For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನ 'ಜೈ ಭೀಮ್' ಅಂತ ಅಭಿಮಾನಿಗಳ ಮುಂದೆ ಬಂದ ನಟ ಸೂರ್ಯ

  |

  ತಮಿಳಿನ ಖ್ಯಾತ ನಟ ಸೂರ್ಯಗೆ ಇಂದು (ಜುಲೈ 23) ಹುಟ್ಟುಹಬ್ಬದ ಸಂಭ್ರಮ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ಸೂರ್ಯಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

  ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡದಿದ್ದರೂ ಅಭಿಮಾನಿಗಳಿಗೆ ಭರ್ಜರಿ ಸಂತಸ ನೀಡಿದ್ದಾರೆ. ಸೂರ್ಯ ನಟನೆಯ 39ನೇ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಅನ್ನು ಘೋಷಣೆ ಮಾಡಲಾಗಿದೆ. ಜನ್ಮದಿನದ ವಿಶೇಷವಾಗಿ ಬಂದ ಪೋಸ್ಟರ್ ಮತ್ತು ಶೀರ್ಷಿಕೆ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  ಅಂದಹಾಗೆ ಸೂರ್ಯ 39ನೇ ಸಿನಿಮಾಗೆ ಜೈ ಭೀಮ್ ಎಂದು ಹೆಸರಿಡಲಾಗಿದೆ. ಅಂದಹಾಗೆ ಪೋಸ್ಟರ್‌ನಲ್ಲಿ ಸೂರ್ಯ ಕರಿ ಕೋಟು ಧರಿಸಿ ದ್ದಾರೆ. ಅಂದರೆ ಪವರ್ ಫುಲ್ ವಕೀಲನ ಪಾತ್ರದಲ್ಲಿ ನಟ ಸೂರ್ಯ ನಟಿಸುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಈ ಪೋಸ್ಟರ್ ನೋಡುತ್ತಿದ್ರೆ ಚಿತ್ರದಲ್ಲಿ ಜಾತಿಯಂತ ದೊಡ್ಡ ಸಾಮಾಜಿಕ ಸಮಸ್ಯೆ ಬಗ್ಗೆ ತೋರಿಸುವ ಸಾಧ್ಯತೆ ಇದೆ. ಹಾಗಾಗಿ ಚಿತ್ರದ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  ಅಂದಹಾಗೆ ಚಿತ್ರಕ್ಕೆ ಜ್ಞಾನವೆಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಜೈ ಭೀಮ್' ತಮಿಳು ಮಾತ್ರವಲ್ಲದೇ ತೆಲುಗು ಮತ್ತು ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡದ ಪೋಸ್ಟರ್ ಕೂಡ ಇಂದು ಬಿಡುಗಡೆಯಾಗಿದೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ಈ ಸಿನಿಮಾ ಜೊತೆಗೆ ಸೂರ್ಯ ಎಥಾರ್ಕುಮ್ ತುನಿಂಧವನ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವಾಡಿವಾಸಲು ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಕೊನೆಯದಾಗಿ ನಟ ಸೂರ್ಯ ಸೂಪರ್ ಹಿಟ್ ಸೂರರೈ ಪೊಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

  English summary
  Tamil Actor Surya's new movie titled and first look unveiled on his birthday. New movie titled Jai Bheem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X