For Quick Alerts
  ALLOW NOTIFICATIONS  
  For Daily Alerts

  ಕುದುರೆ ಸವಾರಿ ವೇಳೆ ಗಾಯಗೊಂಡ ನಟಿ ತ್ರಿಷಾ ಕೃಷ್ಣನ್

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕುದುರೆ ಸವಾರಿ ಕಲಿಯುವ ವೇಳೆ ಗಾಯಗೊಂಡಿದ್ದಾರೆ ಎನ್ನವ ಸುದ್ದಿ ಕೇಳಿ ಬರುತ್ತಿದೆ. ತ್ರಿಷಾ ಸದ್ಯ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ತ್ರಿಷಾ ಕುದುರೆ ಸವಾರಿ ಕಲಿಯುತ್ತಿದ್ದಾರೆ. ತರಬೇತಿ ವೇಳೆ ತ್ರಿಷಾ ಕೈಗೆ ಗಾಯವಾಗಿದೆ ಎಂದು ವರದಿಯಾಗಿದೆ.

  ಇತ್ತೀಚಿಗೆ ತ್ರಿಷಾ ತನ್ನ ಮುದ್ದಿನ ಕುದುರೆ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಿನಿಮಾಗಾಗಿ ತ್ರಿಷಾ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಲಾಕ್ ಡೌನ್ ಗೂ ಮೊದಲೇ ಚಿತ್ರದ ಚಿತ್ರೀಕರಣ ಪ್ರಾರಂಭಮಾಡಿರುವ ಸಿನಿಮಾತಂಡ ಲಾಕ್ ಬಳಿಕ ಇನ್ನೂ ಶೂಟಿಂಗ್ ಶುರುಮಾಡಿಲ್ಲ. ಆದರೆ ಕಲಾವಿದರು ಪಾತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ 7 ಪೋಸ್ಟ್ ಗಳನ್ನು ಬಿಟ್ಟು ಎಲ್ಲಾ ಡಿಲೀಟ್ ಮಾಡಿದ ನಟಿ ತ್ರಿಷಾಇನ್ಸ್ಟಾಗ್ರಾಮ್ ನಲ್ಲಿ 7 ಪೋಸ್ಟ್ ಗಳನ್ನು ಬಿಟ್ಟು ಎಲ್ಲಾ ಡಿಲೀಟ್ ಮಾಡಿದ ನಟಿ ತ್ರಿಷಾ

  ಬಹುತಾರಗಣವಿರುವ ಈ ಸಿನಿಮಾದಲ್ಲಿ ತ್ರಿಷಾ ಚೋಳ ರಾಣಿ ಕುಂದವಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ನಟಿ ಐಶ್ವರ್ಯ ರೈ ಸಹ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಐಶ್ವರ್ಯ ರೈ ನಂದಿನಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ನೆಗೆಟಿವ್ ಪಾತ್ರ ಎನ್ನಲಾಗುತ್ತಿದೆ. ತ್ರಿಷಾ ಮತ್ತು ಐಶ್ವರ್ಯ ಅವರ ಮುಖಾಮುಖಿಯಾಗುವ ಪ್ರಬಲ ದೃಶ್ಯಗಳು ಈ ಸಿನಿಮಾದಲ್ಲಿ ಇದಿಯಂತೆ.

  ಇನ್ನೂ ಸಿನಿಮಾದಲ್ಲಿ ತಮಿಳು ನಟ ಕಾರ್ತಿ, ಜಯಂ ರವಿ ನಾಯಕನಾಗಿ ನಟಿಸುತ್ತಿದ್ದಾರೆ. ಕಾರ್ತಿ ವಾಂಧಿಯಾ ದೇವನ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಯಂ ರವಿ ರಾಜರಾಜ ಚೋಳನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನೂ ನಟ ಚಿಯಾನ್ ವಿಕ್ರಮ್ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  Ambi ತಮಾಷೆಗೆ ಹೇಳಿದ್ದನ್ನ Vishnu ಸೀರಿಯಸ್ ಆಗಿ ತಗೊಂಡಿದ್ರು | Untold Story | Filmibeat Kannada

  ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವ ಸಿನಿಮಾತಂಡ ದೀಪಾವಳಿಯ ಬಳಿಕ ಚಿತ್ರೀಕರಣ ಪ್ರಾರಂಭ ಮಾಡುವ ಸಾದ್ಯತೆ ಇದೆ. ಈಗಾಗಲೇ ಎಲ್ಲರೂ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಐಶ್ವರ್ಯ ರೈ ತಮಿಳು ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾದ್ಯತೆ ಇದೆ.

  English summary
  Actress Trisha Krishnan hurts her finger while learning to ride horses for Ponniyin selvan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X