twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ನಮಗೆ ನ್ಯೂಯಾರ್ಕ್ ಸಿಟಿ.. ಅಣ್ಣಾವ್ರ ಐತಿಹಾಸಿಕ ಚಿತ್ರಗಳು ಅದ್ಭುತ.. ಉಪೇಂದ್ರ ಸರ್‌ಗೆ ಥ್ಯಾಂಕ್ಸ್: ಕಾರ್ತಿ

    |

    'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಇಂದು(ಸೆಪ್ಟೆಂಬರ್ 22) ಬೆಂಗಳೂರಿಗೆ ಬಂದಿತ್ತು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ನಟ ಕಾರ್ತಿ ಮಾತನಾಡುತ್ತಾ ಚಿಕ್ಕಂದಿನಲ್ಲಿ ನಮಗೆ ಬೆಂಗಳೂರಿ ನ್ಯೂಯಾರ್ಕ್ ಸಿಟಿ ರೀತಿ ಅನ್ನಿಸುತ್ತಿತ್ತು ಎಂದಿದ್ದಾರೆ. ಅಣ್ಣಾವ್ರ ಪೌರಾಣಿಕ ಸಿನಿಮಾಗಳ ಬಗ್ಗೆ ಕೂಡ ಮಾತನಾಡಿದ್ದಾರೆ.

    ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯಿನ್ ಸೆಲ್ವನ್'. ಐತಿಹಾಸಿಕ ಕಥಾಹಂದರದ ಈ ಅದ್ಧೂರಿ ಚಿತ್ರದಲ್ಲಿ ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯ ರೈ, ತ್ರಿಶಾ ಸೇರಿದಂತೆ ಖ್ಯಾತ ತಮಿಳು ಕಲಾವಿದರು ನಟಿಸಿದ್ದಾರೆ. ಸೆಪ್ಟೆಂಬರ್ 30ಕ್ಕೆ ಸಿನಿಮಾ ವಿಶ್ವದಾದ್ಯಂತ 5 ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ವಲ್ಲವರಾಯನ್ ವಂದಿಯದೇವನ್ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

    ಧೂಳೆಬ್ಬಿಸಿದ 'ಪೊನ್ನಿಯಿನ್ ಸೆಲ್ವನ್' ಟೀಸರ್!ಧೂಳೆಬ್ಬಿಸಿದ 'ಪೊನ್ನಿಯಿನ್ ಸೆಲ್ವನ್' ಟೀಸರ್!

    ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್‌ ಸೆಲ್ವನ್' ಕಾದಂಬರಿಯೇ ಈ ಚಿತ್ರಕ್ಕಾ ಆಧಾರ. ಈ ಚಿತ್ರದಲ್ಲಿ 1000 ವರ್ಷಗಳ ಹಿಂದಿನ ಚೋಳ ರಾಜರ ಕಥೆಯನ್ನು ಮಣಿರತ್ನಂ ಹೇಳಿದ್ದಾರೆ. ಭರ್ಜರಿ ವಾರ್ ಸೀಕ್ವೆನ್ಸ್ ಜೊತೆಗೆ ಚಿತ್ರ ಭಾರೀ ಕುತೂಹಲ ಮೂಡಿಸಿದೆ.

