For Quick Alerts
  ALLOW NOTIFICATIONS  
  For Daily Alerts

  ಸಿಲ್ಕ್ ಸ್ಮಿತಾ ಬಯೋಪಿಕ್ ಘೋಷಣೆ: 'ಹಾಟ್‌ ನಟಿ'ಯ ಪಾತ್ರದಲ್ಲಿ ಯಾರು?

  |

  80ರ ದಶಕದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಕುರಿತು ಬಯೋಪಿಕ್ ಸಿನಿಮಾ ಬರಲಿದೆ. ಈಗಾಗಲೇ 'ಕಬಾಲಿ' ಚಿತ್ರದ ನಿರ್ದೇಶಕ ಪಾ ರಂಜಿತ್ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ. ಇದೀಗ, ಕಮರ್ಷಿಯಲ್ ಸಿನಿಮಾ ಮಾಡಲು ತಮಿಳು ಚಿತ್ರರಂಗ ಮುಂದಾಗಿದೆ.

  ಸೆಪ್ಟೆಂಬರ್ 23ಕ್ಕೆ ಸಿಲ್ಕ್ ಸ್ಮಿತಾ ನಿಧನರಾಗಿ 24 ವರ್ಷ ಕಳೆದಿದೆ. 35 ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿಯ ಜೀವನವನ್ನು ತೆರೆಮೇಲೆ ತರಲು ಇಬ್ಬರು ಖ್ಯಾತ ನಿರ್ಮಾಪಕರು ಸಜ್ಜಾಗಿದ್ದಾರೆ. ಸಿಲ್ಕ್ ಸ್ಮಿತಾ ಜೀವನ ಕಥೆ ಹುಡುಕಿ ಹೋದರೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಬೆಳಕಿದೆ ಬರುತ್ತದೆ. ಹಾಗಾಗಿ, ಈ ನಟಿಯ ಬಗ್ಗೆ ಕುತೂಹಲ ಸಹ ಹೆಚ್ಚಿದೆ. ಅಷ್ಟಕ್ಕೂ, ಸಿಲ್ಕ್ ಸ್ಮಿತಾ ಬಯೋಪಿಕ್‌ಗೆ ಪ್ಲಾನ್ ಮಾಡಿರುವುದು ಯಾರು? ಈ ಚಿತ್ರಕ್ಕೆ ನಾಯಕಿ ಯಾರಾಗಬಹುದು? ಮುಂದೆ ಓದಿ...

  ಸಿಲ್ಕ್ ಸ್ಮಿತಾ ಕುರಿತು ಮತ್ತೊಮ್ಮೆ ಬಯೋಪಿಕ್.!ಸಿಲ್ಕ್ ಸ್ಮಿತಾ ಕುರಿತು ಮತ್ತೊಮ್ಮೆ ಬಯೋಪಿಕ್.!

  'ಸಿಲ್ಕ್ ಸ್ಮಿತಾ' ಚಿತ್ರದ ನಿರ್ದೇಶಕ-ನಿರ್ಮಾಪಕ ಯಾರು?

  'ಸಿಲ್ಕ್ ಸ್ಮಿತಾ' ಚಿತ್ರದ ನಿರ್ದೇಶಕ-ನಿರ್ಮಾಪಕ ಯಾರು?

  ತಮಿಳಿನ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಚಿತ್ರಲಕ್ಷ್ಮಣನ್ ಹಾಗೂ ಎಚ್ ಮುರಳಿ ಜಂಟಿಯಾಗಿ ಸಿಲ್ಕ್ ಸ್ಮಿತಾ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಬಯೋಪಿಕ್ ಚಿತ್ರವನ್ನು ಕಣ್ಣಾ ಲಡ್ಡು ತಿನ್ನಾ ಆಸೆಯಾ ಚಿತ್ರ ನಿರ್ದೇಶಿಸಿದ್ದ ಕೆಎಸ್ ಮಣಿಕಂಠನ್ ನಿರ್ದೇಶನ ಮಾಡಲಿದ್ದಾರೆ ಎಂದು ಖ್ಯಾತ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ನೀಡಿದ್ದಾರೆ.

  ನಾಯಕಿ ಯಾರಾಗಬಹುದು?

  ನಾಯಕಿ ಯಾರಾಗಬಹುದು?

  ಸಿಲ್ಕ್ ಸ್ಮಿತಾ ಬಯೋಪಿಕ್ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕರು ಸಜ್ಜಾಗಿದ್ದಾರೆ. ಆದ್ರೆ, ಈ ಚಿತ್ರಕ್ಕೆ ಯಾರು ನಾಯಕಿಯಾಗಬಹುದು ಎಂಬ ಕುತೂಹಲ ಕಾಡುತ್ತಿದೆ. ತಮಿಳು, ತೆಲುಗು ಹಾಗೂ ಕನ್ನಡ ಇಂಡಸ್ಟ್ರಿಯಲ್ಲಿ ಸಿಲ್ಕ್ ಸ್ಮಿತಾ ಮಿಂಚಿದ್ದರು. ಹೆಚ್ಚಾಗಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದರು. ಸದ್ಯಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.

  ಸಿನಿಮಾ ಸೆಟ್‌ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾಸಿನಿಮಾ ಸೆಟ್‌ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾ

  450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

  450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

  80ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಲ್ಕ್ ಸ್ಮಿತಾ ಕಡಿಮೆ ಅವಧಿಯಲ್ಲಿ ಸುಮಾರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಸ್ಪೆಷಲ್ ನಂಬರ್ ಡ್ಯಾನ್ಸ್ ಗಳಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು.

  ಅಪ್ಪನ ಹೆಸರು ಹಾಳು ಮಾಡಿದ್ಲು ದೀಪಿಕಾ ಪಡುಕೋಣೆ | Filmibeat Kannada
  'ಡರ್ಟಿ ಪಿಕ್ಚರ್' ಬಂದಿತ್ತು

  'ಡರ್ಟಿ ಪಿಕ್ಚರ್' ಬಂದಿತ್ತು

  ಈ ಹಿಂದೆಯಲ್ಲಿ ಸಿಲ್ಕ್ ಸ್ಮಿತಾ ಅವರ ಕುರಿತು 'ಡರ್ಟಿ ಪಿಕ್ಚರ್' ಎಂಬ ಸಿನಿಮಾ ಬಂದಿತ್ತು. ಇದೇ ಚಿತ್ರ ಕನ್ನಡದಲ್ಲೂ ಸಿಲ್ಕ್ ಸಖತ್ ಹಾಟ್ ಮಗಾ ಎಂಬ ಹೆಸರಿನಲ್ಲಿ ತಯಾರಾಗಿತ್ತು. ಹಿಂದಿಯಲ್ಲಿ ವಿದ್ಯಾ ಬಾಲನ್ ಹಾಗೂ ಕನ್ನಡದಲ್ಲಿ ವೀಣಾ ಮಲ್ಲಿಕ್ ನಟಿಸಿದ್ದರು.

  English summary
  Actor-Producer-Director Chitralaxmanan’s & H Murali Joining together for the Biopic of Late Tamil Actress Silk Smitha to be directed by K.S.Manikandan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X