Don't Miss!
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾ ಚೆನ್ನಾಗಿಲ್ಲ ಅಂದ್ರೂ ಅಜಿತ್ 'ವಾಲಿಮೈ' 100 ಕೋಟಿ ಬಾಚಿದ್ದೇಗೆ? ಕರ್ನಾಟಕದ ಕಲೆಕ್ಷನ್ ಎಷ್ಟು?
ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಇತ್ತೀಚೆಗೆ ಅಭಿಮಾನಿಗಳಲ್ಲಿ ತನ್ನ ಹೆಸರಿನೊಂದಿಗೆ 'ತಲಾ' ಅಂತ ಕರೆಯಬೇಡಿ ಅಂತ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಬಿಡುಗಡೆಯಾಗುತ್ತಿರುವ ಅಜಿತ್ ನಟನೆಯ ಮೊದಲ ಚಿತ್ರ. ಇದೇ ಫೆಬ್ರವರಿ 24ರಂದು ಅಜಿತ್ ಸಿನಿಮಾ 'ವಲಿಮೈ' ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎಚ್ ವಿನೋದ್ ನಿರ್ದೇಶನದ ಈ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
'ವಲಿಮೈ' ಚಿತ್ರವನ್ನು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಮುಗಿಯುತ್ತಿದ್ದಂತೆ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಅಜಿತ್ ಚಿತ್ರದ ಗಳಿಕೆ ಮಾತ್ರ ಯಾವುದೇ ರೀತಿ ಎಫೆಕ್ಟ್ ಆಗಿಲ್ಲ. ಮೂರೇ ದಿನದಲ್ಲಿ ತಮಿಳಿನ ಸೂಪರ್‌ಸ್ಟಾರ್ ಅಜಿತ್ ಸಿನಿಮಾ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಈ ವಾರಾಂತ್ಯದೊಳಗೆ 'ವಲಿಮೈ' ಹಾಕಿದ ಬಂಡವಾಳವನ್ನು ದೋಚಿಕೊಳ್ಳುತ್ತೆ ಎನ್ನಲಾಗಿದೆ.
'ವಲಿಮೈ'
ಸಿನಿಮಾದ
ಕೆಲವು
ದೃಶ್ಯ,
ಹಾಡಿಗೆ
ಕತ್ತರಿ

'ವಲಿಮೈ' ಬಾಕ್ಸಾಫೀಸ್ ರೆಸ್ಪಾನ್ಸ್ ಸೂಪರ್
'ವಲಿಮೈ' ಒಬ್ಬ ಪೊಲೀಸ್ ಅಧಿಕಾರಿಯ ಕಥೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಜಿತ್ ಕಾಣಿಸಿಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕ್ರೈಂ ಸೀನ್‌ಗಳನ್ನು ಹುಡುಕಿಕೊಂಡು ಹೋಗುವ ಕಥೆಯೇ 'ವಲಿಮೈ'. ಭಾನುವಾರ ಬಿಟ್ಟು ಕಳೆದ ಮೂರು ದಿನಗಳಿಂದ ಅಜಿತ್ ನಟನೆಯ 'ವಲಿಮೈ' ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ಭಾರತ ಅಷ್ಟೇ ಅಲ್ಲ, ಸಿಂಗಾಪುರ, ಮಲೇಷಿಯಾ, ಯುಎಇ, ಸೌದಿ ಸೇರಿದಂತೆ ಹಲವೆಡೆ ಈ ಚಿತ್ರದ ಗಳಿಕೆ ಅದ್ಬುತವಾಗಿದೆ.
