For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ತಮಿಳುನಾಡು ಸರ್ಕಾರ ಆದೇಶ

  |

  ಕೊರೊನಾ ಕರಿ ನೆರಳಿನಿಂದ ನಲುಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಆಕ್ಯೂಪೆನ್ಸಿಗೆ ಅವಕಾಶ ನೀಡಿದ್ದು ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಆದರೆ, ಪರ ರಾಜ್ಯಗಳಲ್ಲಿ 100 ಪರ್ಸೆಂಟ್ ಆಕ್ಯೂಪೆನ್ಸಿಗೆ ಅವಕಾಶ ಇಲ್ಲದಿರುವ ಕಾರಣಕ್ಕೆ ಕೋಟಿಗೊಬ್ಬ3 ಚಿತ್ರ ಕರ್ನಾಟಕದಲ್ಲಿ ಮಾತ್ರ ತೆರೆಕಂಡಿದೆ. ಈಗ ತಮಿಳುನಾಡು ಸರ್ಕಾರ ಸಿನಿಮಾ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ. ಚಿತ್ರಮಂದಿರಗಳ ಮೇಲಿನ ಲಾಕ್‌ಡೌನ್ ತೆರವುಗೊಳಿಸಿ 100 ಪರ್ಸೆಂಟ್ ಆಕ್ಯೂಪೆನ್ಸಿಗೆ ಅವಕಾಶ ನೀಡಿದೆ.

  ಈ ಸುದ್ದಿ ಸಿನಿಮಾ ಮಂದಿ ಮತ್ತು ಸಿನಿ ಪ್ರಿಯರಲ್ಲಿ ಸಂತಸ ತಂದಿದೆ. ನವಂಬರ್ 1ನೇ ತಾರೀಕಿನಿಂದ ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ.

  ಈ ಹಿಂದೆಯೇ ಸಿನಿಮಾ ಮಂದಿ 100 ಪರ್ಸೆಂಟ್ ಆಕ್ಯೂಪೆನ್ಸಿಗೆ ಬೇಡಿಕೆ ಇಟ್ಟಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಅವಕಾಶ ನೀಡಲು ಸಾಧ್ಯವಾಗಿರಲಿಲ್ಲ. ಈಗ ತಜ್ಞರ ವರದಿಯ ಆಧಾರದ ಮೇರೆಗೆ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಕೊರೊನಾ ನಿಯಮಗಳನ್ನು ಚಿತ್ರಮಂದಿರದಲ್ಲಿ ಪಾಲಿಸುವುದು ಕಡ್ಡಾಯ.

  ಲಾಕ್‌ಡೌನ್‌ನಿಂದ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗದೇ ಹಾಗೆ ಉಳಿದು ಬಿಟ್ಟಿವೆ. ಹಾಗಾಗಿ ಈಗ ದೊಡ್ಡ ದೊಡ್ಡ ಚಿತ್ರಗಳು ಒಟ್ಟೊಟ್ಟಿಗೆ ಪೈಪೋಟಿಗೆ ಇಳಿಯುವ ಸಾಧ್ಯತೆ ಕೂಡ ಇದೆ. ಬಿಗ್ ಬಜೆಟ್‌ನ ಚಿತ್ರಗಳು ರಿಲೀಸ್‌ ಆಗಬೇಕು ಅಂದರೆ ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್ ಆಕ್ಯೂಪೆನ್ಸಿ ಅನಿವಾರ್ಯ ಆಗಿತ್ತು. ಈಗ ಸರ್ಕಾರ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ಅಣಿಯಾಗುತ್ತಿವೆ. ಜೊತೆಗೆ ಸಾಲು ಸಾಲು ಹಬ್ಬಗಳು ಇರುವುದರಿಂದ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ಸ್ಟಾರ್ ಸಿನಿಮಾಗಳು ಸಜ್ಜಾಗಿವೆ. ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ನವೆಂಬರ್ 4ರಂದು ರಿಲೀಸ್ ಆಗಲಿದೆ. ಜೊತೆಗೆ ವಿಜಯ್ ಅಭಿನಯದ ಬೀಸ್ಟ್ ಮತ್ತು ಅಜಿತ್ ಅಭಿನಯದ ವಲಿಮೈ ಸಿನಿಮಾ ಕೂಡ ರಿಲೀಸ್‌ಗೆ ರೆಡಿ ಇದೆ.

  ತಮಿಳುನಾಡಿನಲ್ಲಿ ಚಿತ್ರಮಂದಿರಗಳು ತೆರೆದರೆ ಅದು ತೆಲುಗು ಚಿತ್ರಗಳಿಗೂ ಪ್ಲಸ್ ಪಾಯಿಂಟ್. ತೆಲುಗು ಸಿನಿಮಾಗಳ ಅಬ್ಬರ ಜನವರಿಯಿಂದ ಆರಂಭವಾಗಲಿದೆ. ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ತಯಾರಾಗುತ್ತಿವೆ. ಹಾಗಾಗಿ ಬಹುಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ತೆರೆಗೆ ಬರಬೇಕು ಅಂದ್ರೆ, ಎಲ್ಲಾ ಕಡೆಯಲ್ಲೂ 100 ಪರ್ಸೆಂಟ್ ಆಕ್ಯೂಪೆನ್ಸಿಸಿ ಸಿಗುವುದು ತುಂಬಾ ಮುಖ್ಯ. ಈಗ ತಮಿಳುನಾಡಿನಲ್ಲಿ ಸರ್ಕಾರ 100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದೆ. ಪ್ರಭಾಸ್ ಅಭಿನಯದ ರಾಧೆ-ಶ್ಯಾಮ್ , ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಠ, ಸೇರಿದಂತೆ ರಾಜಮೌಳಿಯ ಆರ್‌ಆರ್‌ಆರ್ ಸಿನಿಮಾಗೆ ತಮಿಳುನಾಡು ಪ್ರೇಕ್ಷಕರು ಬಹುಮುಖ್ಯ. ತಮಿಳು ನಾಡು ಸರ್ಕಾರದ ಈ ನಡೆ ಕನ್ನಡದ ಕೆಜಿಎಫ್ ಚಿತ್ರ ಸೇರಿ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ವರದಾನವಾಗಲಿದೆ.

  English summary
  100% occupancy allowed at tamil nadu cinema halls .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X