For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿಗೆ ದಳಪತಿ ಅಬ್ಬರ: ದಾಖಲೆ ಬೆಲೆಗೆ 'ವಾರಿಸು' ಡಿಜಿಟಲ್ ರೈಟ್ಸ್ ಸೇಲ್?

  |

  ಸದ್ದಯ ಓಟಿಟಿ ಜಮಾನ ಶುರುವಾಗಿದೆ. ಸಿನಿಮಾ ಥಿಯೇಟರ್‌ಗೆ ಬರೋಕು ಮೊದಲು ಓಟಿಟಿಗೆ ಯಾವಾಗ ಎನ್ನುವ ಪ್ರಶ್ನೆ ಶುರುವಾಗುತ್ತಿದೆ. ಥ್ರಿಯೇಟ್ರಿಕಲ್ ರೈಟ್ಸ್‌ಗಿಂತ ಓಟಿಟಿ ರೈಟ್ಸ್ ಎಷ್ಟು ಎನ್ನುವ ಲೆಕ್ಕಾಚಾರ ನಡೀತಿದೆ. ಸದ್ಯ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ಡಿಜಿಟಲ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ.

  ತೆಲುಗಿನ ವಂಶಿ ಪೈಡಿಪಲ್ಲಿ ನಿರ್ದೇಶನದ 'ವಾರಿಸು' ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟಿಸ್ತಿದ್ದಾರೆ. ಕೊನೆ ಹಂತದ ಶೂಟಿಂಗ್ ಭರದಿಂದ ಸಾಗುತ್ತಿದೆ. ಏಕಕಾಲಕ್ಕೆ ತಮಿಳು ಹಾಗೂ ತೆಲುಗಿನಲ್ಲಿ ಈ ಡ್ರಾಮಾ ಸಿನಿಮಾ ನಿರ್ಮಾಣವಾಗ್ತಿದೆ. ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ದಳಪತಿ ವಿಜಯ್ ಕ್ರೇಜ್‌ಗೆ ತಕ್ಕಂತೆ ಸಿನಿಮಾ ಆಡಿಯೋ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗೂ ಥ್ರಿಯೇಟ್ರಿಕ್ ರೈಟ್ಸ್‌ಗೆ ಡಿಮ್ಯಾಂಡ್ ಶುರುವಾಗಿದೆ.

  'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?

  ಶರತ್ ಕುಮಾರ್,ಶ್ಯಾಮ್, ಪ್ರಕಾಶ್ ರಾಜ್, ಖುಷ್ಬು, ಯೋಗಿ ಬಾಬು, ಶ್ರೀಕಾಂತ್ ಸೇರದಂತೆ ದೊಡ್ಡ ತಾರಾಗಣ 'ವಾರಿಸು' ಚಿತ್ರದಲ್ಲಿದೆ. ಸಿನಿಮಾ ಕಥೆ ಬಗ್ಗೆ ಭಾರೀ ಕುತೂಹಲ ಇದೆ, ತಮಿಳು ಸಿನಿಮಾ ನಿರ್ದೇಶಕರೇ ವಿಜಯ್‌ಗೆ ಕತೆ ಹೇಳಿ ಒಪ್ಪಿಸುವುದು ಕಷ್ಟವಾಗಿದ್ದ ಸಮಯದಲ್ಲಿ ವಂಶಿ ಹೇಳಿದ ಕಥೆಯನ್ನು ಕೇಳಿ ಹಿಂದು ಮುಂದು ನೋಡದೇ ನಟಿಸೋಕೆ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ವಿಜಯ್ ಆ ಪಾಟಿ ಇಂಪ್ರೆಸ್ ಆಗುವುದಕ್ಕೆ ಆ ಕಥೆಯಲ್ಲಿ ಅಂಥಾದ್ದೇನಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.

  50 ಕೋಟಿ ರೂಪಾಯಿಗೆ 'ವಾರಿಸು' ಸಿನಿಮಾ ಡಿಜಿಟಲ್ ರೈಟ್ಸ್ ಸೇಲಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ದಕ್ಷಿಣ ಭಾರತದಲ್ಲಿ ಚಿತ್ರವೊಂದರ ಡಿಜಿಟಲ್ ರೈಟ್ಸ್‌ಗೆ ಇಷ್ಟು ದೊಡ್ಡ ಮೊತ್ತ ಕೊಟ್ಟಿರುವುದು ಅಚ್ಚರಿ ಎನ್ನಲಾಗ್ತಿದೆ. ಅಮೇಜಾನ್ ಪ್ರೈಂ ಇಂತಾದೊಂದು ಒಪ್ಪಂದ ಮಾಡಿಕೊಂಡಿದೆಯಂತೆ. ಇನ್ನು ಆಡಿಯೋ ಹಾಗೂ ಸ್ಯಾಟಲೈಟ್ ರೈಟ್ಸ್‌ 60 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ. ಇದೆಲ್ಲ ಬರೀ ಅಂತೆ ಕಂತೆ ಸುದ್ದಿ ಅಷ್ಟೆ. ಅಧಿಕೃತ ಘೋಷಣೆ ಬಾಕಿಯಿದೆ.

  ಚಿತ್ರೀಕರಣ ಮುಗಿವ ಮುಂಚೆಯೇ 150 ಕೋಟಿ ಲಾಭ ಮಾಡಿದ ವಿಜಯ್ ಸಿನಿಮಾ!ಚಿತ್ರೀಕರಣ ಮುಗಿವ ಮುಂಚೆಯೇ 150 ಕೋಟಿ ಲಾಭ ಮಾಡಿದ ವಿಜಯ್ ಸಿನಿಮಾ!

  Thalapathy Vijay Starrer Varisu digital rights sold for a whopping price

  ಕಾಲಿವುಡ್‌ ಅಂಗಳದಲ್ಲಿ ವಿಜಯ್ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಕಳೆದ ವರ್ಷ ಕೊರೊನಾ ಹಾವಳಿ ನಡುವೆ ಥಿಯೇಟರ್‌ಗಳಲ್ಲಿ 50% ಆಕ್ಯುಪೆನ್ಸಿಗೆ ಅವಕಾಶ ಇದ್ದಾಗಲೇ 'ಮಾಸ್ಟರ್' ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಂತರ ಬಹಳ ಬೇಗ ಓಟಿಟಿಗೆ ಬಂದು ಸದ್ದು ಮಾಡಿತ್ತು. 'ವಾರಿಸು' ಸಿನಿಮಾ ಕೂಡ ಮುಂದಿನ ವರ್ಷ ಫೆಬ್ರವರಿಯಲ್ಲಿ ಓಟಿಟಿಗೆ ಬರುವ ಸಾಧ್ಯತೆಯಿದೆ.

  ಚೆನ್ನೈನಲ್ಲಿ ದುಬಾರಿ ಮನೆ ಖರೀದಿಸಿದ ತಮಿಳು ನಟ ವಿಜಯ್!ಚೆನ್ನೈನಲ್ಲಿ ದುಬಾರಿ ಮನೆ ಖರೀದಿಸಿದ ತಮಿಳು ನಟ ವಿಜಯ್!

  English summary
  Thalapathy Vijay Starrer Varisu digital rights sold for a whopping price. Varisu Post Theatrical Streaming Rights bagged by Amazon Prime for 50 crores.
  Monday, September 26, 2022, 20:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X