twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ ಜೊತೆ ಇನ್ನೆಂದೂ ಕೆಲಸ ಮಾಡುವುದಿಲ್ಲ: ಹಿರಿಯ ನಟ ವಡಿವೇಲು

    |

    ತಮಿಳಿನ ಖ್ಯಾತ ನಟ ವಡಿವೇಲು, ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾಸ್ಯ ನಟ. ನೂರಾರು ಸಿನಿಮಾಗಳಲ್ಲಿ ನಟಿಸಿರುವ ವಡಿವೇಲು ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    ಆದರೆ ಕೆಲ ವರ್ಷದಿಂದ ವಡಿವೇಲು ಸಿನಿಮಾದಿಂದ ದೂರ ಉಳಿದಿದ್ದರು. 2017 ರಲ್ಲಿ ವಿಜಯ್ ನಟಿಸಿದ್ದ 'ಮೆರ್ಸಲ್' ಸಿನಿಮಾದ ಬಳಿಕ ಇನ್ನಾವುದೇ ಸಿನಿಮಾದಲ್ಲಿ ವಡಿವೇಲು ನಟಿಸಿರಲಿಲ್ಲ. ಆದರೆ ಈಗ ನಟನೆಗೆ ವಾಪಸ್ಸಾಗಿದ್ದಾರೆ ವಡಿವೇಲು.

    ತಮಿಳು ಸಿನಿಮಾ ನಿರ್ಮಾಣ ಸಂಘವು ನಟ ವಡಿವೇಲು ಮೇಲೆ ನಿರ್ಬಂಧ ಹೇರಿತ್ತು ಹಾಗಾಗಿ 2018 ರಿಂದ ಈ ವರೆಗೂ ವಡಿವೇಲುಗೆ ಯಾವುದೇ ಸಿನಿಮಾದಲ್ಲಿ ಅವಕಾಶ ನೀಡಲಾಗಿರಲಿಲ್ಲ. ಆದರೆ ಇದೀಗ ನಿರ್ಬಂಧ ಹಿಂಪಡೆಯಲಾಗಿದ್ದು, ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ.

    ವಡಿವೇಲು ಮೇಲೆ ನಿರ್ಭಂಧ ಹೇರಲು ಕಾರಣವಾಗಿದ್ದು ತಮಿಳಿನ ಪ್ರಖ್ಯಾತ ನಿರ್ದೇಶಕ ಎಸ್.ಶಂಕರ್. ನಿರ್ದೇಶಕ ಎಸ್.ಶಂಕರ್ ನಿರ್ಮಾಣ ಮಾಡಿದ್ದ ಚಿಂಬು ದೇವನ್ ನಿರ್ದೇಶನ ಮಾಡಿದ್ದ 'ಇಮ್‌ಸೈ ಅರಸನ್ 23ನೇ ಪುಲಿಕೇಶಿ' ಸಿನಿಮಾದ ಮುಂದುವರೆದ ಭಾಗದ ಕುರಿತು ಶಂಕರ್ ಹಾಗೂ ವಡಿವೇಲು ನಡುವೆ ಸಾಕಷ್ಟು ಮನಸ್ಥಾಪ ಉಂಟಾದ ಕಾರಣ ಶಂಕರ್ ನಿರ್ಮಾಪಕರ ಸಂಘವನ್ನು ಸಂಪರ್ಕ ಮಾಡಿ ವಡಿವೇಲು ಮೇಲೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ್ದರು. ಅಂತೆಯೇ 2018ರ ಆರಂಭದಲ್ಲಿ ವಡಿವೇಲು ಮೇಲೆ ನಿರ್ಬಂಧ ಹೇರಲಾಯಿತು.

    ಇನ್ನು ಮುಂದೆ ಶಂಕರ್ ಸಿನಿಮಾದಲ್ಲಿ ನಟಿಸುವುದಿಲ್ಲ: ವಡಿವೇಲು

    ಇನ್ನು ಮುಂದೆ ಶಂಕರ್ ಸಿನಿಮಾದಲ್ಲಿ ನಟಿಸುವುದಿಲ್ಲ: ವಡಿವೇಲು

    ಇದೀಗ ವಡಿವೇಲು ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದ್ದು, ವಡಿವೇಲು ಮತ್ತೆ ನಟನೆಗೆ ಬಂದಿದ್ದಾರೆ. ಇನ್ನೂ ಹೆಸರಿಡದ ಹೊಸ ಸಿನಿಮಾವೊಂದರ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾತನಾಡಿದ ವಡಿವೇಲು ''ನಾನು ಇನ್ನು ಮುಂದೆ ಶಂಕರ್ ಸಿನಿಮಾದಲ್ಲಿ ನಟಿಸುವುದಿಲ್ಲ'' ಎಂದಿದ್ದಾರೆ. ಅಷ್ಟೇ ಅಲ್ಲದೆ, 'ಪುಲಿಕೇಶಿ' ಸಿನಿಮಾ ಸರಣಿಯಿಂದಲೂ ನಾನು ಹೊರಗೆ ಬಂದಿದ್ದೇನೆ'' ಎಂದಿದ್ದಾರೆ ವಡಿವೇಲು.

