ಗಂಡು ಮಗುವಿಗೆ ಜನ್ಮ ನೀಡಿದ ಹಾಸ್ಯನಟ ಯೋಗಿಬಾಬು ದಂಪತಿ
ತಮಿಳಿನ ಖ್ಯಾತ ಹಾಸ್ಯನಟ ಯೋಗಿಬಾಬು ವರ್ಷದ ಆರಂಭದಲ್ಲಿ ಮಂಜು ಭಾರ್ಗವಿ ಜೊತೆ ವೈವಾಹಿಕ ಜೀವನ ಆರಂಭಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಮಂಜು ಭಾರ್ಗವಿ ಮತ್ತು ಯೋಗಿಬಾಬು ವಿವಾಹ ಜರುಗಿತ್ತು.
ಇದೀಗ, ಯೋಗಬಾಬು ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆ-ತಾಯಿಯಾದ ಖುಷಿಯಲ್ಲಿರುವ ಜೋಡಿಗೆ ತಮಿಳು ಚಿತ್ರರಂಗದ ಅನೇಕರು ಶುಭಾಶಯ ಕೋರಿದ್ದಾರೆ.
ಫೆಬ್ರವರಿ 5ರಂದು ಚೆನ್ನೈನ ತಿರುಪತಿಯ ಮುರುಗನ್ ದೇವಸ್ಥಾನದಲ್ಲಿ ಯೋಗಿ ಬಾಬು ಅವರು ಮಂಜು ಭಾರ್ಗವಿ ಜೊತೆ ಸಪ್ತಪದಿ ತುಳಿದಿದ್ದರು. ತೀರ ಸರಳವಾಗಿ ನಡೆದ ವಿವಾಹ ಸಂಭ್ರಮದಲ್ಲಿ ಕುಟುಂಬಸ್ಥರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು.

ನಂತರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡು ಸ್ಟಾರ್ಸ್ ಹಾಗೂ ಗಣ್ಯರನ್ನು ಆಹ್ವಾನಿಸಲು ಯೋಜಿಸಿದ್ದರು. ಅಷ್ಟೊತ್ತಿಗೆ ಕೊರೊನಾ ವೈರಸ್ ಕಾಟ ಹೆಚ್ಚಾಯಿತು. ಆದ್ದರಿಂದ ಆರತಕ್ಷತೆ ಆಯೋಜಿಸುವ ಯೋಜನೆ ಕೈ ಬಿಟ್ಟರು.
ತಮ್ಮ ಮದುವೆ ಆರತಕ್ಷತೆಗೆ ತಮಿಳುನಾಡು ಮುಖ್ಯಮಂತ್ರಿ ಅವರನ್ನು ಸಹ ಯೋಗಿ ಬಾಬು ಆಹ್ವಾನಿಸಿದ್ದರು. ಆದ್ರೆ, ಕೊರೊನಾ ಲಾಕ್‌ಡೌನ್ ಘೋಷಿಸಿದ ಬಳಿಕ ಎಲ್ಲ ಯೋಜನೆಗಳು ತಲೆಕೆಳಗಾದವು.
ಅಂದ್ಹಾಗೆ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ದರ್ಬಾರ್ ಸಿನಿಮಾದಲ್ಲಿ ಯೋಗಿ ಮಿಂಚಿದ್ದರು. ಧನುಷ್ ಅಭಿನಯದ ಕರ್ಣನ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದ ವರದಿಯ ಪ್ರಕಾರ ಯೋಗಿಬಾಬು ಬಳಿ ಸದ್ಯ 20 ಚಿತ್ರಗಳಿವೆ.


Click it and Unblock the Notifications