    ಬೆಂಗಳೂರು ನಮಗೆ ನ್ಯೂಯಾರ್ಕ್ ಸಿಟಿ

    ಬೆಂಗಳೂರು ನಮಗೆ ನ್ಯೂಯಾರ್ಕ್ ಸಿಟಿ

    "ಎಲ್ಲರಿಗೂ ನಮಸ್ಕಾರ. ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷ" ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಕಾರ್ತಿ "ಬೆಂಗಳೂರಿಗೆ ಬರ್ತಿದ್ದಂತೆ ನನಗೆ ನನ್ನ ಕಾಲೇಜು ದಿನಗಳು ನೆನಪಾಯ್ತು. ಬೆಂಗಳೂರು ಸಿಟಿ ನಮಗೆ ಆಗ ನ್ಯೂಯಾರ್ಕ್ ಸಿಟಿ ರೀತಿ ಇತ್ತು. ಇಂಗ್ಲೀಷ್ ಸಿನಿಮಾಗಳಲ್ಲಿ 6 ತಿಂಗಳು ಮೊದಲೇ ಇಲ್ಲಿ ರಿಲೀಸ್ ಆಗ್ತಿತ್ತು. ಒಳ್ಳೆ ಬಟ್ಟೆ ಇಲ್ಲಿ ಸಿಗುತ್ತಿತ್ತು. ಕಂಬೈಂಡ್ ಸ್ಟಡಿ ಎಂದು ಮನೇಲಿ ಹೇಳಿ ಶುಕ್ರವಾರ ಕೊನೆ ಬಸ್ ಹಿಡಿದು ಬೆಂಗಳೂರಿಗೆ ಬರ್ತಿದ್ವಿ. ರೂಮ್ ಬುಕ್ ಮಾಡುತ್ತಿರಲಿಲ್ಲ ಯಾಕಂದ್ರೆ ತುಂಬಾ ದುಬಾರಿ ಇರ್ತಿತ್ತು. ನಗರವೆಲ್ಲಾ ಸುತ್ತಾಡಿ ಮತ್ತೆ ಬಸ್ ಹಿಡಿದು ಊರಿಗೆ ಹೋಗುತ್ತಿದ್ದೆವು. ಇಲ್ಲಿ ಬಂದು ಶಾಪಿಂಗ್ ಮಾಡುತ್ತಿದ್ದೆವು.

    ಎಂಜಿ ರೋಡ್‌ನಲ್ಲಿ ಬರೀ ವಿಂಡೋ ಶಾಪಿಂಗ್

    ಎಂಜಿ ರೋಡ್‌ನಲ್ಲಿ ಬರೀ ವಿಂಡೋ ಶಾಪಿಂಗ್

    "ಏನೇ ಬಂದರೂ ಮೊದಲು ಬೆಂಗಳೂರಿಗೆ ಬರ್ತಿತ್ತು. ನಂತರ ಚೆನ್ನೈಗೆ ಬರ್ತಿತ್ತು. ಎಂಜಿ ರೋಡ್‌ನಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದೆ. ಎಂಜಿ ರೋಡ್‌ನಲ್ಲಿ ಬರೀ ವಿಂಡೋ ಶಾಪಿಂಗ್. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್, ಯಾಕಂದ್ರೆ ಅಲ್ಲಿ ಎಲ್ಲಾ ಕಡಿಮೆ ಬೆಲೆ ಸಿಗುತ್ತಿತ್ತು. ಅಷ್ಟು ಒಳ್ಳೆಯ ನೆನಪುಗಳಿವೆ. ಹಾಗಾಗಿ ಬೆಂಗಳೂರಿಗೆ ಬಂದಿರೋದು ತುಂಬಾ ಖುಷಿಯಿದೆ. ಎಲ್ಲಾ ಇಂಡಸ್ಟ್ರಿಗಳಲ್ಲೂ ದೊಡ್ಡ ದೊಡ್ಡ ಸಿನಿಮಾಗಳು ಬರ್ತಿದೆ. ಬಾಹುಬಲಿ, ಆರ್‌ಆರ್‌ಆರ್ ಅದೇ ರೀತಿ ಕೆಜಿಎಫ್ ಬಂತು. ನಮ್ಮ ಸಿನಿಮಾಗಳನ್ನು ಪ್ರಪಂಚವೆಲ್ಲಾ ನೋಡುತ್ತಿದೆ. ಅದೇ ಸಾಲಿನಲ್ಲಿ 'ಪೊನ್ನಿಯಿನ್‌ ಸೆಲ್ವನ್' ಸಿನಿಮಾ ಸಿದ್ದವಾಗಿದೆ."

