Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾರು ಎಷ್ಟೇ ದ್ವೇಷಿಸಲಿ: ಆ ಸ್ಟಾರ್ ನಟನಿಗೆ ಮಾತ್ರ ರಶ್ಮಿಕಾ ಜೊತೆ ಡೇಟ್ ಹೋಗುವ ಆಸೆಯಂತೆ!
'ಕಿರಿಕ್ ಪಾರ್ಟಿ'ಯ ಸಾನ್ವಿ ಆಗಿ ಬಣ್ಣದಲೋಕಕ್ಕೆ ಬಂದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೂ ಮಿಂಚು ಹರಿಸುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುಭಾಷಾ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ನಾನಾ ಕಾರಣಕ್ಕೆ ಕಿರಿಕ್ ಬೆಡಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ.
ಇತ್ತೀಚೆಗೆ ಇದೇ ಟ್ರೋಲ್ ವಿಚಾರಕ್ಕೆ ಸಂಬಂಧಿಸಿ ನಟಿ ರಶ್ಮಿಕಾ ಭಾವನಾತ್ಮಕ ಪೋಸ್ಟ್ ಮಾಡಿದ್ದರು. ಏನೋ ಮಾತನಾಡಿದರೆ ಅದಕ್ಕೆ ಮತ್ತೇನೋ ಸೇರಿಸಿ ಟ್ರೋಲ್ ಮಾಡಿದರೆ ನನಗೆ ಬಹಳ ನೋವಾಗುತ್ತದೆ ಎಂದು ಕೇಳಿಕೊಂಡಿದ್ದರು. ಆದರೂ ಕೂಡ ರಶ್ಮಿಕಾನ ಟ್ರೋಲ್ ಮಾಡುವುದು ಮಾತ್ರ ಕಮ್ಮಿ ಆಗಲಿಲ್ಲ. ಇತ್ತೀಚೆಗೆ ಆಕೆ 'ಕಾಂತಾರ' ಸಿನಿಮಾ ಇನ್ನು ನೋಡಿಲ್ಲ ಎಂದಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದಲ್ಲಿ ಆಕೆಯ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಅಂತೆಲ್ಲಾ ಟ್ರೆಂಡ್ ಕ್ರಿಯೇಟ್ ಆಗಿತ್ತು.
"ಕಾಂತಾರ'
ನೋಡಿ
ಮೆಸೇಜ್
ಮಾಡ್ದೆ..
ನನ್ನ
ಯಾರು
ಬ್ಯಾನ್
ಮಾಡಿಲ್ಲ..
ಕನ್ನಡ
ಸಿನಿಮಾ
ಅಂದ್ರೆ
ಪ್ರೀತಿ
ಇದೆ":
ರಶ್ಮಿಕಾ
ರಶ್ಮಿಕಾ ಮಂದಣ್ಣ ಇಷ್ಟೆಲ್ಲಾ ಟ್ರೋಲ್ ಆದರೂ ಅಭಿಮಾನಿಗಳು ಮಾತ್ರ ಸದಾ ಆಕೆಯ ಜೊತೆ ನಿಲ್ಲುತ್ತಾರೆ. ಇನ್ನು ಸ್ಟಾರ್ ನಟರಿಗೆ ಕೂಡ ರಶ್ಮಿಕಾ ಅಂದರೆ ಬಹಳ ಇಷ್ಟ. ಕೆಲ ದಿನಗಳ ಹಿಂದೆ ತೆಲುಗು ನಟ ಬಾಲಕೃಷ್ಣ, ರಶ್ಮಿಕಾ ನನ್ನ ಲೇಟೆಸ್ಟ್ ಕ್ರಶ್ ಎಂದು ಹೇಳಿಕೊಂಡಿದ್ದರು. ಇದೀಗ ಮತ್ತೊಬ್ಬ ನಟ ರಶ್ಮಿಕಾ ಜೊತೆ ಸೆಲೆಬ್ರೆಟಿ ಡೇಟ್ ಹೋಗಬೇಕು ಎಂದಿದ್ದಾರೆ.