|
'ವಲಿಮೈ' 3 ದಿನದ ಗಳಿಕೆ 100 ಕೋಟಿ
ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ 'ವಲಿಮೈ' ಕಲೆಕ್ಷನ್ ಅದ್ಭುತವಾಗಿದೆ. ಬಿಡುಗಡೆಯಾದ ಮೂರು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ವಿಶ್ವದಾದ್ಯಂತ 'ವಲಿಮೈ' ಮೊದಲ ದಿನ ಗಳಿಸಿದ್ದು, ಬರೋಬ್ಬರಿ 59.48 ಕೋಟಿ ಅಂತ ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. ಎರಡನೇ ದಿನ 35.78 ಕೋಟಿ ಗಳಿಸಿದೆ. ಎರಡೇ ದಿನಕ್ಕೆ ಬರೋಬ್ಬರು 95.26 ಕೋಟಿ ಕಲೆ ಹಾಕಿದೆ. ಇನ್ನೂ ಮೂರನೇ ದಿನದ ಗಳಿಕೆಯನ್ನು ಚಿತ್ರತಂಡ ಹೇಳಬೇಕಿದೆ. ಆದರೆ, ಮೂರನೇ ದಿನವೂ 30 ಕೋಟಿ ಆಸು-ಪಾಸಿನಲ್ಲಿ ಗಳಿಕೆ ಕಂಡಿರಬಹುದು ಎಂದು ಅಂದಾಜಿಸಲಾಗುತ್ತಿದೆ.
|
ತಮಿಳುನಾಡಿನಲ್ಲಿ 100 ಕೋಟಿ ಸನಿಹದಲ್ಲಿದೆ
'ವಲಿಮೈ' ಸಿನಿಮಾ ತಮಿಳುನಾಡಿನಲ್ಲಿ ಚಿಂದಿ ಉಡಾಯಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ 81 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಕೊರೊನಾ ಬಳಿಕ ತಮಿಳು ಚಿತ್ರವೊಂದಕ್ಕೆ ಗ್ರ್ಯಾಂಡ್ ಒಪನಿಂಗ್ ಸಿಕ್ಕಿದೆ. ತಮಿಳುನಾಡಿನಲ್ಲಿ ಮೊದಲ ದಿನ 36.17 ಕೋಟಿ, ಎರಡನೇ ದಿನ 24.62 ಕೋಟಿ, ಮೂರನೇ ದಿನ 20.46 ಕೋಟಿ, ಒಟ್ಟು ಮೂರು ದಿನದ ಕಲೆಕ್ಷನ್ 81.25 ಕೋಟಿ. ನಾಲ್ಕನೇ ದಿನ ಭಾನುವಾರ ಕೂಡ ಅಂದಾಜು 20 ಕೋಟಿ ಕಲೆ ಹಾಕಬಹುದು ಎನ್ನಲಾಗಿದೆ. ಹಾಗೇನಾದರೂ ಭಾನುವಾರ 20 ಕೋಟಿ ಗಳಿಸಿದ್ದೇ ಆದಲ್ಲಿ ಕೇವಲ ತಮಿಳುನಾಡಿನಲ್ಲಿಯೇ 100 ಕೋಟಿ ಲೂಟಿ ಮಾಡಿದಂತೆ ಆಗುತ್ತೆ.

ವಾರದೊಳಗೆ 150 ಕೋಟಿ ಫಿಕ್ಸ್
ಬೋನಿ ಕಪೂರ್ ನಿರ್ಮಿಸಿರುವ 'ವಲಿಮೈ' ಸಿನಿಮಾದ ಬಜೆಟ್ 150 ಕೋಟಿ. ಸಿನಿಮಾದ ಈ ಬಜೆಟ್ ಅನ್ನು ಕೇವಲ ಇನ್ನು ಎರಡು ದಿನದೊಳಗೆ ವಾಪಸ್ ಪಡೆಯುತ್ತೆ. ಆ ಮೇಲೆ ಗಳಿಸುವ ಹಣವೆಲ್ಲವೂ ಲಾಭದ ಪಟ್ಟಿಗೆ ಸೇರುತ್ತೆ. ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಅಜಿತ್ ಜೊತೆ ಕಾರ್ತಿಕೇಯ ಗುಮ್ಮಕೊಂಡ, ಹುಮಾ ಖುರೇಶಿ ಸೇರಿದಂತೆ ಪ್ರಮುಖ ನಟರೇ ನಟಿಸಿದ್ದಾರೆ. ಯಶಸ್ಸಿನ ಹಾದಿಯಲ್ಲಿ ಸಿನಿಮಾ ಸಾಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಯಾವ ದಾಖಲೆ ಬರೆಯುತ್ತೆ ಎಂಬುದನ್ನು ಕಾದು ನೋಡಬೇಕಿದೆ.