    ಅಣ್ಣಾವ್ರ ಐತಿಹಾಸಿಕ ಸಿನಿಮಾಗಳು

    ಅಣ್ಣಾವ್ರ ಐತಿಹಾಸಿಕ ಸಿನಿಮಾಗಳು

    "ಮಣಿರತ್ನಂ ಅವರ 40 ವರ್ಷಗಳ ಕನಸು. ತಮಿಳಿನಲ್ಲಿ ಎಂಜಿಆರ್‌ ಇಂದ ಹಿಡಿದು ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಸರ್ ಸಾಕಷ್ಟು ಐತಿಹಾಸಿಕ ಸಿನಿಮಾಗಳನ್ನು ಮಾಡಿದ್ದಾರೆ. ಅವರೆಲ್ಲಾ ಅದ್ಭುತ ಸಿನಿಮಾಗಳನ್ನ ಮಾಡಿದ್ದಾರೆ. ಅದೆಲ್ಲಾ ಆದಮೇಲೆ ಬಹಳ ವರ್ಷಗಳ ನಂತರ ಇದು ದೊಡ್ ಸಾಹಸ. 40 ವರ್ಷಗಳಿಂದ ಮಣಿ ಸರ್ ಈ ಸಿನಿಮಾ ಮಾಡಬೇಕು ಎಂದಿದ್ದರು. ಈ ಚಿತ್ರದ ಭಾಗವಾಗಿರುವುದಕ್ಕೆ ನಮಗೆಲ್ಲಾ ಖುಷಿಯಾಗುತ್ತಿದೆ. ಕಾದಂಬರಿ ಆಧರಿಸಿ ಸಿನಿಮಾ ಸಿದ್ಧವಾಗಿದೆ. ಒಂದಷ್ಟು ಸತ್ಯ ನೈಜ ಘಟನೆಗಳ ಜೊತೆ ಕಾಲ್ಪನಿಕ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ಟ್ರಾವೆಲ್ ಅಡ್ವೆಂಚರ್‌ ಸಿನಿಮಾ ಇದು. 1000 ವರ್ಷಗಳ ಹಿಂದೆ ದಕ್ಷಿಣ ಭಾರತ ಹೇಗಿತ್ತು ಎನ್ನುವುದನ್ನು ನೋಡಬಹುದು."

    ಆಗಿನ ಕಾಲದಲ್ಲಿ ರಾಜಯ ದರ್ಬಾರ್ ಹೇಗಿತ್ತು. ನಾವು ಎಷ್ಟು ಮುಂದುವರೆದಿದ್ದೆವು. ದೇಶ ವಿದೇಶದ ಜೊತೆಗೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದೆವು. ಅದನ್ನೆಲ್ಲಾ ಈ ಸಿನಿಮಾ ನೋಡಬಹುದು. ಬೇರೆ ಕಡೆ ನಾಗರೀಕತೆ ಶುರುವಾಗುವ ವೇಳೆಗೆ ನಾವು ಬಹಳ ಮುಂದುವರೆದಿದ್ದೆವು. ಮಣಿರತ್ನಂ ಸರ್ ಬಹಳ ಸೊಗಸಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಒಂದಿ ದೃಶ್ಯಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ. ಪ್ರತಿ ಪಾತ್ರವನ್ನು ಸೊಗಸಾಗಿ ತೋರಿಸಿದ್ದಾರೆ. ಕಾದಂಬರಿಯಲ್ಲಿ ಇರುವುದಕ್ಕಿಂತ ಬಹಳ ಸೊಗಸಾಗಿ ಅದನ್ನು ಹೇಳಲಾಗಿದೆ. ಇಲ್ಲಿನ ಜನರಿಗೆ ಎಲ್ಲಾ ಭಾಷೆಯೂ ಅರ್ಥವಾಗುತ್ತದೆ. ಇಲ್ಲಿ ಬಂದಾಗ ಬಹಳ ಪ್ರೀತಿ ಸಿಗುತ್ತದೆ. ಬಹಳ ಸೊಗಸಾಗಿ ಚಿತ್ರ ಕನ್ನಡಕ್ಕೆ ಡಬ್ ಆಗಿದೆ. ಉಪೇಂದ್ರ ಸರ್ ವಾಯ್ಸ್ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್" ಎಂದು ಕಾರ್ತಿ ಹೇಳಿದ್ದಾರೆ.

    English summary
    Tamil actor karthi shared memories of his visit to Bangalore In His College Days. Know More
    Thursday, September 22, 2022, 23:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X