For Quick Alerts
  ALLOW NOTIFICATIONS  
  For Daily Alerts

  ಸಂಚಾರ ನಿಯಮ ಉಲ್ಲಂಘನೆ: ತಮಿಳು ನಟ ದಳಪತಿ ವಿಜಯ್‌ಗೆ ಪೊಲೀಸರ ದಂಡ

  |

  'ವಾರೀಸು' ರಿಲೀಸ್‌ಗೂ ಮುನ್ನ ಅಭಿಮಾನಿಗಳನ್ನು ಭೇಟಿ ಮಾಡಲು ತೆರಳಿದ್ದ ತಮಿಳು ನಟ ದಳಪತಿ ವಿಜಯ್‌ಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ. ಭಾನುವಾರ ಟಿಂಟ್ ಗ್ಲಾಸ್ (ಕಪ್ಪು ಬಣ್ಣದ ಗಾಜು) ಅಳವಡಿಸಿದ್ದ ಕಾರಿನಲ್ಲಿ ವಿಜಯ್ ಪ್ರಯಾಣಿಸಿದ್ದರು. ಕೂಡಲೇ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಬಣ್ಣದ ಗಾಜು ತೆಗೆಸದ ವಾಹನ ಮಾಲೀಕರ ವಿರುದ್ಧ ಮೋಟಾರು ಕಾಯ್ದೆ(1988) ಅನ್ವಯ ಹಲವು ವರ್ಷಗಳಿಂದ ದೂರು ದಾಖಲಿಸಿ ದಂಡ ವಿಧಿಸಲಾಗುತ್ತಿದೆ.

  ಕಾಲಿವುಡ್‌ನಲ್ಲಿ ರಜನಿಕಾಂತ್ ಬಿಟ್ಟರೆ ಆ ರೇಂಜಿಗೆ ಅಭಿಮಾನಿ ಬಳಗ ಹೊಂದಿರುವ ಮತ್ತೊಬ್ಬ ನಟ ವಿಜಯ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಆಗಾಗ್ಗೆ ವಿಜಯ್ ಅಭಿಮಾನಿಗಳನ್ನು ಭೇಟಿ ಮಾಡುತ್ತಿರುತ್ತಾರೆ. ಭಾನುವಾರ ಪನ್ನಯೂರ್‌ನಲ್ಲಿ ಅಭಿಮಾನಿಗಳ ಭೇಟಿಗರ ವಿಜಯ್ ಟಿಂಟ್ ಗ್ಲಾಸ್ ಅಳವಡಿಸಿದ್ದ ತಮ್ಮ ದುಬಾರಿ ಕಾರಿನಲ್ಲಿ ತೆರಳಿದ್ದರು. ಹಾಗಾಗಿ ಟ್ರಾಫಿಕ್ ಪೊಲೀಸರು ದೂರು ದಾಖಲಿಸಿ ನಟನಿಗೆ ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಎಲ್ಲರಿಗೂ ಒಂದೇ. ಈ ಹಿಂದೆ ಇದೇ ರೀತಿ ಸಂಚಾರಿ ನಿಯಮ ಉಲ್ಲಂಘಿಸಿದ ಹಲವು ನಟರಿಗೆ ಪೊಲೀಸರು ದಂಡ ವಿಧಿಸಿ ಶಾಕ್ ನೀಡಿದ್ದರು.

  ಬಳ್ಳಾರಿಗೆ ತಮಿಳು ಸ್ಟಾರ್ ವಿಜಯ್, ಜೊತೆಗೆ ರಶ್ಮಿಕಾ ಮಂದಣ್ಣಬಳ್ಳಾರಿಗೆ ತಮಿಳು ಸ್ಟಾರ್ ವಿಜಯ್, ಜೊತೆಗೆ ರಶ್ಮಿಕಾ ಮಂದಣ್ಣ

  ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ನಟನೆಯ 'ವಾರೀಸು' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ದಿಲ್ ರಾಜು ನಿರ್ಮಾಣದ ಈ ಸಿನಿಮಾ 'ವಾರಸುಡು' ಹೆಸರಿನಲ್ಲಿ ಏಕಕಾಲಕ್ಕೆ ತೆಲುಗಿನಲ್ಲೂ ತೆರೆಗಪ್ಪಳಿಸುತ್ತಿದೆ. 'ಸಂಕ್ರಾಂತಿ' ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಈಗಾಗಲೇ ಚಿತ್ರದ 'ರಂಜಿತಮೇ' ಸಾಂಗ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

  English summary
  Actor Thalapathy Vijay fined Rs 500 by traffic police Police action on complaint of black sticker on car windshield. Tamil actor Vijay meets fans after 5 years. Know more.
  Thursday, November 24, 2022, 9:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X