Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Varisu Twitter Review : ಸಂಕ್ರಾಂತಿಗೆ ಗೆದ್ದರಾ ವಿಜಯ್? 'ವಾರಿಸು' ಹೇಗಿದೆ? ಟ್ವಿಟ್ಟರ್ ವಿಮರ್ಶೆ ಇಲ್ಲಿದೆ
ವಿಜಯ್ ನಟನೆಯ 'ವಾರಿಸು' ಸಿನಿಮಾ ಇಂದು ಬಿಡುಗಡೆ ಆಗಿದ್ದು, ಸಂಕ್ರಾಂತಿ ಹಬ್ಬದಂದು ಏರ್ಪಟ್ಟಿರುವ ಭರ್ಜರಿ ಬಾಕ್ಸ್ ಆಫೀಸ್ ಫೈಟ್‌ನಲ್ಲಿ ಪಾಲ್ಗೊಂಡಿದೆ.
ಅಜಿತ್ ಕುಮಾರ್ 'ತುನಿವು', ವಿಜಯ್‌ರ 'ವಾರಿಸು'. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿಯ 'ವಾಲ್ಟರ್ ವೀರಯ್ಯ' ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ತಮಿಳಿನಲ್ಲಿ ವಿಜಯ್ ಹಾಗೂ ಅಜಿತ್ ಸ್ಪರ್ಧೆಯಲ್ಲಿ ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಇಂದು ಅಂದರೆ ಜನವರಿ 11 ರಂದೇ ವಿಜಯ್‌ರ 'ವಾರಿಸು' ಹಾಗೂ ಅಜಿತ್‌ರ 'ತುನಿವು' ಸಿನಿಮಾಗಳು ತೆರೆಗೆ ಬಂದಿವೆ. ಇವುಗಳಲ್ಲಿ 'ವಾರಿಸು' ನೋಡಿದ ಜನ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ 'ವಾರಿಸು' ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಇದರಲ್ಲಿ ಅನುಮಾನವೇ ಇಲ್ಲ. ಹಾಡು, ಹಿನ್ನೆಲೆ ಸಂಗೀತ, ಎಮೋಷನ್‌ಗಳು ಹಾಗೂ ಕಾಮಿಡಿ ಎಲ್ಲರೂ ತೆರೆಯ ಮೇಲೆ ಚೆನ್ನಾಗಿ ಪ್ರದರ್ಶಿತಗೊಂಡಿದೆ. ದಳಪತಿ ವಿಜಯ್ ಅಂತೂ ಅದ್ಭುತ. ಪೊಂಗಲ್ ಹಬ್ಬಕ್ಕೆ ನಿಜಕ್ಕೂ ಒಂದೊಳ್ಳೆ ಫೀಲ್ ಗುಡ್ ಸಿನಿಮಾ ಇದು. 5 ಕ್ಕೆ 3.25 ಅಂಕ ಕೊಡಬಹುದು ಎಂದು ಮಿಲಾಗ್ರೊ ಮೂವೀಸ್ ಹೇಳಿದೆ.

'ಸಾಧಾರಣ ಎನಿಸುವ ಮೊದಲಾರ್ಧ'
ತೃಪ್ತಿದಾಯಕ ಫ್ಯಾಮಿಲಿ ಎಂಟರ್ಟೈನರ್ 'ವಾರಿಸು'. ಸಾಧಾರಣ ಎನಿಸುವ ಮೊದಲಾರ್ಧ, ಮಾಸ್ ಸೆಕೆಂಡ್ ಹಾಫ್. ಎಮೋಷನಲ್ ಸೀನ್‌ಗಳು ಅಷ್ಟಾಗಿ ಟಚ್ ಆಗುವುದಿಲ್ಲ. ಆದರೆ ವಿಜಯ್‌ರ ಎಂಟರ್ಟೈನ್‌ಮೆಂಟ್ ನೀಡುವಂಥಹಾ ಕ್ಯಾರೆಕ್ಟರ್ ಮತ್ತು ಅವರ ಅಭಿನಯ ಸಿನಿಮಾವನ್ನು ನೋಡಿಸಿಕೊಂಡು ಸಾಗುತ್ತದೆ. 5 ಕ್ಕೆ 2.75 ರೇಟಿಂಗ್ ಅನ್ನು ನೀಡುತ್ತೇವೆ ಎಂದಿದ್ದಾರೆ ವೆಂಕಿ ರಿವ್ಯೂಸ್.

'ವಿಜಯ್‌ರ ಈವರೆಗಿನ ಬೆಸ್ಟ್ ಸಿನಿಮಾ'
'ವಾರಿಸು' ಸಿನಿಮಾ ಒಂದು ಪಕ್ಕಾ ಕೌಟುಂಬಿಕ ಸಿನಿಮಾ. ವಿಜಯ್ ಸಿನಿಮಾ ವೃತ್ತಿಯಲ್ಲಿಯೇ ಒಂದು ಅದ್ಭುತವಾದ ಸಿನಿಮಾ. ತಮನ್ ಅವರ ಸಂಗೀತ ಸಿನಿಮಾದ ಬೆನ್ನೆಲುಬು. ವಂಶಿ ನಿರ್ದೇಶನವೂ ಸೂಪರ್ ಆಗಿದೆ. 5 ರಲ್ಲಿ ನಾಲ್ಕು ಸ್ಟಾರ್‌ಗಳನ್ನು ನೀಡಬಹುದು ಎಂದಿದ್ದಾರೆ ವಿಜಯ್ ಅಭಿಮಾನಿ ವಿದ್ಯಾ ಸುಗನ್ಯಾ.

