For Quick Alerts
  ALLOW NOTIFICATIONS  
  For Daily Alerts

  ನಟ ವಿಶಾಲ್ ಜೊತೆ ನಟಿ ಅಭಿನಯ ಡೇಟಿಂಗ್? ಶೀಘ್ರದಲ್ಲೇ ಮದುವೆ? ಸ್ಪಷ್ಟನೆ ನೀಡಿದ ಚೆನ್ನೈ ಚೆಲುವೆ

  |

  ಚಿತ್ರರಂಗದಲ್ಲಿ ನಟ-ನಟಿಯರ ಡೇಟಿಂಗ್ ಸಮಾಚಾರ ಕಾಮನ್. ನಟ- ನಟಿ ಕೊಂಚ ಆತ್ಮೀಯವಾಗಿ ಕಾಣಿಸಿಕೊಂಡರೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗುತ್ತದೆ. ಸದ್ಯ ತಮಿಳು ನಟ ವಿಶಾಲ್ ಹಾಗೂ ನಟಿ ಅಭಿನಯ ಪ್ರೇಮಪಾಶಕ್ಕೆ ಸಿಲುಕಿದ್ದಾರೆ. ಇಬ್ಬರು ಶೀಘ್ರದಲ್ಲೇ ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ವಿಶಾಲ್ ಮೌನವಾಗಿದ್ದರೂ ನಟಿ ಅಭಿನಯ ಪ್ರತಿಕ್ರಿಯೆ ನೀಡಿದ್ದಾರೆ.

  'ಮಾರ್ಕ್ ಆಂಟನಿ' ಚಿತ್ರದಲ್ಲಿ ವಿಶಾಲ್ ಮಡದಿ ಪಾತ್ರದಲ್ಲಿ ಅಭಿನಯ ಬಣ್ಣ ಹಚ್ಚಿದ್ದಾರೆ. ಅದೇ ಕಾರಣಕ್ಕೆ ವಿಶಾಲ್ ಜೊತೆ ಆಕೆಯ ಹೆಸರು ತಳುಕು ಹಾಕಿಕೊಂಡಿದೆ. ಆದಿಕ್ ರವಿಚಂದ್ರನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಮಾರ್ಕ್ ಆಂಟನಿ'. ಟೈಟಲ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಕೆಲ ದಿನಗಳ ಹಿಂದೆ ಈ ಸಿನಿಮಾ ಚಿತ್ರೀಕರಣದ ವೇಳೆ ವಿಶಾಲ್ ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ರಿತು ವರ್ಮ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದು, ನಿರ್ದೇಶಕ ಎಸ್‌ ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ರಜನಿಕಾಂತ್ ಡಬಲ್ ಡೀಲ್.. ಲೈಕಾ ಸಂಸ್ಥೆಗೆ 2 ಕಾಲ್‌ಶೀಟ್: ಅಬ್ಬಬ್ಬಾ ಒಟ್ಟು ಸಂಭಾವನೆ ಎಷ್ಟು ಕೋಟಿ ಗೊತ್ತಾ?ರಜನಿಕಾಂತ್ ಡಬಲ್ ಡೀಲ್.. ಲೈಕಾ ಸಂಸ್ಥೆಗೆ 2 ಕಾಲ್‌ಶೀಟ್: ಅಬ್ಬಬ್ಬಾ ಒಟ್ಟು ಸಂಭಾವನೆ ಎಷ್ಟು ಕೋಟಿ ಗೊತ್ತಾ?

  ನಟ ವಿಶಾಲ್ ಜೊತೆ ನಟಿಯರ ಹೆಸರು ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ನಟಿ ವರಲಕ್ಷ್ಮಿ ಶರತ್ ಕುಮಾರ್ ಜೊತೆಗೂ ವಿಶಾಲ್ ಡೇಟಿಂಗ್ ನಡೆಸ್ತಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಇಬ್ಬರು ದೂರಾಗಿದ್ದಾರೆ ಎನ್ನಲಾಯಿತು.

   ಎಲ್ಲಾ ಬರೀ ಗಾಸಿಪ್

  ಎಲ್ಲಾ ಬರೀ ಗಾಸಿಪ್

  ಸದ್ಯ ಹರಿದಾಡುತ್ತಿರುವ ವಂದತಿಯ ಬಗ್ಗೆ ನಟ ವಿಶಾಲ್ ಪ್ರತಿಕ್ರಿಯಿಸಿಲ್ಲ. ಆದರೆ ನಟಿ ಅಭಿನಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ತಮ್ಮ ಮಧ್ಯೆ ಯಾವ ರಿಲೇಶನ್‌ಶಿಪ್ ಇಲ್ಲ, 'ಮಾರ್ಕ್ ಆಂಟೋನಿ' ಚಿತ್ರದಲ್ಲಿ ವಿಶಾಲ್ ಪತ್ನಿ ಆಗಿ ನಟಿಸಿದ್ದೀನಿ ಅಷ್ಟೇ. ರೀಲ್ ಲೈಫ್‌ನಲ್ಲಿ ಹೆಂಡತಿಯಾಗಿ ನಟಿಸಿದ ಮಾತ್ರಕ್ಕೆ ರಿಯಲ್ ಲೈಫ್‌ನಲ್ಲಿ ಹೆಂಡತಿ ಆಗಿಬಿಡುತ್ತೀನಾ?" ಎಂದು ಮರುಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ಅಭಿನಯ ಫುಲ್‌ಸ್ಟಾಪ್ ಇಟ್ಟಿದ್ದಾರೆ.

