For Quick Alerts
  ALLOW NOTIFICATIONS  
  For Daily Alerts

  ಮಾಜಿ ಪ್ರಿಯಕರನನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದ ನಟಿ.!

  |

  42 ವರ್ಷದ ತಮಿಳು ಕಿರುತೆರೆಯ ನಟಿ ಎಸ್.ದೇವಿ ತನ್ನ ಮಾಜಿ ಪ್ರಿಯಕರನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚೆನ್ನೈನ ಕೊಳತ್ತೂರಿನಲ್ಲಿ ನಡೆದಿದೆ. ಮತ್ತೆ ಪ್ರೀತಿಸುವಂತೆ ಮಾಜಿ ಪ್ರಿಯಕರ ಒತ್ತಾಯಿಸಿದ್ದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

  ಮಾಜಿ ಪ್ರಿಯಕರನನ್ನು ಕೊಲೆ ಮಾಡಿ ಪೊಲೀಸರಿಗೆ ಕಿರುತೆರೆ ನಟಿ ಎಸ್.ದೇವಿ ಶರಣಾಗಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಚೆನ್ನೈ ಪೊಲೀಸರು, ಘಟನೆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

  ಘಟನೆಯ ಹಿನ್ನಲೆ: ಎಂಟು ವರ್ಷಗಳ ಹಿಂದೆ ಮಧುರೈ ಮೂಲದ ರವಿ ಎಂಬುವರು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಫಿಲ್ಮ್ ಟೆಕ್ನೀಷಿಯನ್ ಆಗಿದ್ದ ಆತ ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಎಸ್.ದೇವಿ ಜೊತೆ ಸಂಬಂಧ ಬೆಳೆಸಿದ್ದ.

  ಇಬ್ಬರ ನಡುವಿನ ಅನೈತಿಕ ಸಂಬಂಧ ಎಸ್.ದೇವಿ ಪತಿ ಶಂಕರ್ ಅರಿವಿಗೆ ಬಂತು. ಬಳಿಕ ಅಲ್ಲಿಂದ ಜಾಗ ಖಾಲಿ ಮಾಡಿದ ಶಂಕರ್, ಪತ್ನಿ ಎಸ್.ದೇವಿಯನ್ನ ತಂಗಿ ಮನೆಯಲ್ಲಿರಿಸಿದ್ದರು. ಫರ್ನಿಚರ್ ಕೆಲಸ ಮಾಡುತ್ತಿರುವ ಶಂಕರ್, ಪತ್ನಿ ಎಸ್.ದೇವಿಗೆ ಟೈಲರಿಂಗ್ ಕೆಲಸ ಮಾಡುವಂತೆ ಸೂಚಿಸಿದ್ದರು.

  ಎರಡು ವರ್ಷಗಳಿಂದ ತಂಗಿ ಮನೆಯಲ್ಲಿರುವ ಎಸ್.ದೇವಿಯನ್ನ ಹುಡುಕುವಲ್ಲಿ ರವಿ ಯಶಸ್ವಿಯಾದ. ಕೊಳತ್ತೂರಿನಲ್ಲಿ ಎಸ್.ದೇವಿ ತಂಗಿ ಮನೆಗೆ ಮೊನ್ನೆ ರವಿ ಭೇಟಿ ಕೊಟ್ಟಿದ್ದ. ಮತ್ತೆ ಸಂಬಂಧ ಮುಂದುವರೆಸುವಂತೆ ಎಸ್.ದೇವಿ ಮೇಲೆ ರವಿ ಒತ್ತಡ ಹಾಕಿದ್ದ.

  ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಕೊನೆಗೆ ರವಿ ಮೇಲೆ ಎಸ್.ದೇವಿ ಹಲ್ಲೆ ನಡೆಸಿ, ಆತನ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆಗೈದಿದ್ದಾಳೆ. ಆನಂತರ ರಾಜಮಂಗಳಮ್ ಪೊಲೀಸ್ ಠಾಣೆಗೆ ತೆರಳಿ ಎಸ್.ದೇವಿ ಸರೆಂಡರ್ ಆಗಿದ್ದಾಳೆ.

  ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಎಸ್.ದೇವಿ ಪತಿ ಶಂಕರ್, ಎಸ್.ದೇವಿಯ ತಂಗಿ ಮತ್ತು ತಂಗಿ ಗಂಡನನ್ನು ಬಂಧಿಸಿದ್ದಾರೆ.

  English summary
  Tamil TV Actress S Devi beats Ex-Boyfriend to death in Tamil Nadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X