For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿಯ ಮಾನವೀಯತೆ ಗುಣ ಬಿಚ್ಚಿಟ್ಟ ತರಕಾರಿ ವ್ಯಾಪಾರಿ

  |

  ನೂರಾರು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ, ಏಳು ಬೀಳುಗಳನ್ನು ಕಂಡ ನಂತರ ವಿಜಯ್ ಸೇತುಪತಿ ಸೂಪರ್ ಸ್ಟಾರ್ ಎನಿಸಿಕೊಂಡಿರುವುದು. ಇಂದು ಸೇತುಪತಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಸೇತುಪತಿಯ ಈ ಯಶಸ್ಸಿನ ಹಿಂದಿರುವ ಕಷ್ಟದ ಹೆಜ್ಜೆಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ.

  ತಮಿಳಿನಲ್ಲಿ ಮಾತ್ರವಲ್ಲ, ತೆಲುಗು ಹಾಗೂ ಇನ್ನಿತರ ಭಾಷೆಗಳಿಂದಲೂ ಸೇತುಪತಿಗೆ ಹೆಚ್ಚಿನ ಬೇಡಿಕೆ ಇದೆ. ಸಿನಿಮಾ ಪ್ರಪಂಚದ ಹೊರತಾಗಿ ವಿಜಯ್ ಸೇತುಪತಿ ಮಾಡುವ ಸಮಾಜಮುಖ ಕಾರ್ಯಗಳು ಅದೇಷ್ಟು ಜನರಿಗೆ ಗೊತ್ತಿಲ್ಲ. ಇಂಡಸ್ಟ್ರಿಗೆ ಬರುವ ಮುಂಚೆ ಸೇತುಪತಿ ಹೇಗಿದ್ದರು ಎಂದು ಸಹ ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ತೆಲುಗಿನ ಖ್ಯಾತ ಖಳನಟ ಸತ್ಯ ಪ್ರಕಾಶ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸೇತುಪತಿಯ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಕಂಪನಿಯೊಂದಲ್ಲಿ ಸೂಪರ್ವೈಸರ್ ಆಗಿದ್ದ ಸೇತುಪತಿ

  ಕಂಪನಿಯೊಂದಲ್ಲಿ ಸೂಪರ್ವೈಸರ್ ಆಗಿದ್ದ ಸೇತುಪತಿ

  ಸಿನಿಮಾ ಇಂಡಸ್ಟ್ರಿಗೂ ಬರುವ ಮುಂಚೆ ವಿಜಯ್ ಸೇತುಪತಿ ಕಂಪನಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಪ್ರತಿ ತಿಂಗಳು ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಜನರಿಗೆ, ಊಟ-ತಿಂಡಿಗೆ ಕಷ್ಟವಾಗುತ್ತಿತ್ತು ಎಂಬ ಕಾರಣಕ್ಕಾಗಿ ತನ್ನ ಸಂಬಳದಲ್ಲಿ 5 ಸಾವಿರ ರೂಪಾಯಿ ತೆಗೆದುಕೊಡುತ್ತಿದ್ದರಂತೆ. ತನಗೆ ಬರುತ್ತಿದ್ದ ವೇತನವೇ ಕಡಿಮೆ ಇದ್ದರೂ ಅದರಲ್ಲೂ ಇತತರಿಗೆ ನೀಡುತ್ತಿದ್ದ ಗುಣ ಇಂದಿಗೂ ಅವರಲ್ಲಿದೆ ಎನ್ನುತ್ತಾರೆ ಆಪ್ತರು.

