For Quick Alerts
  ALLOW NOTIFICATIONS  
  For Daily Alerts

  ಕಾರ್ತಿ ಫೇಸ್‌ಬುಕ್ ಹ್ಯಾಕ್ ಮಾಡಿ ಗೇಮ್ ಆಡಿದ ಹ್ಯಾಕರ್ಸ್; ನಿರ್ದೇಶಕನ ಆಡಿದ ಆ ಮಾತಿನಿಂದ ಇಷ್ಟೆಲ್ಲಾ?

  |

  ತಮಿಳಿನ ಸ್ಟಾರ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ನಟ ಕಾರ್ತಿ ಸದ್ಯ ಸಾಲು ಸಾಲು ಚಿತ್ರಗಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಾರ್ತಿ ಅಭಿನಯದ ಸರ್ದಾರ್ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಚಿತ್ರ ಈಗಾಗಲೇ ನೂರು ಕೋಟಿ ಕ್ಲಬ್ ಸೇರಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿ ಭಾರತ ದೇಶದ ಸ್ಪೈ ಏಜೆಂಟ್ ಆಗಿ ಹಾಗೂ ಪೊಲೀಸ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಾರ್ತಿ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಹ್ಯಾಕರ್ಸ್ ಇಂದು ( ನವೆಂಬರ್ 14 ) ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿದ ನಂತರ ಕಾರ್ತಿ ಎಂಬ ಕ್ಯಾಪ್ಷನ್ ಬಳಸಿ ಲೈವ್ ವಿಡಿಯೊ ಹರಿಬಿಟ್ಟಿರುವ ಕಿಡಿಗೇಡಿಗಳು ಆನ್‌ಲೈನ್ ಗೇಮ್ ಆಡಿದ್ದಾರೆ. ಹೀಗೆ ನಟನ ಖಾತೆಯಲ್ಲಿ ಆನ್‌ಲೈನ್ ಗೇಮ್ ಲೈವ್ ಸ್ಟ್ರೀಮ್ ಆಗುತ್ತಿದ್ದನ್ನು ಕಂಡ ನೆಟ್ಟಿಗರು ಕೆಲಕಾಲ ಆಶ್ಚರ್ಯ ಹಾಗೂ ಗೊಂದಲಕ್ಕೊಳಗಾಗಿದ್ದರು ಹಾಗೂ ನಟನ ಖಾತೆ ಹ್ಯಾಕ್ ಆಗಿರಬಹುದು ಎಂದು ಕಾಮೆಂಟ್ ಮಾಡತೊಡಗಿದರು.

  ಇನ್ನು ದೇಶದಲ್ಲಿ ಹೇಗೆ ಖಾಸಗಿ ಒಡೆತನದ ನೀರಿನ ಕಂಪೆನಿಗಳು ವಾಟರ್ ಮಾಫಿಯಾವನ್ನು ನಡೆಸುತ್ತಿವೆ, ಇದೇ ರೀತಿ ಮುಂದೊಂದು ದಿನ ಈ ಮಾಫಿಯಾ ಎಷ್ಟು ದೊಡ್ಡ ಮಟ್ಟಕ್ಕೆ ತಲುಪಿ ಜನಸಾಮಾನ್ಯರಿಗೆ ತೊಂದರೆಯಾಗಬಹುದು, ಉಚಿತವಾಗಿ ಸಿಗುತ್ತಿರುವ ನೀರಿಗೆ ಮುಂದೆ ಹಣ ನೀಡಿ ಖರೀದಿಸಬೇಕಾಗಿ ಬರಬಹುದು ಎಂಬುದನ್ನು ನಿರ್ದೇಶಕ ಪಿ ಎಸ್ ಮಿತ್ರನ್ ಕತೆ ಸರ್ದಾರ್ ಚಿತ್ರದ ಮೂಲಕ ಬಿಡಿಸಿ ಹೇಳಿದ್ದರು. ಹೀಗೆ ಸಮಾಜಕ್ಕೆ ಭಿನ್ನ ವಿಭಿನ್ನ ಸಂದೇಶವನ್ನು ನೀಡುವ ನಿರ್ದೇಶಕ ಮಿತ್ರನ್ ಇದೇ ಸರ್ದಾರ್ ಚಿತ್ರದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳೇ ಈಗ ಕಾರ್ತಿ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಲು ಕಾರಣವಾಯಿತಾ ಎಂಬ ಚರ್ಚೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.

