For Quick Alerts
  ALLOW NOTIFICATIONS  
  For Daily Alerts

  ವಾರ ಪೂರೈಸಿದ ವಾರಿಸು, ತುನಿವು; 7 ದಿನಕ್ಕೆ ಕರ್ನಾಟಕದಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದವರಾರು?

  |

  ಈ ಬಾರಿಯ ಸಂಕ್ರಾಂತಿ ರೇಸ್‌ಗೆ ತಮಿಳಿನ ಇಬ್ಬರು ಸ್ಟಾರ್ ನಟರ ಚಿತ್ರಗಳು ಹಾಗೂ ತೆಲುಗಿನ ಇಬ್ಬರು ಸ್ಟಾರ್ ನಟರ ಚಿತ್ರಗಳು ತೆರೆಗೆ ಅಪ್ಪಳಿಸಿದವು. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಬಿಡುಗಡೆಗೊಂಡವು. ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಗೊಂಡವು.

  ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಜನವರಿ 12ರಂದು ಬಿಡುಗಡೆಗೊಂಡರೆ, ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರ ಜನವರಿ 13ರಂದು ಬಿಡುಗಡೆಗೊಂಡಿತು. ಈ ಎರಡು ಚಿತ್ರಗಳ ಸಂಕ್ರಾಂತಿ ರೇಸ್‌ನಲ್ಲಿ ಮೊದಲ ದಿನದ ಗಳಿಕೆಯಲ್ಲಿ ಚಿರಂಜೀವಿ ವಿರುದ್ಧ ಬಾಲಕೃಷ್ಣ ನಟನೆಯ ಚಿತ್ರ ಗೆದ್ದು ಬೀಗಿತು. ಆದರೆ ನಂತರದ ದಿನಗಳಲ್ಲಿ ಚಿರಂಜೀವಿ ನಟನೆಯ ಚಿತ್ರ ಮುನ್ನಡೆ ಕಾಯ್ದುಕೊಂಡಿತು.

  ಅತ್ತ ಇದಕ್ಕೂ ಮುನ್ನ ಜನವರಿ 11ರಂದು ಬಿಡುಗಡೆಗೊಂಡಿದ್ದ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳಲ್ಲಿ ಮೊದಲ ದಿನ ವಿಶ್ವದಾದ್ಯಂತ ವಾರಿಸು ಹೆಚ್ಚು ಗಳಿಸಿದರೆ, ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ತುನಿವು ಹೆಚ್ಚು ಗಳಿಸಿತ್ತು. ನಂತರದ ದಿನಗಳಲ್ಲಿ ವಾರಿಸು ಎಲ್ಲಾ ವಿಭಾಗಗಳಲ್ಲಿಯೂ ತುನಿವು ಚಿತ್ರವನ್ನು ಹಿಂದಿಕ್ಕಿ ಸಂಕ್ರಾಂತಿಯ ವಿನ್ನರ್ ಎನಿಸಿಕೊಂಡಿದೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ಎರಡೂ ಚಿತ್ರಗಳು ದೊಡ್ಡ ಓಪನಿಂಗ್ ಪಡೆದುಕೊಂಡಿದ್ದವು. ಸದ್ಯ ಚಿತ್ರಗಳು ಏಳು ದಿನಗಳನ್ನು ಪೂರೈಸಿದ್ದು, ಇಷ್ಟು ದಿನಗಳಲ್ಲಿ ಯಾವ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಸಿದೆ ಹಾಗೂ ಯಾವ ಚಿತ್ರ ಮುನ್ನಡೆ ಸಾಧಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  7 ದಿನಗಳಲ್ಲಿ ಎರಡು ಚಿತ್ರಗಳು ರಾಜ್ಯದಲ್ಲಿ ಗಳಿಸಿದ್ದೆಷ್ಟು?

  7 ದಿನಗಳಲ್ಲಿ ಎರಡು ಚಿತ್ರಗಳು ರಾಜ್ಯದಲ್ಲಿ ಗಳಿಸಿದ್ದೆಷ್ಟು?

  ವಿಜಯ್ ಹಾಗೂ ರಶ್ಮಿಕಾ ನಟನೆಯ ವಾರಿಸು ಚಿತ್ರ ಏಳು ದಿನಗಳಲ್ಲಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 11.85 ಕೋಟಿ ಗಳಿಕೆ ಮಾಡಿದೆ. ಅತ್ತ ಅಜಿತ್ ಕುಮಾರ್ ಹಾಗೂ ಮಂಜು ವಾರಿಯರ್ ನಟನೆಯ ತುನಿವು ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಏಳು ದಿನಗಳಲ್ಲಿ 10.82 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಾಜ್ಯ ಬಾಕ್ಸ್ ಆಫೀಸ್‌ನ ಮೊದಲ ಏಳು ದಿನಗಳ ಜಿದ್ದಾಜಿದ್ದಿಯಲ್ಲಿ ತುನಿವು ಚಿತ್ರವನ್ನು ವಿಜಯ್ ವಾರಿಸು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.

  ಬೆಂಗಳೂರಿನಲ್ಲಿ ವಾರಿಸುಗೆ ಹೆಚ್ಚು ಶೋಸ್!

  ಬೆಂಗಳೂರಿನಲ್ಲಿ ವಾರಿಸುಗೆ ಹೆಚ್ಚು ಶೋಸ್!

  ಇನ್ನು ಇಂದು ( ಜನವರಿ 18 ) ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿರುವ ಟಾಪ್ ಐದು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

  ವಾರಿಸು - 321 ಪ್ರದರ್ಶನಗಳು

  ತುನಿವು - 279 ಪ್ರದರ್ಶನಗಳು

  ವಾಲ್ತೇರು ವೀರಯ್ಯ - 277 ಪ್ರದರ್ಶನಗಳು

  ವೀರಸಿಂಹ ರೆಡ್ಡಿ - 212 ಪ್ರದರ್ಶನಗಳು

  ಅವತಾರ್ ದ ವೇ ಆಫ್ ವಾಟರ್ - 82 ಪ್ರದರ್ಶನಗಳು

  ಮೈಸೂರಿನಲ್ಲಿ ಯಾವ ಚಿತ್ರಕ್ಕೆ ಎಷ್ಟು ಶೋ?

  ಮೈಸೂರಿನಲ್ಲಿ ಯಾವ ಚಿತ್ರಕ್ಕೆ ಎಷ್ಟು ಶೋ?

  ಇಂದು ( ಜನವರಿ 18 ) ಮೈಸೂರಿನಲ್ಲಿ ಅತಿಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

  ತುನಿವು - 31 ಪ್ರದರ್ಶನಗಳು

  ವಾರಿಸು - 30 ಪ್ರದರ್ಶನಗಳು

  ವಾಲ್ತೇರು ವೀರಯ್ಯ - 25 ಪ್ರದರ್ಶನಗಳು

  ವೀರಸಿಂಹ ರೆಡ್ಡಿ - 21 ಪ್ರದರ್ಶನಗಳು

  ವೇದ - 11 ಪ್ರದರ್ಶನಗಳು

  English summary
  Varisu vs Thunivu 1 week box office collection report; Vijay beats Ajith in Karnataka . Read on
  Wednesday, January 18, 2023, 12:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X