For Quick Alerts
  ALLOW NOTIFICATIONS  
  For Daily Alerts

  ವಿಜಯ್ 65ನೇ ಚಿತ್ರದಲ್ಲಿ ಮತ್ತೋರ್ವ ಸ್ಟಾರ್ ಹೀರೋಯಿನ್?

  |

  ತಮಿಳು ನಟ ವಿಜಯ್ ನಟಿಸುತ್ತಿರುವ 65ನೇ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಪ್ರಾಜೆಕ್ಟ್‌ನಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಘೋಷಣೆಯಾಗಿದೆ.

  ಈ ಮೂಲಕ ಎರಡನೇ ಬಾರಿ ತಮಿಳು ಪ್ರಾಜೆಕ್ಟ್‌ನಲ್ಲಿ ಪೂಜಾ ಅಭಿನಯಿಸುತ್ತಿದ್ದಾರೆ. ಈಗ, ಕಾಲಿವುಡ್‌ನಲ್ಲಿ ಚರ್ಚೆಯಲ್ಲಿರುವ ಹಾಟ್ ಟಾಪಿಕ್ ಏನಪ್ಪಾ ಅಂದ್ರೆ ವಿಜಯ್ 65ನೇ ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂದು ಹೇಳಲಾಗುತ್ತಿದೆ.

  ವಿಜಯ್ 65ನೇ ಚಿತ್ರಕ್ಕೆ ಕೊನೆಗೂ ನಾಯಕಿ ಪಕ್ಕಾ: ಪೂಜಾಗೆ ಒಲಿದ ಅದೃಷ್ಟ

  ಮೊದಲನೇ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುವುದು ಖಚಿತವಾಗಿದೆ. ಈಗ ಎರಡನೇ ನಾಯಕಿ ಯಾರು ಎಂಬ ಕುತೂಹಲಕ್ಕೆ ಉತ್ತರ ಕನ್ನಡದ ರಶ್ಮಿಕಾ ಮಂದಣ್ಣ ಕಡೆ ಗಮನ ನೆಟ್ಟಿದೆ.

  ಹೌದು, ವಿಜಯ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕರೆತರಲು ಮಾತುಕತೆ ನಡೆಯುತ್ತಿದೆ. ಈ ಕುರಿತು ಅಧಿಕೃತ ಮಾಹಿತಿ ಇಲ್ಲ.

  ಸದ್ಯ, ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾ ಮಾಡ್ತಿದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ ಚಿತ್ರದಲ್ಲೂ ನಟಿಸಿದ್ದಾರೆ.

  ರಾಬರ್ಟ್ ಸಿನಿಮಾ ನೋಡಿ ಆಶ್ಚರ್ಯ ಪಟ್ಟ ಮಂಗಳಮುಖಿ | Filmibeat Kannada

  ಅಂದ್ಹಾಗೆ, ಈ ಮುಂಚೆ ಈ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಬೇಕಿತ್ತು. ಸನ್ ಪಿಕ್ಚರ್ಸ್ ಪ್ರೊಡಕ್ಷನ್ ಸಂಸ್ಥೆ ಹಾಗೂ ವಿಜಯ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮುರುಗದಾಸ್ ಹೊರಬಂದರು. ನಂತರ ನೆಲ್ಸನ್ ದಿಲೀಪ್ ಕುಮಾರ್ ಡೈರೆಕ್ಟರ್ ಆಗಿ ಆಯ್ಕೆಯಾದರು. ದಕ್ಷಿಣ ಭಾರತದ ಖ್ಯಾತ ನಟ ಅರುಣ್ ವಿಜಯ್ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actress Pooja Hegde Playing female lead In Vijay 65th Movie. as per source, have another heroine in this project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X