For Quick Alerts
  ALLOW NOTIFICATIONS  
  For Daily Alerts

  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೈಕಲ್‌ನಲ್ಲಿ ಬಂದು ಮತಚಲಾಯಿಸಿದ ದಳಪತಿ ವಿಜಯ್

  |

  ಇಂದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ಬೆಳಗ್ಗೆಯಿಂದನೇ ಬಿರುಸಿನ ಮತದಾನ ಆರಂಭವಾಗಿದೆ. ತಮಿಳು ಸ್ಟಾರ್ ನಟರು ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ. ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಅಜಿತ್ ದಂಪತಿ, ನಟ ಸೂರ್ಯ, ಕಾರ್ತಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಹಕ್ಕು ಚಲಾಸಿದ್ದಾರೆ.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada

  ವಿಶೇಷ ಎಂದರೆ ದಳಪತಿ ವಿಜಯ್ ಸೈಕಲ್‌ನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಾಸ್ಕ್ ಧರಿಸಿ, ನೀಲಿ ಬಣ್ಣದ ಶರ್ಟ್‌ನಲ್ಲಿ ಸೈಕಲ್ ಏರಿ ಮತದಾನ ಕೇಂದ್ರಕ್ಕೆ ಬಂದ ವಿಜಯ್ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಜಯ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಪೊಲೀಸರು ಜನರನ್ನು ಚದುರಿಸಿ ಮತಗಟ್ಟೆ ಒಳಗೆ ಹೋಗಲು ವಿಜಯ್‌ಗೆ ಸಹಕರಿಸಿದ್ದಾರೆ. ಮುಂದೆ ಓದಿ...

  ಡೀಸೆಲ್, ಪೆಟ್ರೋಲ್ ಬೆಲೆ ವಿರುದ್ಧ ವಿಜಯ್ ಪ್ರತಿಭಟನೆ

  ಡೀಸೆಲ್, ಪೆಟ್ರೋಲ್ ಬೆಲೆ ವಿರುದ್ಧ ವಿಜಯ್ ಪ್ರತಿಭಟನೆ

  ಚೆನ್ನೈನ ನೀಲಂಕರೈನಲ್ಲಿರುವ ಮತದಾನ ಕೇಂದ್ರದಲ್ಲಿ ವಿಜಯ್ ಹಕ್ಕು ಚಲಾಯಿಸಿ, ಕ್ಯಾಮರಾಗೆ ಪೋಸ್ ನೀಡಿದ್ದಾರೆ. ವಿಜಯ್ ಸೈಕಲ್‌ನಲ್ಲಿ ಬಂದಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಜನಪ್ರಿಯ ಸಿದ್ಧಾಂತದ ಪ್ರಕಾರ ಸೈಕಲ್ ಏರಿ ಮತಗಟ್ಟೆಗೆ ಬರುವುದು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಮಾಡುವ ಪ್ರತಿಭಟನೆಯಾಗಿದೆ.

  ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಅಸಮಾಧಾನ

  ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಅಸಮಾಧಾನ

  ಸೈಕಲ್ ಏರಿ ಮತ ಚಲಾಯಿಸಲು ಬರುವ ಮೂಲಕ ವಿಜಯ್ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಂದ ಹಾಗೆ ವಿಜಯ್ ತಮ್ಮ ಸಿನಿಮಾಗಳಲ್ಲೂ ಸರ್ಕಾರದ ಅನೇಕ ನಿಯಮಗಳನ್ನು ವಿರೋಧಿಸುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಮಕ್ಕಳ ಜೊತೆ ಬಂದು ಮತಚಲಾಯಿಸಿದ ಕಮಲ್ ಹಾಸನ್

  ಮಕ್ಕಳ ಜೊತೆ ಬಂದು ಮತಚಲಾಯಿಸಿದ ಕಮಲ್ ಹಾಸನ್

  ಇದೀಗ ಸೈಕಲ್ ಏರಿ ಬಂದು ಮತಚಲಾಯಿಸುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್ನು ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಹಾಗೂ ದಕ್ಷಿಣ ಕೊಯಮತ್ತೂರು ಕ್ಷೇತ್ರದ ಅಭ್ಯರ್ಥಿ ಕಮಲ್ ಹಾಸನ್ ತಮ್ಮ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಜೊತೆ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

  ಕ್ಯೂನಲ್ಲಿ ನಿಂತು ಹಕ್ಕು ಚಲಾಯಿಸಿದ ಅಜಿತ್ ದಂಪತಿ

  ಕ್ಯೂನಲ್ಲಿ ನಿಂತು ಹಕ್ಕು ಚಲಾಯಿಸಿದ ಅಜಿತ್ ದಂಪತಿ

  ಸರಳತೆ ವ್ಯಕ್ತಿತ್ವ, ಮಾನವೀಯ ಗುಣಗಳ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ನಟ ಅಜಿತ್ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಅಜಿತ್ ದಂಪತಿ ತಮ್ಮ ಹಕ್ಕು ಚಲಾಯಿಸಲು ಕ್ಯೂನಲ್ಲಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Tamil Nadu Elections 2021: Actor Vijay cycles to Neelankarai polling booth to cast his vote.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X