  ಹಿಂದೊಮ್ಮೆ ಜ್ಯೂನಿಯರ್ ಆರ್ಟಿಸ್ಟ್ ಆಗೂ ಆಯ್ಕೆ ಆಗದವ ಇಂದು ದೊಡ್ಡ ಸ್ಟಾರ್

  ತರಕಾರಿ ವ್ಯಾಪರಿ ಹೇಳಿದ ಘಟನೆ

  ತರಕಾರಿ ವ್ಯಾಪರಿ ಹೇಳಿದ ಘಟನೆ

  ವಿಜಯ್ ಸೇತುಪತಿ ಈ ಗುಣವನ್ನು ತರಕಾರಿ ವ್ಯಾಪರಿಯೊಬ್ಬರು ನಟ ಸತ್ಯ ಪ್ರಕಾಶ್ ಬಳಿ ಹೇಳಿದ್ದಾರೆ. ಆ ತರಕಾರಿ ವ್ಯಾಪಾರಿ ಸಹ ಸೇತುಪತಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಸೇತುಪತಿ ಬಗ್ಗೆ ಹೇಳಿದ ಆ ವ್ಯಾಪಾರಿ ''ಸೇತುಪತಿ ನಿಜಕ್ಕೂ ಗ್ರೇಟ್'' ಎಂದರು ಎಂದು ಸತ್ಯ ಪ್ರಕಾಶ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

  ಸಂಭಾವನೆಯಲ್ಲೂ ಸಹಾಯ ಮಾಡ್ತಾರೆ

  ಸಂಭಾವನೆಯಲ್ಲೂ ಸಹಾಯ ಮಾಡ್ತಾರೆ

  ಈಗಲೂ ವಿಜಯ್ ಸೇತುಪತಿ ತನಗೆ ಬರುವ ಸಂಭಾವನೆಯಲ್ಲಿ ಬಹುಪಾಲು ಅನಾಥಾಶ್ರಮಗಳಿಗೆ ಅಥವಾ ಇನ್ನಿತರ ಸಂಸ್ಥೆಗಳಿಗೆ ನೀಡುವ ಮೂಲಕ ಸಹಾಯ ಮಾಡ್ತಾರೆ ಎಂದು ಸತ್ಯ ಪ್ರಕಾಶ್ ಬಹಿರಂಗಪಡಿಸಿದ್ದಾರೆ.

  ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ನಿಧನ: ಕುಟುಂಬಕ್ಕೆ ವಿಜಯ್ ಸೇತುಪತಿ ಆರ್ಥಿಕ ನೆರವು

  800 movie : ಸಿನಿಮಾ ಆಗ್ತಿದೆ Muttiah Muralitharan ಜೀವನ | Filmibeat Kannada
  ನಾನಾ ಪಾಟೇಕರ್ ಸಹ ಸಹೃದಯಿ

  ನಾನಾ ಪಾಟೇಕರ್ ಸಹ ಸಹೃದಯಿ

  ವಿಜಯ್ ಸೇತುಪತಿ ಅವರಂತೆ ಸಹೃದಯಿ ಮನೋಭಾವ ಹೊಂದಿರುವ ಮತ್ತೊಬ್ಬ ನಟ ನಾನಾ ಪಾಟೇಕರ್ ಎಂದು ಸತ್ಯ ಪ್ರಕಾಶ್ ಹೇಳಿದ್ದಾರೆ. ''ನಾನಾ ಪಾಟೇಕರ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡರೆ, ಅದರಲ್ಲಿ 50 ಲಕ್ಷ ಅಡ್ವಾನ್ಸ್ ನೀಡಬೇಕು. ಉಳಿದ 50 ಲಕ್ಷ ಹಣವನ್ನು ಹತ್ತು ಲಕ್ಷ ಎಂಬಂತೆ ಐದು ಚೆಕ್‌ ಬರೆದು ತಾನು ಹೇಳಿದ ಸಂಸ್ಥೆಗಳಿಗೆ ನಿರ್ಮಾಪಕರು ನೀಡಬೇಕು'' ಎಂದು ವಿವರಿಸಿದ್ದಾರೆ.

  English summary
  Telugu actor Sathya Prakash spoke about tamil actor vijay sethupathi simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X