಾಣದ ಈ ಚಿತ್ರವನ್ನು ವಿನೋದ್ ನಿರ್ದೇಶನ್ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಅಜಿತ್ ಮಾಸ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಸಿನಿಮಾ ರಿಲೀಸ್ ನಂತರ ನಟ ಅಜಿತ್ ವರ್ಲ್ಡ್ ಬೈಕ್ ಟೂರ್ ಪ್ಲ್ಯಾನ್ ಮಾಡಿದ್ದಾರಂತೆ.

  English summary
  Tamil Actor Ajith to go on a World Bike Tour for 18 months after Thunivu shoot. Ajith Will Be Wrapping Up His Thunivu Movie In Early Next Year and Set Off On A Bike Trip, a World Tour With 3 More Bikers Across 7 Continents. Know More.
  Thursday, October 20, 2022, 15:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X