  ಸರ್ದಾರ್ ಪ್ರಚಾರದ ವೇಳೆ ಹ್ಯಾಕಿಂಗ್ ಕತೆ!

  ಸರ್ದಾರ್ ಪ್ರಚಾರದ ವೇಳೆ ಹ್ಯಾಕಿಂಗ್ ಕತೆ!

  ಸರ್ದಾರ್ ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳಿರುವ ಮಿತ್ರನ್ ಈ ಹಿಂದೆ ನಟ ವಿಶಾಲ್‌ಗೆ ಇರುಂಬುದಿರೈ ಎಂಬ ಸೈಬರ್ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಹ್ಯಾಕಿಂಗ್ ಸೈಬರ್ ಕ್ರೈಮ್ ಬಗ್ಗೆ ವಿವರವಾಗಿ ತೋರಿಸಲಾಗಿತ್ತು. ನಂತರ ಸರ್ದಾರ್ ಚಿತ್ರದ ಪ್ರಚಾರದ ವೇಳೆ ಕೂಡ ಮಿತ್ರನ್ ಈ ಹ್ಯಾಕಿಂಗ್ ವಿಚಾರದ ಬಗ್ಗೆ ಮಾತನಾಡಿದ್ದರು ಹಾಗೂ ಹ್ಯಾಕಿಂಗ್ ಕುರಿತಾದ ಕೆಲ ಆಸಕ್ತಿಯುತ ವಿಚಾರಗಳನ್ನು ಬಿಚ್ಚಿಟ್ಟಿದ್ದರು. ಈ ಕಾರಣದಿಂದಾಗಿಯೇ ಹ್ಯಾಕರ್ಸ್ ಮಿತ್ರನ್ ನಿರ್ದೇಶನದ ಸದ್ಯದ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನಟಿಸಿರುವ ನಟ ಕಾರ್ತಿ ಫೇಸ್‌ಬುಕ್ ಹ್ಯಾಕ್ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಊಹೆಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.

  ಖಾತೆ ಹ್ಯಾಕ್ ಆಗಿದೆ ಎಂದ ಕಾರ್ತಿ

  ಖಾತೆ ಹ್ಯಾಕ್ ಆಗಿದೆ ಎಂದ ಕಾರ್ತಿ

  ಇನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಗೇಮಿಂಗ್ ಲೈವ್ ಆರಂಭವಾದ ಬೆನ್ನಲ್ಲೇ ನಟ ಕಾರ್ತಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಹ್ಯಾಕ್ ಆಗಿರುವ ವಿಷಯವನ್ನು ತಿಳಿಸಿದ್ದಾರೆ ಹಾಗೂ ಎಲ್ಲವನ್ನೂ ಸರಿಪಡಿಸುವತ್ತ ತಮ್ಮ ಫೇಸ್‌ಬುಕ್ ತಂಡ ಕೆಲಸ ಮಾಡುತ್ತಿದೆ ಎಂದೂ ಸಹ ಕಾರ್ತಿ ಇದೇ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  ಹ್ಯಾಕ್ ಟ್ವೀಟ್ ಬೆನ್ನಲ್ಲೇ ಸರ್ದಾರ್ 25 ದಿನದ ಪೋಸ್ಟರ್

  ಹ್ಯಾಕ್ ಟ್ವೀಟ್ ಬೆನ್ನಲ್ಲೇ ಸರ್ದಾರ್ 25 ದಿನದ ಪೋಸ್ಟರ್

  ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಕುರಿತು ಟ್ವೀಟ್ ಮಾಡಿದ ನಟ ಕಾರ್ತಿ ಅದರ ಬೆನ್ನಲ್ಲೇ ಸರ್ದಾರ್ ಚಿತ್ರ 25 ದಿನಗಳನ್ನು ಪೂರೈಸಿದ ಪೋಸ್ಟರ್ ಹಂಚಿಕೊಂಡಿದ್ದಾರೆ. ಕಾರ್ತಿ ಫೇಸ್‌ಬುಕ್ ಪೇಜ್ ಹ್ಯಾಕ್ ಆಗುವ ಮುನ್ನ ತಮ್ಮ ಮುಂದಿನ ಚಿತ್ರ ಜಪಾನ್ ಕುರಿತು ಪೋಸ್ಟ್‌ ಹಂಚಿಕೊಂಡಿದ್ದರು.

  English summary
  Tamil actor Karthi's facebook page has been hacked. Read on
  Monday, November 14, 2022, 16:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X