   ಮುರಿದ ಬಿದ್ದ ವಿಶಾಲ್ ನಿಶ್ಚಿತಾರ್ಥ?

  ಮುರಿದ ಬಿದ್ದ ವಿಶಾಲ್ ನಿಶ್ಚಿತಾರ್ಥ?

  3 ವರ್ಷಗಳ ಹಿಂದೆ ಹೈದರಾಬಾದ್ ಮೂಲದ ಅನಿಷಾ ಅಲ್ಲಾ ರೆಡ್ಡಿ ಜತೆಗೆ ನಟ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಇಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ನಂತರ ಇಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದನ್ನು ವಿಶಾಲ್ ತಂದೆ ಜಿ. ಕೆ ರೆಡ್ಡಿ ತಳ್ಳಿ ಹಾಕಿದ್ದರು. ಶೀಘ್ರದಲ್ಲೇ ಇಬ್ಬರ ಮದುವೆ ನಡೆಯುತ್ತೆ ಎಂದು ಹೇಳಿದ್ದರು. ಆದರೆ ವಿಶಾಲ್- ಅನಿಷಾ ಮದುವೆ ನಡೆಯಲೇ ಇಲ್ಲ.

   ವಿಶೇಷ ಚೇತನ ನಟಿ ಅಭಿನಯ

  ವಿಶೇಷ ಚೇತನ ನಟಿ ಅಭಿನಯ

  ಆರಂಭದಲ್ಲಿ ತೆಲುಗು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಅವರಿಗೆ ತಮಿಳಿನ 'ನಾಡೋಡಿಗಳ್' ಚಿತ್ರದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತ್ತು. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಸರಿಯಾಗಿ ಕಿವಿ ಕೇಳಿಸಿದ, ಮಾತು ಬಾರದ ಅಭಿನಯ ಅವರ ಸಾಧನೆ ಇದ್ಯಾವುದು ಅಡ್ಡಿಯಾಗಲಿಲ್ಲ. ಪಂಚ ಭಾಷಾ ತಾರೆಯಾಗಿ ಅಭಿನಯ ಗುರ್ತಿಸಿಕೊಂಡಿದ್ದಾರೆ. ಹಿಂದಿ ಜೊತೆಗೆ ಕನ್ನಡ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ.

   ಪುನೀತ್ ಸಹೋದರಿ ಪಾತ್ರದಲ್ಲಿ ನಟನೆ

  ಪುನೀತ್ ಸಹೋದರಿ ಪಾತ್ರದಲ್ಲಿ ನಟನೆ

  ಪುನೀತ್ ರಾಜ್‌ಕುಮಾರ್ ನಟನೆಯ ಹುಡುಗ್ರು ಚಿತ್ರದಲ್ಲಿ ಅಭಿನಯ ಬಣ್ಣ ಹಚ್ಚಿದ್ದರು. ಅಪ್ಪು ಸಹೋದರಿಯ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆ ವರ್ಷ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೂ ನಾಮಿನೇಟ್ ಆಗಿದ್ದರು. ಇನ್ನು ರಾಗಿಣಿ, ಧ್ರುವ ಶರ್ಮಾ ಹಾಗೂ ಕಿಚ್ಚ ಸುದೀಪ್ ನಟನೆಯ 'ಕಿಚ್ಚು' ಚಿತ್ರದಲ್ಲೂ ಚೆನ್ನೈ ಚೆಲುವೆ ಅಭಿನಯ ಬಣ್ಣ ಹಚ್ಚಿದ್ದರು.

  ವಿಕ್ಕಿ- ನಯನ್ ಸರೋಗಸಿ ವಿವಾದ ಸುಖಾಂತ್ಯ: ವರದಿಯಲ್ಲಿದೆ ಆಸಕ್ತಿಕರ ಅಂಶಗಳು!ವಿಕ್ಕಿ- ನಯನ್ ಸರೋಗಸಿ ವಿವಾದ ಸುಖಾಂತ್ಯ: ವರದಿಯಲ್ಲಿದೆ ಆಸಕ್ತಿಕರ ಅಂಶಗಳು!

  English summary
  Tamil Actress Abhinaya Reacts To His Dating Rumours With Actor Vishal Here’s What she Said. Know More.
  Monday, October 31, 2022, 14:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X