For Quick Alerts
  ALLOW NOTIFICATIONS  
  For Daily Alerts

  ಕಾರಿನಲ್ಲಿ ಬಂದ ನಿಗೂಢ ವ್ಯಕ್ತಿಗಳಿಂದ ತಮಿಳು ನಟ ವಿಶಾಲ್ ಮನೆ ಮೇಲೆ ದಾಳಿ!

  |

  ತಮಿಳಿನ ಸ್ಟಾರ್ ನಟ ವಿಶಾಲ್ ಕನ್ನಡಿಗರಿಗೂ ಚಿರಪರಿಚಿತ. ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳದೇ ಹೋದರೂ, ಕನ್ನಡಿಗರಿ ಗೊತ್ತಿದೆ. ಇತ್ತೀಚೆಗೆಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ ನಿಧನದ ಬಳಿಕ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ ಇತ್ತೀಚೆಗೆ ಮೈಸೂರಿನ ಶಕ್ತಿಧಾಮಕ್ಕೂ ಭೇಟಿ ನೀಡಿದ್ದರು.

  ಇದೇ ವಿಶಾಲ್ ಮನೆ ಮೇಲೆ ಅಟ್ಯಾಕ್ ಆಗಿದೆ. ನಿನ್ನೆ( ಸೆಪ್ಟೆಂಬರ್ 27)ರ ತಡರಾತ್ರಿ ಅಣ್ಣಾನಗರದ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಕಲ್ಲು ತೂರಾಟದಲ್ಲಿ ಮನೆಯ ಕಿಟಕಿ ಗಾಜುಗಳು ಒಡೆದಿದ್ದು, ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

  ತಮಿಳಿನ ಸ್ಟಾರ್ ನಟ ವಿಶಾಲ್ ಮನೆ ಮೇಲೆ ದಾಳಿ ಮಾಡಿದ್ದು ಯಾರು? ವಿಶಾಲ್ ಮೇಲೆ ಯಾರಿಗೆ ಅಷ್ಟೊಂದು ದ್ವೇಷ? ಇಂತಹ ವಿಚಾರಗಳ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  ಲೈಕಾ ಜೊತೆ ಕಿರಿಕ್

  ಲೈಕಾ ಜೊತೆ ಕಿರಿಕ್

  ವಿಶಾಲ್ ತಮಿಳು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿರೋ ನಟ. ಕಾಲಿವುಡ್‌ನಲ್ಲಿ ಪವರ್‌ಫುಲ್ ಎನಿಸಿಕೊಂಡಿದ್ದ ಶರತ್‌ಕುಮಾರ್ ಹಾಗೂ ರಾಧಾರವಿ ಮೈತ್ರಿ ಬ್ರೇಕ್ ಆಗಿದ್ದು ಇದೇ ವಿಶಾಲ್. ವಿಶಾಲ್ ಪಂಚ ಪಾಂಡವರು ಎಂಬ ತಂಡ ಕಟ್ಟಿಕೊಂಡು ಕಲಾವಿದರ ಸಂಘದ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ತಮಿಳು ಚಿತ್ರರಂಗದ ಎಲ್ಲಾ ಯುವ ನಟರೂ ವಿಶಾಲ್‌ಗೆ ಬೆಂಬಲ ನೀಡಿದ್ದರು. ಸದ್ಯ ಸಿನಿಮಾ ನಿರ್ಮಾಣದ ವಿಚಾರಕ್ಕೆ ವಿಶಾಲ್ ಮತ್ತು ಲೈಕಾ ಸಂಸ್ಥೆ ನಡುವೆ ಕೊಡು ಕೊಳ್ಳುವಿಕೆ ವಿಚಾರದಲ್ಲಿ ವಿವಾದ ಎದ್ದಿತ್ತು ಎನ್ನಲಾಗಿದೆ.

  ವಿಶಾಲ್ ವಿವಾದಗಳು

  ವಿಶಾಲ್ ವಿವಾದಗಳು

  ಮೊದ ಮೊದಲು ಸ್ನೇಹದಿಂದ ಇದ್ದವರು ಬಳಿಕ ಕಿತ್ತಾಡಿಕೊಳ್ಳುತ್ತಿದ್ದಾರೆ. ವಿಶಾಲ್ ಹಾಗೂ ಅವರನ್ನು ಬೆಂಬಲಿಸಿದ ಯುವ ನಟರ ಕಿತ್ತಾಟದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಕೆಲವು ವಿಚಾರಕ್ಕೆ ವಿಶಾಲ್ ಸ್ನೇಹಿತರಾಗಿದ್ದರು ಇಂದು ವೈರಿಗಳಾಗಿದ್ದಾರೆ. ಇದು ಕಲಾವಿದರ ಸಂಘದ ಚುನಾವಣೆಯಲ್ಲೂ ಸದ್ದು ಮಾಡಿತ್ತು. ಚಿತ್ರರಂಗದಲ್ಲಿ ವಿಶಾಲ್ ಇಂತಹ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

  ವಿಶಾಲ್ ಮನೆ ಮೇಲೆ ಕಲ್ಲು ತೂರಾಟ

  ವಿಶಾಲ್ ಮನೆ ಮೇಲೆ ಕಲ್ಲು ತೂರಾಟ

  ವಿಶಾಲ್ ತಮ್ಮ ಕುಟುಂಬದೊಂದಿಗೆ ಚೆನ್ನೈನ ಅಣ್ಣಾನಗರ ಮನೆಯಲ್ಲಿ ವಾಸವಿದ್ದಾರೆ. ಈ ವೇಳೆ (ಸೆಪ್ಟೆಂಬರ್ 27)ರ ರಾತ್ರಿ ಕಾರಿನಲ್ಲಿ ಬಂದ ಕೆಲ ಕಿಡಿಗೇಡಿಗಳು ಮನೆ ಮೇಲೆ ಕಲ್ಲು ಎಸೆದಿದ್ದಾರೆ. ಈ ವೇಳೆ ವಿಶಾಲ್ ಮನೆಯ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮ್ಯಾನೇಜರ್ ಹರಿ ಕೃಷ್ಣನ್ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

  ಮೂಲ ಆಂಧ್ರ.. ಬೆಳೆದಿದ್ದು ಚೆನ್ನೈ

  ಮೂಲ ಆಂಧ್ರ.. ಬೆಳೆದಿದ್ದು ಚೆನ್ನೈ

  ನಟ ವಿಶಾಲ್ ತಮಿಳು ಚಿತ್ರರಂಗದ ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರು. ಸದ್ಯ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶಾಲ್ ತಂದೆ ಜಿಕೆ ರೆಡ್ಡಿ ಕೂಡ ನಿರ್ಮಾಪಕರು. ವಿಶಾಲ್ ಹುಟ್ಟಿದ್ದು ಆಂಧ್ರಪ್ರದೇಶದವರಾದರೂ ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಚೆನ್ನೈನಲ್ಲಿಯೇ. 2004ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ, 'ಸಂಡಕೋಳಿ', 'ತಿಮಿರು', 'ಶಿವಪತಿಕಾರಂ', 'ಸಂಡಕೋಳಿ 2' ಅಂತ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Tamil Actor Vishal Annanagar House Attacked By Mysterious Persons, Know More.
  Wednesday, September 28, 2022, 0:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X