Don't Miss!
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Finance
LIC ಹೊಸ ದತ್ತಿ ಯೋಜನೆ: ಮಾಸಿಕ ₹2,130 ರೂ. ಹೂಡಿ ₹48.5 ಲಕ್ಷ ಪಡೆಯಿರಿ, ಪೂರ್ಣ ಮಾಹಿತಿ ಇಲ್ಲಿದೆ
- Sports
ಮತ್ತೆ ರಾಷ್ಟ್ರೀಯ ತಂಡದ ಪರ ಆಡಲಿದ್ದಾರಾ ಆರ್ಸಿಬಿ ನಾಯಕ?: ಕುತೂಹಲ ಕೆರಳಿಸಿದೆ ದ. ಆಫ್ರಿಕಾ ಕೋಚ್ ಮಾತು
- News
ನೇತಾಜಿ, ಆರ್ ಎಸ್ ಎಸ್ ಕನಸು ಒಂದೇ.. ಅದು ಭಾರತವನ್ನು ಶ್ರೇಷ್ಠವಾಗಿಸುವ ಗುರಿ : ಮೋಹನ್ ಭಾಗವತ್
- Automobiles
ಸದ್ದಿಲ್ಲದೇ ಅನಾವರಣಗೊಂಡ ಮಾರುತಿ ಫ್ರಾಂಕ್ಸ್ ಹಿಂದೆ ಕಂಪನಿಯ ದೊಡ್ಡ ಪ್ಲಾನ್!
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶೂಟಿಂಗ್ ವೇಳೆ ತಮಿಳು ನಟ ವಿಜಯ್ ಆಂಟೋನಿಗೆ ಗಂಭೀರ ಪೆಟ್ಟು: ಈಗ ಆರೋಗ್ಯ ಸ್ಥಿತಿ ಹೇಗಿದೆ?
'ಪಿಚ್ಚಕ್ಕಾರನ್' ಸಿನಿಮಾದಲ್ಲಿ ನಟಿಸಿ ಸಕ್ಸಸ್ ಕಂಡ ನಟ ವಿಜಯ್ ಆಂಟೋನಿ ಇತ್ತೀಚೆಗೆ ಗಾಯಗೊಂಡಿದ್ದರು. ಮಲೇಷಿಯಾದ ಲಂಕವಿಯಲ್ಲಿ 'ಪಿಚ್ಚಕ್ಕಾರನ್' -2 ಸಿನಿಮಾ ಚಿತ್ರೀಕರಣದ ವೇಳೆ ದುರಂತ ಸಂಭವಿಸಿತ್ತು. ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ನಟ ಗಾಯಗೊಂಡಿದ್ದರು. ಕೂಡಲೇ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ವಾಟರ್ ಬೈಕ್ ಏರಿ ಸಾಹಸ ದೃಶ್ಯ ಚಿತ್ರೀಕರಿಸುವ ವೇಳೆ ಬೈಕ್ ಪಕ್ಕದಲ್ಲಿ ಬರುತ್ತಿದ್ದ ಬೋಟ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ವಿಜಯ್ ಕೆಳಗೆ ಬಿದ್ದು ಗಾಯಗೊಂಡಿದ್ದರು. ನಟ ವಿಜಯ್ ಆಂಟೋನಿ ಅಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ವಿಜಯ್ ಆರೋಗ್ಯ ಸ್ಥಿತಿ ಗಂಭೀರವಾಗಿ ಎನ್ನುವ ವದಂತಿ ಹರಿದಾಡಲು ಶುರುವಾಗಿತ್ತು. "ದವಡೆ ಮುರಿದಿದೆ, ಹಲ್ಲುಗಳು ಉದುರಿದೆ. ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದೆ" ಎಂದು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾರೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಜಯ್ ಆಪ್ತರು ಈಗ ಮಾಹಿತಿ ನೀಡಿದ್ದಾರೆ.

ನಟ ವಿಜಯ್ ಆಂಟೋನಿ ಆರೋಗ್ಯವಾಗಿದ್ದಾರೆ. ಯಾರು ಆತಂಕ ಪಡುವ ಅಗತ್ಯ ಇಲ್ಲ. ವಿಜಯ್ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಮಲೇಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗಂಭೀರ ಗಾಯ ಆಗಿರಲಿಲ್ಲ. ಬುಧವಾರ ಸಂಜೆ ಚೆನ್ನೈಗೆ ಅವರನ್ನು ಕರೆದುಕೊಂಡು ಬರಲಾಗಿದೆ ಎಂದು ವರದಿ ಆಗಿದೆ. ಸದ್ಯ ಚೆನ್ನೈ ಆಸ್ಪತ್ರೆಯಲ್ಲಿ ವಿಜಯ್‌ಗೆ ಚಿಕಿತ್ಸೆ ನೀಡುತ್ತಿರುವುದಾಗಿ ಪತ್ನಿ ಫಾತಿಮಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಜಯ್ ಸ್ನೇಹಿತರು ಹೇಳುವ ಪ್ರಕಾರ ಅವರು ಬಹುತೇಕ ಚೇತರಿಸಿಕೊಂಡಿದ್ದಾರೆ. ಸದ್ಯ ಶೂಟಿಂಗ್ ಮುಂದೂಡಲಾಗಿದ್ದು, ಆದಷ್ಟು ಬೇಗ ವಿಜಯ್ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
'ಪಿಚ್ಚಕ್ಕಾರನ್', 'ಸೈತಾನ್', 'ಅಣ್ಣದುರೈ', 'ಕಾಳಿ', 'ಕೊಲೆಗಾರನ್', 'ಕೊಡಿಯಿಲ್ ಒರುವನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಜಯ್ ಆಂಟೋನಿ ನಟಿಸಿದ್ದಾರೆ. 'ಪಿಚ್ಚಕ್ಕಾರನ್' ಸಿನಿಮಾ ತೆಲುಗಿನಲ್ಲಿ 'ಬಿಚ್ಚಗಾಡು' ಹೆಸರಿನಲ್ಲಿ ಡಬ್ ಆಗಿ ಸಕ್ಸಸ್ ಕಂಡಿತ್ತು. ಇದೇ ಚಿತ್ರವನ್ನು ಕನ್ನಡದಲ್ಲಿ ಚಿರಂಜೀವಿ ಸರ್ಜಾ 'ಅಮ್ಮ ಐ ಲವ್ ಯು' ಹೆಸರಿನಲ್ಲಿ ರೀಮೇಕ್ ಮಾಡಿದ್ದರು.
ಕಾಲಿವುಡ್ಗೆ
ಎಂಟ್ರಿ
ಕೊಟ್ಟ
ವಸಿಷ್ಠ
ಸಿಂಹ:
ನಟ
ಪ್ರಭುದೇವ
60ನೇ
ಚಿತ್ರದಲ್ಲಿ
ನಟನೆ