'ಈ ಸಿನಿಮಾಕ್ಕೆ ಪ್ರಚಾರವೇ ಬೇಕಿಲ್ಲ'
''ಈಗಷ್ಟೆ 'ವಾರಿಸು' ಸಿನಿಮಾ ನೋಡಿದೆ. ಪಕ್ಕಾ ಮಾಸ್ ಸಿನಿಮಾ. ಸಿನಿಮಾ ನೋಡುವಾಗ ನಾನು ನಕ್ಕೆ, ಅತ್ತೆ, ನನ್ನ ಫೇವರೇಟ್ ವಿಜಯ್ ಅನ್ನು ಸಿನಿಮಾದ ಪ್ರತಿ ಫ್ರೇಂನಲ್ಲಿಯೂ ನೋಡಿದೆ. ಈ ಸಿನಿಮಾಕ್ಕೆ ಪ್ರಚಾರವೇ ಬೇಕಿಲ್ಲ. ಹಿಂದಿನ ಹತ್ತು ವರ್ಷದಲ್ಲಿ ಯಾರ ಸಿನಿಮಾಕ್ಕೂ ಸಿಗದ ಬಾಯಿ ಪ್ರಚಾರ ಜನರಿಂದಲೇ ಈ ಸಿನಿಮಾಕ್ಕೆ ಸಿಗಲಿದೆ. ಸಾರ್ವಕಾಲಿಕ ದಾಖಲೆಯನ್ನು ಈ ಸಿನಿಮಾ ಬರೆಯಲಿದೆ. 'ವಿಕ್ರಂ' ಹಾಗೂ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ದಾಖಲೆಗಳು ಮುರಿದು ಬೀಳಲಿವೆ ಎಂದಿದ್ದಾರೆ ದೇವನಾಯಗಮ್.

ವಿಶ್ಲೇಷಕ ರಮೇಶ್ ಬಾಲ ಹೇಳಿದ್ದೇನು?
ಜನಪ್ರಿಯ ಸಿನಿಮಾ ವಿಶ್ಲೇಷಕ ಹಾಗೂ ವಿಮರ್ಶಕ ರಮೇಶ್ ಬಾಲಾ, 'ವಾರಿಸು' ಸಿನಿಮಾ ನೋಡಿದ್ದು, ''ಇದು ಒನ್ ಮ್ಯಾನ್ ಶೋ. ಸಿನಿಮಾ ದಳಪತಿ ವಿಜಯ್ ಅವರಿಂದಷ್ಟೆ ಓಡಲಿದೆ. ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಕ್ಕೆ ಬೇಕಾದ ಮಸಾಲೆಗಳೆಲ್ಲವನ್ನೂ ಸಿನಿಮಾದಲ್ಲಿ ಅಳವಡಿಸಲಾಗಿದೆ. ಈ ಸಿನಿಮಾವನ್ನು ಕೌಟುಂಬಿಕ ಸಿನಿಮಾ ನೋಡುವ ಆಡಿಯನ್ಸ್ ಹಾಗೂ ವಿಜಯ್ ಅಭಿಮಾನಿಗಳು ನೋಡಲಿದ್ದಾರೆ'' ಎಂದು ತುಸು ಋಣಾತ್ಮಕವಾದ ವಿಮರ್ಶೆಯನ್ನೇ ನೀಡಿದ್ದಾರೆ.

ಬೆಸ್ಟ್ ಸಿನಿಮಾ ಅಲ್ಲ ಆದರು ಚೆನ್ನಾಗಿದೆ
'ವಾರಿಸು' ವಿಜಯ್‌ರ ಬೆಸ್ಟ್ ಸಿನಿಮಾ ಅಲ್ಲ. ಆದರೂ ಇದೊಂದು ಒಳ್ಳೆಯ ಸಿನಿಮಾ. ಎಲ್ಲ ಮಸಾಲೆ ಅಂಶಗಳನ್ನು ಸಿನಿಮಾದಲ್ಲಿ ಸರಿಯಾಗಿ ಪ್ಯಾಕ್ ಮಾಡಲಾಗಿದೆ. ಸಿನಿಮಾದ ಎಲ್ಲ ಪಾತ್ರವರ್ಗಗಳು ಚೆನ್ನಾಗಿ ನಟಿಸಿವೆ, ಅದರಲ್ಲಿಯೂ ವಿಜಯ್ ಇಡೀ ಸಿನಿಮಾದ ಶೋ ಸ್ಟಾಪರ್. ಮತ್ತೊಮ್ಮೆ ವಿಜಯ್ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಗೆಲ್ಲಿಸಿದ್ದಾರೆ ಎಂದಿದ್ದಾರೆ ಜಲ್ಸ್ ಅಫಿಷಿಯಲ್ ಭಾಯಿಜಾನ್ ಟ್ವಿಟ್ಟರ್ ಖಾತೆ.