twitter
    For Quick Alerts
    ALLOW NOTIFICATIONS  
    For Daily Alerts

    ತಮಿಳುನಾಡು: ಚಿತ್ರಮಂದಿರಗಳ ಮೇಲೆ ವಿಧಿಸಿದ್ದ ನಿಯಮ ಸಡಿಲಿಕೆ

    |

    ಕೊರೊನಾ ಕಾರಣಕ್ಕೆ ನೆರೆಯ ತಮಿಳುನಾಡಿನಲ್ಲಿ ಎಲ್ಲ ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ಈಗ ಎಂಕೆ ಸ್ಟ್ಯಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಚಿತ್ರಮಂದಿರಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧನವನ್ನು ಸಡಿಸಿದ್ದಾರೆ.

    ಏಪ್ರಿಲ್ 26 ರಿಂದಲೂ ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ದವು. ಇದೀಗ ಹೊರಡಿಸಲಾಗಿರುವ ಹೊಸ ಆದೇಶದ ಪ್ರಕಾರ ಆಗಸ್ಟ್ 23 ರಿಂದ ತಮಿಳುನಾಡಿನ ಎಲ್ಲ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಕಾರ್ಯನಿರ್ವಹಿಸಬಹುದಾಗಿದೆ ಆದರೆ ಒಟ್ಟು ಸೀಟು ಸಾಮರ್ಥ್ಯದ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಬೇಕಿದೆ.

    Theaters Will Function In Tamil Nadu With 50 Percent Occupency

    ನಾಲ್ಕು ತಿಂಗಳಿನಿಂದ ಚಿತ್ರಮಂದಿರಗಳು ತೆರದೇ ಇಲ್ಲವಾದ್ದರಿಂದ ಚಿತ್ರಮಂದಿರ ಮಾಲೀಕರು, ಚಿತ್ರರಂಗದ ನಿರ್ಮಾಪಕರುಗಳು ಇತರೆ ಪ್ರಮುಖರು ಚಿತ್ರಮಂದಿರ ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದರು. ಮನವಿಗಳಿಗೆ ಸ್ಪಂದಿಸಿರುವ ಸಿಎಂ ಸ್ಟ್ಯಾಲಿನ್ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ.

    ಚಿತ್ರಮಂದಿರಗಳು ಮಾತ್ರವೇ ಅಲ್ಲದೆ ರಾಜ್ಯದ ಶಾಲೆ-ಕಾಲೇಜು ತೆರೆಯಲು ಸಹ ಅನುಮತಿ ನೀಡಲಾಗಿದೆ. ಕರ್ನಾಟಕ, ಆಂಧ್ರದಿಂದ ಬಸ್ಸುಗಳು ಇತರೆ ವಾಹನಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನುನ ಸಹ ತಮಿಳುನಾಡು ಸರ್ಕಾರ ತೆಗೆದುಹಾಕಿದೆ.

    ತಮಿಳು ಭಾಷೆಯ ಹಲವು ಸಿನಿಮಾಗಳು ಬಿಡಗುಡೆಗೆ ತಯಾರಾಗಿವೆ. ಅಜಿತ್ ನಟನೆಯ 'ವಾಲಿಮೈ'. ರಜನೀಕಾಂತ್ ನಟಿಸಿರುವ 'ಅನ್ನಾತೆ'. ವಿಜಯ್ ಸೇತುಪತಿ ನಟನೆಯ 'ಲಾಭಂ' ಮತ್ತು 'ತುಗಲಕ್ ದರ್ಬಾರ್'. ಕಾರ್ತಿ ನಟಿಸಿರುವ 'ಸುಲ್ತಾನ್', ಧನುಷ್ ನಟನೆಯ 'ತುಪ್ಪರಿವಾಲನ್ 2' ಇನ್ನೂ ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

    ಭಾರತದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆದಿವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್‌, ಗೋವಾ ರಾಜ್ಯಗಳಲ್ಲಿ 50% ಆಕ್ಯುಪೆನ್ಸಿಯೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರ, ಕೇರಳ, ದೆಹಲಿಗಳಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ.

    English summary
    As new government order Theaters will open from August 23 in Tamil Nadu. Theaters should follow 50 percent occupency rules.
    Tuesday, August 24, 2021, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X