    ಕಾಸ್ಟ್ಯೂಮ್ ವಿಷಯವಾಗಿ ಜಗಳ ಮಾಡಿದ್ದ ವಡಿವೇಲು

    ಕಾಸ್ಟ್ಯೂಮ್ ವಿಷಯವಾಗಿ ಜಗಳ ಮಾಡಿದ್ದ ವಡಿವೇಲು

    2006ರಲ್ಲಿ ಚಿಂಬು ದೇವನ್ ನಿರ್ದೇಶಿಸಿದ್ದ 'ಇಮ್‌ಸೈ ಅರಸನ್ 23ನೇ ಪುಲಿಕೇಶಿ' ಹಾಸ್ಯ ಸಿನಿಮಾದಲ್ಲಿ ಪುಲಿಕೇಶಿ ಪಾತ್ರದಲ್ಲಿ ವಡಿವೇಲು ನಟಿಸಿದ್ದರು. ಆ ಸಿನಿಮಾಕ್ಕೆ ಎಸ್.ಶಂಕರ್ ಬಂಡವಾಳ ಹೂಡಿದ್ದರು. ಅದೇ ಸಿನಿಮಾದ ಎರಡನೇ ಭಾಗವನ್ನು ನಿರ್ಮಾಣ ಮಾಡಲು ಶಂಕರ್ ಹಾಗೂ ಸುಭಾಸ್ಕರನ್ ಅಲಿರಾಜಾ ಯೋಜಿಸಿ, ವಡಿವೇಲು ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿದ್ದರು. ಚಿಂಬು ದೇವನ್ ಅವರೇ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ಚಿತ್ರೀಕರಣ ನಡೆವ ವೇಳೆ ವಡಿವೇಲು, ತಮ್ಮ ಕಾಸ್ಟ್ಯೂಮ್ ವಿಷಯವಾಗಿ ಚಿತ್ರತಂಡದ ಜೊತೆಗೆ ಜಗಳವಾಡಿದರು. ನಿರ್ದೇಶಕ ಚಿಂಬು ದೇವನ್ ಜೊತೆ ಜಗಳವಾಡಿ ಚಿತ್ರೀಕರಣ ಬರವುದು ನಿಲ್ಲಿಸಿಬಿಟ್ಟರು.

    ನಿರ್ಬಂಧ ಹೇರಿದ ನಿರ್ಮಾಪಕರ ಸಂಘ

    ನಿರ್ಬಂಧ ಹೇರಿದ ನಿರ್ಮಾಪಕರ ಸಂಘ

    ಇದರಿಂದ ಕೆರಳಿದ ನಿರ್ಮಾಪಕರಾದ ಶಂಕರ್ ಹಾಗೂ ಸುಭಾಸ್ಕರನ್ ಅಲಿರಾಜಾ ತಮಿಳುನಾಡು ಕಲಾವಿದರ ಸಂಘಕ್ಕೆ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದರು. ಇವರಿಗೆ ಇನ್ನೂ ಕೆಲವು ನಿರ್ಮಾಪಕರು ಬೆಂಬಲ ನೀಡಿದ್ದರಿಂದ ವಡಿವೇಲು ಮೇಲೆ ನಿರ್ಬಂಧ ಹೇರಲಾಯಿತು. ಅವರನ್ನು ಯಾವುದೇ ಸಿನಿಮಾಕ್ಕೆ ತೆಗೆದುಕೊಳ್ಳದಂತೆ ಮಾಡಲಾಯ್ತು. ವಡಿವೇಲು ಅವರನ್ನು ಸತತ ಮೂರು ವರ್ಷಗಳ ಕಾಲ ಯಾವ ಸಿನಿಮಾಕ್ಕೂ ತೆಗೆದುಕೊಳ್ಳಲಿಲ್ಲ.

    ಶತ್ರುವಿನ, ಶತ್ರು ಮಿತ್ರ

    ಶತ್ರುವಿನ, ಶತ್ರು ಮಿತ್ರ

    ಇದೀಗ ಲೈಕಾ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯು ವಡಿವೇಲು ಸಹಾಯಕ್ಕೆ ಬಂದು ಆ ಪ್ರಕರಣವನ್ನು ಇತ್ಯರ್ಥಗೊಳಿಸಿರುವುದಲ್ಲದೆ ವಡಿವೇಲು ಮುಖ್ಯ ಪಾತ್ರದಲ್ಲಿ ನಟಿಸಲಿರುವ ಸಿನಿಮಾಕ್ಕೆ ಬಂಡವಾಳವನ್ನೂ ಹೂಡಿದೆ. ಸಿನಿಮಾಕ್ಕೆ 'ನಾಯಿ ಶೇಖರ್' ಎಂದು ಹೆಸರಿಡಲಾಗಿದೆ. ಈ ಹೆಸರು ವಡಿವೇಲು ಅವರ ಈ ಹಿಂದಿನ ಸಿನಿಮಾವೊಂದರಲ್ಲಿ ಜನಪ್ರಿಯವಾಗಿದ್ದ ಪಾತ್ರದ ಹೆಸರೇ ಆಗಿದೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಪಕ ಶಂಕರ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ. ಅಲ್ಲಿ ಲೈಕಾ ಪ್ರೊಡಕ್ಷನ್‌ಗೆ ಹಿನ್ನಡೆ ಆಗಿದೆ. ಅದೇ ದ್ವೇಷದಲ್ಲಿ ವಡಿವೇಲುಗೆ ಬೆಂಬಲ ನೀಡುತ್ತಿದೆ ಲೈಕಾ ಪ್ರೊಡಕ್ಷನ್ಸ್. ವಡಿವೇಲು ಈಗ ಒಟ್ಟು ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    English summary
    Comedy actor Vadivelu said he will never work with director, producer S Shankar again in his life. Shankar is the reason for banning Vadivelu for three years from Kollywood.
    Sunday, September 12, 2021, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X