For Quick Alerts
  ALLOW NOTIFICATIONS  
  For Daily Alerts

  14 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲು ಸಜ್ಜಾದ ಸೂರ್ಯ-ಜ್ಯೋತಿಕಾ ದಂಪತಿ

  |

  ತಮಿಳು ಸಿನಿಮಾರಂಗದ ಮೋಸ್ಟ್ ಬ್ಯೂಟಿಫುಲ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ಟಾರ್ ಜೋಡಿಯನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  ಇಬ್ಬರು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತೀರಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಆದರೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟ ಸೂರ್ಯ ಮತ್ತು ಜ್ಯೋತಿಕಾ ಸುಮಾರು 14 ವರ್ಷಗಳ ಬಳಿಕ ಒಟ್ಟಿಗೆ ಸಿನಿಮಾ ಮಾಡುವ ಸಮಯ ಬಂದಿದೆ. ಅಂದಹಾಗೆ ಈ ಜೋಡಿ ಕೊನೆಯದಾಗಿ 2006ರಲ್ಲಿ ರಿಲೀಸ್ ಆದ 'ಸಿಲ್ಲುನು ಒರು ಕಾದಲ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಇಬ್ಬರು ಮತ್ತೆ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಇಬ್ಬರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡುವ ಅವಕಾಶ ಬಂದಿದೆ. ಮುಂದೆ ಓದಿ..

  'ನಿಜ ಜೀವನದಲ್ಲಿ ನಾನು ರೊಮ್ಯಾಂಟಿಕ್ ವ್ಯಕ್ತಿ ಅಲ್ಲ' ಎಂದ ನಟ ಸೂರ್ಯ

  ಮದುವೆ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಜ್ಯೋತಿಕಾ

  ಮದುವೆ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಜ್ಯೋತಿಕಾ

  ಸೂರ್ಯ ಮತ್ತು ಜ್ಯೋತಿಕಾ ಇಬ್ಬರು ಕೊನೆಯದಾಗಿ 'ಸಿಲ್ಲುನು ಒರು ಕಾದಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ರಿಲೀಸ್ ಆದ ವರ್ಷವೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಜ್ಯೋತಿಕಾ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು. ಈ ಜೋಡಿಗೆ ದಿಯಾ ಮತ್ತು ದೇವ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಾಗಿದ್ದಾರೆ.

  2016ರಲ್ಲಿ ಮತ್ತೆ ಬಣ್ಣ ಹಚ್ಚಿದ ಸೂರ್ಯ ಪತ್ನಿ

  2016ರಲ್ಲಿ ಮತ್ತೆ ಬಣ್ಣ ಹಚ್ಚಿದ ಸೂರ್ಯ ಪತ್ನಿ

  ಮಕ್ಕಳು, ಸಂಸಾರ ಅಂತ ಬ್ಯುಸಿ ಇದ್ದ ಜ್ಯೋತಿಕಾ 2016ರಲ್ಲಿ ಮತ್ತೆ ಬಣ್ಣಹಚ್ಚುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭ ಮಾಡಿದ್ದಾರೆ. 36 ವಯದಿನಿಲೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಪವರ್ ಫುಲ್ ಮಹಿಳಾ ಪ್ರಧಾನ ಸಿನಿಮಾ ಮೂಲಕ ಜ್ಯೋತಿಕಾ ಮತ್ತೆ ಚಿತ್ರಪ್ರೇಕ್ಷಕರ ಮನಗೆದ್ದರು.

  ಮೀರಾ ಮಿಥುನ್ ಗಂಭೀರ ಆರೋಪಗಳಿಗೆ ನಟ ಸೂರ್ಯ ಪ್ರತಿಕ್ರಿಯೆ

  ಇಬ್ಬರಿಗಾಗಿ ಸಿದ್ಧವಾಗುತ್ತಿದೆ ಕಥೆ

  ಇಬ್ಬರಿಗಾಗಿ ಸಿದ್ಧವಾಗುತ್ತಿದೆ ಕಥೆ

  ಜ್ಯೋತಿಕಾ ಸಿನಿಮಾರಂಗಕ್ಕೆ ವಾಪಸ್ ಆಗುತ್ತಿದ್ದಂತೆ ಪತಿ ಸೂರ್ಯ ಜೊತೆ ಯಾವಾಗ ಸಿನಿಮಾ ಮಾಡುವುದು ಎನ್ನುವ ಪ್ರಶ್ನೆ ಎದುರಾಗುತ್ತಲೆ ಇದೆ. ಈ ಬಗ್ಗೆ ನಟ ಸೂರ್ಯ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇಬ್ಬರಿಗಾಗಿ ಒಂದು ಪ್ರಾಜೆಕ್ಟ್ ತಯಾರಾಗುತ್ತಿದೆ, ಸದ್ಯದಲ್ಲೇ ಆ ಸಿನಿಮಾ ಅನೌನ್ಸ್ ಆಗಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿದ್ದಾರೆ.

  7 ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  7 ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಸೂರ್ಯ ಮತ್ತು ಜ್ಯೋತಿಕಾ ಇಬ್ಬರು 7 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಪುವೆಲ್ಲಂ ಕೇಟ್ಟುಪ್ಪರ್, ಕಾಖಾ ಕಾಖಾ, 'ಸಿಲ್ಲುನು ಒರು ಕಾದಲ್' ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 8ನೇ ಸಿನಿಮಾಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇಬ್ಬರ ಸಿನಿಮಾ ಯಾವಾಗ ಸೆಟ್ಟೇರುತ್ತೆ ಎಂದು ಕಾದುನೋಡಬೇಕು.

  ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಬಗ್ಗೆ ಮಾತನಾಡಿದ ಕೈಮರ ಚಿತ್ರತಂಡ | Filmibeat Kannada
  ಸೂರರೈ ಪೊಟ್ರು ಸಿನಿಮಾದಲ್ಲಿ ಸೂರ್ಯ ಬ್ಯುಸಿ

  ಸೂರರೈ ಪೊಟ್ರು ಸಿನಿಮಾದಲ್ಲಿ ಸೂರ್ಯ ಬ್ಯುಸಿ

  ನಟ ಸೂರ್ಯ ಸದ್ಯ ಸೂರರೈ ಪೊಟ್ರು ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನಾಧಾರಿತ ಸಿನಿಮಾ ಇದಾಗಿದೆ. ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಮಿಂಚಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿದೆ.

  English summary
  Tamil Actor Surya and his wife Jyothika to reunite onscreen after 14 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X