Don't Miss!
- News
Budget 2023: ಬೆಂಗಳೂರಿನ ಉಪನಗರ ರೈಲು ಯೋಜನೆಗೆ 1,350 ಕೋಟಿ ರೂ.
- Automobiles
ಭಾರತದಲ್ಲಿ ಭಾರೀ ವೇಗವಾಗಿ ಮುನ್ನುಗುತ್ತಿದೆ ಟಾಟಾ.. ನಂಬರ್ 1 ಆಗುತ್ತಾ?
- Technology
ಯುಪಿಐ ಪಾವತಿಯಲ್ಲಿ ದಾಖಲೆ ಬರೆದ ಭಾರತೀಯರು; ವಹಿವಾಟು ಎಷ್ಟೆಂದು ತಿಳಿಯಿರಿ!
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಮುಖಾಮುಖಿ: 3ನೇ ದಿನದ Live score
- Lifestyle
50, 000 ವರ್ಷಗಳ ಬಳಿಕ ಗೋಚರಿಸಲಿದೆ ಹಸಿರು ಧೂಮಕೇತು: ಬರೀಗಣ್ಣಿನಲ್ಲಿ ಇದನ್ನು ಯಾವ ಸಮಯದಲ್ಲಿ ವೀಕ್ಷಿಸಬಹುದು
- Finance
UPI Transactions in January 2023 : ಜನವರಿಯಲ್ಲಿ 8 ಬಿಲಿಯನ್ ಯುಪಿಐ ವಹಿವಾಟು, ಎಷ್ಟು ಮೌಲ್ಯ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರು, ಮೈಸೂರು, ಬಳ್ಳಾರಿಯಲ್ಲಿ ಯಾವ ಚಿತ್ರಕ್ಕೆ ಎಷ್ಟು ಶೋ? ಹೆಚ್ಚು ಶೋ ಪಡೆದ ಚಿತ್ರ ಯಾವುದು?
ಸಂಕ್ರಾಂತಿ ಪ್ರಯುಕ್ತ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿ ಊಹೆಯಂತೆ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸುತ್ತಿವೆ. ವಿಜಯ್ ನಟನೆಯ ವಾರಿಸು ಚಿತ್ರ 200 ಕೋಟಿ ಗಳಿಸುವತ್ತ ಮುನ್ನುಗ್ಗುತ್ತಿದ್ದರೆ, ಅಜಿತ್ ನಟನೆಯ ತುನಿವು, ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳೂ ಸಹ ನೂರು ಕೋಟಿ ಗಳಿಕೆ ಮಾಡಿ ಒಳ್ಳೆಯ ಪ್ರದರ್ಶನವನ್ನೇ ಕಾಣುತ್ತಿವೆ.
ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕಲ್ಲಿಯೂ ಈ ನಾಲ್ಕು ಚಿತ್ರಗಳು ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದ್ದು, ಈ ಚಿತ್ರಗಳ ಬಿಡುಗಡೆಯಿಂದ ಕನ್ನಡದ ಚಿತ್ರಗಳಿಗೆ ಹಿನ್ನಡೆ ಕೂಡ ಆಯಿತು. ಈ ಚಿತ್ರಗಳ ಜತೆಗೆ ಬಿಡುಗಡೆಗೊಂಡ ಆರ್ಕೆಸ್ಟ್ರಾ ಮೈಸೂರು ಚಿತ್ರ ಒಳ್ಳೆಯ ವಿಮರ್ಶೆ ಪಡೆದುಕೊಂಡರೂ ಸಹ ನಿರೀಕ್ಷಿಸಿದಷ್ಟು ಶೋಗಳನ್ನು ಪಡೆದುಕೊಳ್ಳಲಿಲ್ಲ. ಸಿಕ್ಕ ಪ್ರದರ್ಶನಗಳು ಹೌಸ್‌ಫುಲ್ ಆಗಲಿಲ್ಲ.
ಇನ್ನು ಆ ವಾರ ಬಿಡುಗಡೆಗೊಂಡ ಉಳಿದ ಕನ್ನಡ ಚಿತ್ರಗಳ ಕಥೆಯೂ ಇದೆ. ಸರಿಯಾದ ಪ್ರಮೋಷನ್ ಇಲ್ಲದೇ ಸರಿಯಾದ ಚಿತ್ರಮಂದಿರಗಳಿಲ್ಲದೇ ತೆರೆಕಂಡು ಸೋಲನ್ನು ಅನುಭವಿಸಿದವು. ಅತ್ತ ನಟ ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರ ಮಾತ್ರ ಈ ಚಿತ್ರಗಳ ಅಬ್ಬರದ ನಡುವೆಯೂ ರಾಜ್ಯದ ಹಲವೆಡೆ 25 ದಿನಗಳನ್ನು ಪೂರೈಸಿದೆ. ವೇದ ಚಿತ್ರ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನವನ್ನು ಕಳೆದುಕೊಂಡರೂ ಸಹ ವಾಷ್ಔಟ್ ಆಗಲಿಲ್ಲ. ಇನ್ನು ಇಂದಿಗೂ ( ಜನವರಿ 17 ) ವೇದ ಚಿತ್ರ ಪ್ರದರ್ಶನವನ್ನು ಕಾಣುತ್ತಿದೆ. ಹಾಗಿದ್ದರೆ ಇಂದು ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿ ನಗರಗಳಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಬೆಂಗಳೂರಿನ ಶೋಗಳ ವಿವರ
ಇಂದು ( ಜನವರಿ 17 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..
ವಾರಿಸು - 318 ಪ್ರದರ್ಶನಗಳು
ವಾಲ್ತೇರು ವೀರಯ್ಯ - 281 ಪ್ರದರ್ಶನಗಳು
ತುನಿವು - 279 ಪ್ರದರ್ಶನಗಳು
ವೀರಸಿಂಹ ರೆಡ್ಡಿ - 218 ಪ್ರದರ್ಶನಗಳು
ಅವತಾರ್ ದ ವೇ ಆಫ್ ವಾಟರ್ - 80 ಪ್ರದರ್ಶನಗಳು

ಮೈಸೂರಿನ ಶೋಗಳ ಪಟ್ಟಿ
ಇಂದು ( ಜನವರಿ 17 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..
ತುನಿವು - 31 ಪ್ರದರ್ಶನಗಳು
ವಾರಿಸು - 30 ಪ್ರದರ್ಶನಗಳು
ವಾಲ್ತೇರು ವೀರಯ್ಯ - 25 ಪ್ರದರ್ಶನಗಳು
ವೀರಸಿಂಹ ರೆಡ್ಡಿ - 20 ಪ್ರದರ್ಶನಗಳು
ವೇದ - 11 ಪ್ರದರ್ಶನಗಳು

ಬಳ್ಳಾರಿ ಶೋಗಳ ವಿವರ
ಇಂದು ( ಜನವರಿ 17 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 4 ಪಟ್ಟಿ ಈ ಕೆಳಕಂಡಂತಿದೆ..
ತುನಿವು/ ತೆಗಿಂಪು - 8 ಪ್ರದರ್ಶನಗಳು
ವಾಲ್ತೇರು ವೀರಯ್ಯ - 8 ಪ್ರದರ್ಶನಗಳು
ವೀರಸಿಂಹ ರೆಡ್ಡಿ - 8 ಪ್ರದರ್ಶನಗಳು
ವಾರಸುಡು - 4 ಪ್ರದರ್ಶನಗಳು