For Quick Alerts
  ALLOW NOTIFICATIONS  
  For Daily Alerts

  ಕುದುರೆ ಸವಾರಿ ತರಬೇತಿ ಮುಗಿಸಿರುವ ನಟಿ ತ್ರಿಷಾ ಕೃಷ್ಣನ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕಳೆದ ಕೆಲವು ತಿಂಗಳಿಂದ ಕುದುರೆ ಸವಾರಿ ಕಲಿಯುತ್ತಿದ್ದರು. ಇದೀಗ ತ್ರಿಷಾ ಕುದುರೆ ಸವಾರಿ ತರಬೇತಿ ಮುಗಿಸಿದ್ದಾರಂತೆ. ಅಂದಹಾಗೆ ತ್ರಿಷಾ ಕುದುರೆ ಸವಾರಿ ಕಲಿಯುತ್ತಿದ್ದಿದ್ದು, ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾಗಾಗಿ.

  ಕಳೆದ ತಿಂಗಳು ಕುದುರೆ ಸವಾರಿ ಮಾಡುವಾಗ ತ್ರಿಷಾ ಗಾಯಗೊಂಡಿದ್ದರು. ಕೈಗೆ ಗಾಯವಾಗಿದೆ ಎಂದು ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದರು. ಬೀಳುತ್ತ ಏಳುತ್ತ ತ್ರಿಷಾ ಸಂಪೂರ್ಣವಾಗಿ ಕುದುರೆ ಸವಾರಿ ಕಲಿತಿದ್ದಾರಂತೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ತ್ರಿಷಾ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೊರಡುವ ಉತ್ಸಾಹದಲ್ಲಿದ್ದಾರೆ.

  ಕುದುರೆ ಸವಾರಿ ವೇಳೆ ಗಾಯಗೊಂಡ ನಟಿ ತ್ರಿಷಾ ಕೃಷ್ಣನ್ಕುದುರೆ ಸವಾರಿ ವೇಳೆ ಗಾಯಗೊಂಡ ನಟಿ ತ್ರಿಷಾ ಕೃಷ್ಣನ್

  ಅಂದಹಾಗೆ ಬಹುತಾರಗಣವಿರುವ ಈ ಸಿನಿಮಾದಲ್ಲಿ ತ್ರಿಷಾ ಚೋಳ ರಾಣಿ ಕುಂದವಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ನಟಿ ಐಶ್ವರ್ಯ ರೈ ಸಹ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಐಶ್ವರ್ಯ ರೈ ನಂದಿನಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ನೆಗೆಟಿವ್ ಪಾತ್ರ ಎನ್ನಲಾಗುತ್ತಿದೆ. ತ್ರಿಷಾ ಮತ್ತು ಐಶ್ವರ್ಯ ಅವರ ಮುಖಾಮುಖಿಯಾಗುವ ಪ್ರಬಲ ದೃಶ್ಯಗಳು ಈ ಸಿನಿಮಾದಲ್ಲಿ ಸಾಕಷ್ಟು ಇದಿಯಂತೆ.

  ಇನ್ನೂ ಸಿನಿಮಾದಲ್ಲಿ ತಮಿಳು ನಟ ಕಾರ್ತಿ, ಜಯಂ ರವಿ ನಾಯಕನಾಗಿ ನಟಿಸುತ್ತಿದ್ದಾರೆ. ಕಾರ್ತಿ ವಾಂಧಿಯಾ ದೇವನ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಯಂ ರವಿ ರಾಜರಾಜ ಚೋಳನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನೂ ನಟ ಚಿಯಾನ್ ವಿಕ್ರಮ್ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada

  ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವ ಸಿನಿಮಾತಂಡ ದೀಪಾವಳಿ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭ ಮಾಡುವ ತಯಾರಿಯಲ್ಲಿದ್ದಾರೆ ಈಗಾಗಲೇ ಎಲ್ಲರೂ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಐಶ್ವರ್ಯ ರೈ ತಮಿಳು ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾದ್ಯತೆ ಇದೆ.

  English summary
  Tamil Actres Trisha Krishnan finishes her horse riding training for Ponniyin Selvan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X