ಸಂದರ್ಶನದಲ್ಲಿ ಆಸೆ ತೋಡಿಕೊಂಡ ನಟ
ತಮಿಳು ನಟ ವಿಶಾಲ್, ರಶ್ಮಿಕಾ ಮಂದಣ್ಣ ಜೊತೆ ಸೆಲೆಬ್ರೆಟಿ ಡೇಟ್ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಸದ್ಯ ವಿಶಾಲ್ 'ಲಾಠಿ' ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮೋಷನ್ ವೇಳೆ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದಾರೆ.

ಡಿಸೆಂಬರ್ 22ಕ್ಕೆ 'ಲಾಠಿ' ರಿಲೀಸ್
ವಿಶಾಲ್ ನಟನೆಯ 'ಲಾಠಿ' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗ್ತಿದೆ. ವಿಶಾಲ್ ತಂದೆ ಕನ್ನಡಿಗರು. ವಿಶಾಲ್ ಸಂಬಂಧಿಕರು ಸಾಕಷ್ಟು ಜನ ಬೆಂಗಳೂರಿನಲ್ಲಿದ್ದಾರೆ. ಹಾಗಾಗಿ ಚಿಕ್ಕಂದಿನಿಂದಲೂ ಸಾಕಷ್ಟು ಬಾರಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರಂತೆ. ಕನ್ನಡ ಸ್ವಲ್ಪ ಮಾತನಾಡಲು ಬರುತ್ತೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಲಿತು ನನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನೇ ಡಬ್ ಮಾಡುತ್ತೀನಿ ಎಂದು ಹೇಳಿದ್ದಾರೆ.

ದಳಪತಿ 67 ಚಿತ್ರದಲ್ಲಿ ನಟಿಸಲ್ಲ
ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ದಳಪತಿ ವಿಜಯ್ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನ 'ದಳಪತಿ 67' ಎಂದು ಕರೆಯಲಾಗ್ತಿದೆ. ಈ ಚಿತ್ರದಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸುವಂತೆ ವಿಶಾಲ್ ಅವರನ್ನು ಲೋಕೇಶ್ ಕೇಳಿದ್ದರಂತೆ. ಆದರೆ ಸದ್ಯಕ್ಕೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣ 'ದಳಪತಿ 67' ಚಿತ್ರದಲ್ಲಿ ನಟಿಸೋಕೆ ಸಾಧ್ಯವಿಲ್ಲ ಎಂದು ವಿಶಾಲ್ ಹೇಳಿದ್ದಾರೆ.

ಬಹುಭಾಷಾ ನಟಿಯಾಗಿ ರಶ್ಮಿಕಾ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ರಶ್ಮಿಕಾ ನಟನೆಯ 'ಮಿಷನ್ ಮಜ್ನು' ಸಿನಿಮಾ ಜನವರಿ 20ಕ್ಕೆ ನೇರವಾಗಿ ಓಟಿಟಿಗೆ ಬರ್ತಿದೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದ 'ಗುಡ್‌ಬೈ' ಇತ್ತೀಚೆಗೆ ರಿಲೀಸ್ ಆಗಿತ್ತು. ಆದರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. 'ಅನಿಮಲ್' ಎನ್ನುವ ಮತ್ತೊಂದು ಹಿಂದಿ ಚಿತ್ರದಲ್ಲಿ ನಟಿಸ್ತಿದ್ದಾರೆ. ತೆಲುಗಿನಲ್ಲಿ 'ಪುಷ್ಪ- 2' ಶೂಟಿಂಗ್ ಶುರುವಾಗಿದೆ. ತಮಿಳಿನಲ್ಲಿ 'ವಾರೀಸು' ರಿಲೀಸ್‌ಗೆ ರೆಡಿಯಾಗಿದೆ.