For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಕಾರ್ತಿಕ್‌ಗೆ ಗಾಯ: ಚೆನ್ನೈನ ಆಸ್ಪತ್ರೆಗೆ ದಾಖಲು

  |

  ತಮಿಳಿನ ಹಿರಿಯ ನಟ ಕಾರ್ತಿಕ್‌ಗೆ ಪೆಟ್ಟಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ವ್ಯಾಯಾಮ ಮಾಡುವ ವೇಳೆ ಗಾಯ ಮಾಡಿಕೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

  ಕಾರ್ತಿಕ್ ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಚಾರವನ್ನು ಪಿಆರ್ ರಿಯಾಜ್ ಅಹ್ಮದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಖಾತ್ರಿಪಡಿಸಿದ್ದಾರೆ. ''ನಟ ಕಾರ್ತಿಕ್‌ ವ್ಯಾಯಾಮ ಮಾಡುವ ವೇಳೆ ಗಾಯಗೊಂಡಿದ್ದಾರೆ. ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಪೋಸ್ಟ್ ಹಾಕಿದ್ದಾರೆ. ಕಾರ್ತಿಕ್ ಅವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿಗಳು ಉಲ್ಲೇಖಿಸಿದೆ. ಕೆಲವು ವರ್ಷದ ಹಿಂದೆ ಅಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದಿತ್ತು. ಈಗ ಅದೇ ಕಾಲಿಗೆ ಗಾಯಗೊಂಡಿದೆ ಎಂದು ಹೇಳಲಾಗಿದೆ. ಸದ್ಯ, ವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಕಾರ್ತಿಕ್ ತಮಿಳು ಇಂಡಸ್ಟ್ರಿಯ ಬಹುಮುಖ ಪ್ರತಿಭೆ. 1981ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರ್ತಿಕ್ ಅವರನ್ನು 'ನವರಸ ನಾಯಕ' ಎಂದು ಕರೆಯುತ್ತಾರೆ.

  ಕಾರ್ತಿಕ್ ಸಿನಿಮಾ ಜರ್ನಿ
  1981ರಲ್ಲಿ ತೆರೆಕಂಡ 'ಅಲೈಗಲ್ ಒವತಿಲಾಯ್' ಚಿತ್ರದೊಂದಿಗೆ ಕಾರ್ತಿಕ್ ಸಿನಿಮಾ ಜರ್ನಿ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ ಲಭಿಸಿತು. ಅಲ್ಲಿಂದ ನಿರಂತರವಾಗಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

  ಕಾರ್ತಿಕ್ ಖಾಸಗಿ ಜೀವನದ ಬಗ್ಗೆ ಹೇಳುವುದಾರೆ, 1988ರಲ್ಲಿ ನಟಿ ರಾಗಿಣಿ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಗೌತಮ್ ಕಾರ್ತಿಕ್ ಮತ್ತು ಗಯನ್ ಕಾರ್ತಿಕ್. 1992ರಲ್ಲಿ ರಾಗಿಣಿ ಸಹೋದರಿ ರತಿ ಅವರನ್ನು ಸಹ ಕಾರ್ತಿಕ್ ಮದುವೆಯಾದರು. ಈ ದಂಪತಿಗೆ ಒಂದು ಗಂಡು (ತಿರನ್ ಕಾರ್ತಿಕ್) ಮಗ ಇದ್ದಾರೆ.

  ಈಗಲೂ ಕಾರ್ತಿಕ್ ನಟಿಸುತ್ತಿದ್ದು, ತೀ ಇವನ್ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನು ಹಿಂದಿಯ ಅಂಧಾದುನ್ ತಮಿಳು ರಿಮೇಕ್ ಅಂಧಗನ್ ಚಿತ್ರದಲ್ಲೀ ಕಾರ್ತಿಕ್ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಯುಷ್ಮಾನ್ ಖುರಾನ್, ಟಬು, ರಾಧಿಕಾ ಆಪ್ಟೆ ಅಭಿನಯಿಸಿದ್ದರು. ತಮಿಳಿನಲ್ಲಿ ಪ್ರಶಾಂತ್, ಸಿಮ್ರಾನ್ ಅಭಿನಯಿಸುತ್ತಿದ್ದಾರೆ.

  English summary
  Tamil Veteran Actor Karthik hospitalised in chennai after got injured while exercising.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X