For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಕಾಂತ್ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ

  |

  ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ತಲೈವರ್ 168 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದರ್ಬಾರ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಂದ್ಹಾಗೆ ದರ್ಬಾರ್ ರಿಲೀಸ್ ಆಗುವುದಕ್ಕಿಂತ ಮೊದಲೆ ತಲೈವಾ ಮತ್ತೊಂದು ಹೊಸ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಸೂಪರ್ ಸ್ಟಾರ್ ಸಿನಿಮಾ ಅಂದ್ಮೇಲೆ ಕ್ರೇಜ್ ಹೇಗಿರುತ್ತೆ ಎನ್ನುವುದನ್ನು ಹೇಳಬೇಕಿಲ್ಲ. ದೇಶ ವಿದೇಶದಲ್ಲಿ ತಲೈವಾ ಸಿನಿಮಾದೆ ಸುದ್ದಿ.

  ನಿಖಿಲ್ ಮದುವೆಯಾಗೋ ಹುಡುಗಿ ತುಂಬಾ ಸಿಂಪಲ್ ಅಂತೆ | Nikhil Kumarswamy | Marriage | Filmibeat Kannda

  ಅಂದ್ಹಾಗೆ ರಜನಿಕಾಂತ್ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, 'ತಲೈವಾ 168' ಎಂದು ಟೈಟಲ್ ಇಡಲಾಗಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಸಿರುಥೈ ಶಿವಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವೆ ಇದೆ. ಈಗಾಗಲೆ ರಜನಿಕಾಂತ್ ಮಗಳ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್ ಎಂಟ್ರಿ ಕೊಟ್ಟಿದ್ದಾರೆ ಇನ್ನು ಹಿರಿಯ ನಟಿಯರಾದ ಮೀನಾ ಮತ್ತು ಖುಷ್ಬೂ ಕೂಡ ಅಭಿನಯಿಸುತ್ತಿದ್ದಾರೆ.

  ಸೂಪರ್ ಸ್ಟಾರ್ ರಿಂದ ಮಹಾ ನಟಿಯ ಮಹಾ ಆಸೆ ಈಡೇರಿತುಸೂಪರ್ ಸ್ಟಾರ್ ರಿಂದ ಮಹಾ ನಟಿಯ ಮಹಾ ಆಸೆ ಈಡೇರಿತು

  ಇದರ ಜೊತೆಗೀಗ ತೆಲುಗಿನ ಮತ್ತೋರ್ವ ಸ್ಟಾರ ನಟನ ಎಂಟ್ರಿಯಾಗಿದೆ. ಹೌದು ತೆಲುಗಿನ ಖ್ಯಾತ ನಟ ಸಿದ್ಧಾರ್ಥ್ ಸೂಪರ್ ಸ್ಟಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಮೂಲಕ ಮೊದಲ ಬಾರಿಗೆ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಸಿದ್ಧಾರ್ಥ್. ಇತ್ತೀಚಿಗೆ ಸಿದ್ಧಾರ್ಥ್ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಈಗ ಸೂಪರ್ ಸ್ಟಾರ್ ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

  ಇನ್ನು ಈಗಾಗಲೆ ಸಿದ್ಧಾರ್ಥ್ ನಟ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ರಜನಿಕಾಂತ್ ಸಿನಿಮಾಗೂ ಪಾದಾರ್ಪಣೆ ಮಾಡಿದ್ದಾರೆ. ಸಿದ್ಧಾರ್ಥ್ ಕೊನೆಯದಾಗಿ ಅರುವಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  ಅಂದ್ಹಾಗೆ ತಲೈವರ್ 168 ಸಿನಿಮಾ ಇದೆ ವರ್ಷ ದೀಪಾವಳಿಗೆ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಪಾತ್ರ ಹೇಗಿರಲಿದೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  English summary
  Telugu Actor Sidharth will playing Important role in Super star Rajinikath starrer Thalaivar 168 film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X