For Quick Alerts
  ALLOW NOTIFICATIONS  
  For Daily Alerts

  ಪುನೀತ್, ವಿಜಯ್ ಬಳಿಕ ಶಿವರಾಜ್ ಕುಮಾರ್ ಭೇಟಿಯಾದ ತಮಿಳು ಹಾಸ್ಯ ನಟ ಯೋಗಿ ಬಾಬು

  |

  ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸದ್ಯ ಬೆಂಗಳೂರಿನಲ್ಲಿದ್ದಾರೆ. ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ವಿಜಯ್ ಅವರನ್ನು ಭೇಟಿಯಾಗಿದ್ದ ಯೋಗಿಬಾಬು ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ. ತಮಿಳಿನಲ್ಲಿ ಭಾರಿ ಬೇಡಿಕೆ ಹೊಂದಿರುವ ಹಾಸ್ಯ ನಟ ಯೋಗಿ ಬಾಬು, ಬೆಂಗಳೂರು ರೌಂಡ್ಸ್ ಹಾಕುತ್ತಿರುವುದಲ್ಲದೆ, ಕನ್ನಡ ಸ್ಟಾರ್ಸ್ ಭೇಟಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಭಜರಂಗಿ-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಬಳಿಕ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೊರಟಿದೆ ಭಜರಂಗಿ-2 ತಂಡ. ನಟ ಯೋಗಿ ಬಾಬು ಭಜರಂಗಿ-2 ಸಿನಿಮಾ ಚಿತ್ರೀಕರಣ ಸ್ಥಳಕ್ಕೆ ಹೋಗಿ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

  ತಮಿಳು ನಟ ಯೋಗಿಬಾಬು ಸರಳತೆಗೆ ದುನಿಯಾ ವಿಜಯ್ ಫಿದಾ

  ಭಜರಂಗಿ-2 ಸೆಟ್ ನಲ್ಲಿ ತಮಿಳು ನಟ

  ಭಜರಂಗಿ-2 ಸೆಟ್ ನಲ್ಲಿ ತಮಿಳು ನಟ

  ಶಿವರಾಜ್ ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಪ್ರೀತಿಯಿಂದ ಮಾತನಾಡಿದ್ದಾರೆ. ಭಜರಂಗಿ-2 ಚಿತ್ರೀಕರಣ ಸೆಟ್ ಗೆ ಸ್ವಾಗತ ಮಾಡಿದ ಶಿವಣ್ಣ, ಯೋಗಿ ಬಾಬು ಜೊತೆ ಕೆಲವು ಸಮಯ ಕಳೆದಿದ್ದಾರೆ. ಯೋಗಿ ಬಾಬು ಮತ್ತು ಶಿವಣ್ಣ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ.

  ಪುನೀತ್, ವಿಜಯ್ ಭೇಟಿಯಾದ ನಟ

  ಪುನೀತ್, ವಿಜಯ್ ಭೇಟಿಯಾದ ನಟ

  ಅಂದ್ಹಾಗೆ ಈ ಮೊದಲು ಯೋಗಿ ಬಾಬು ಪುನೀತ್ ಮನೆಗೆ ತೆರಳಿದ್ದರು. ಸದಾಶಿವ ನಗರದಲ್ಲಿರುವ ಪುನೀತ್ ಮನೆಯಲ್ಲಿ ಯೋಗಿ ಬಾಬು ಕಾಣಿಸಿಕೊಂಡಿದ್ದರು. ಬಳಿಕ ವಿಜಯ್ ಮನೆಗೆ ಎಂಟ್ರಿ ಕೊಟ್ಟಿದ್ದ ಯೋಗಿ ಬಾಬು ಅವರನ್ನು ವಿಜಿ ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೆ ಯೋಗಿ ಬಾಬು ಸರಳತೆಗೆ ಫಿದಾ ಆಗಿರುವುದಾಗಿ ಹೇಳಿದ್ದಾರೆ.

  ತಮಿಳು ಸ್ಟಾರ್ ನಟರ ಚಿತ್ರದಲ್ಲಿ ಯೋಗಿ ಬಾಬು ಫಿಕ್ಸ್

  ತಮಿಳು ಸ್ಟಾರ್ ನಟರ ಚಿತ್ರದಲ್ಲಿ ಯೋಗಿ ಬಾಬು ಫಿಕ್ಸ್

  ಪ್ರಸ್ತುತ ತಮಿಳು ಸಿನಿಮಾರಂಗದಲ್ಲಿ ಬಹುಬೇಡಿಕಂಯ ನಟನಾಗಿರುವ ಯೋಗಿಬಾಬು ತಮಿಳು ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ವಿಜಯ್, ರಜನಿಕಾಂತ್, ಅಜಿತ್, ಆರ್ಯ, ವಿಶಾಲ್ ಸೇರಿದ್ದಂತೆ ಬಹುತೇಕ ಸ್ಟಾರ್ ಕಲಾವಿದರ ಸಿನಿಮಾದಲ್ಲಿ ಯೋಗಿಬಾಬು ಖಾಯಂ ಆಗಿದ್ದಾರೆ.

  ಪುನೀತ್ ಮನೆಗೆ ಭೇಟಿ ನೀಡಿದ ತಮಿಳು ಹಾಸ್ಯ ನಟ ಯೋಗಿಬಾಬು

  ಒಂದೇ ವರ್ಷದಲ್ಲಿ 30 ಸಿನಿಮಾ ರಿಲೀಸ್

  ಒಂದೇ ವರ್ಷದಲ್ಲಿ 30 ಸಿನಿಮಾ ರಿಲೀಸ್

  2019ನೇ ವರ್ಷದಲ್ಲಿ ಸುಮಾರು 32ಕ್ಕೂ ಅಧಿಕ ಚಿತ್ರಗಳಲ್ಲಿ ಯೋಗಿಬಾಬು ನಟಿಸಿದ್ದಾರೆ. 2020ನೇ ವರ್ಷದಲ್ಲೂ ಬಹಳ ಬ್ಯುಸಿಯಿರುವ ನಟ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tamil famous comedy Actor Yogi Babu meets Shivarajkumar in Bajrangi-2 shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X