Don't Miss!
- News
Lakhimpur violence: ಸಚಿವರ ಪುತ್ರನ ಜಾಮೀನು ಅರ್ಜಿಗೆ ಇಂದು ಸುಪ್ರೀಂ ಕೋರ್ಟ್ ಆದೇಶ
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Technology
ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ, ಅವಸರ ಬೇಡಾ!..ಇಲ್ಲಿ ಗಮನಿಸಿ!
- Sports
SA 20: ಎಸ್ಎ 20 ಲೀಗ್ನ ಮೊದಲ ಶತಕ ಗಳಿಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
- Lifestyle
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾರಿಸು vs ತುನಿವು: ಮೊದಲ ದಿನ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಸಿ ಗೆದ್ದ ಚಿತ್ರ ಯಾವುದು?
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಂಕ್ರಾಂತಿ ರೇಸ್ ಏರ್ಪಟ್ಟಿದೆ. ಸಂಕ್ರಾಂತಿ ಪ್ರಯುಕ್ತ ತಮಿಳು ನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಈ ದಿನಗಳಂದು ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ತಮಿಳುನಾಡಿನಲ್ಲಿ ಇಬ್ಬರು ಸ್ಟಾರ್ ನಟರಾದ ವಿಜಯ್ ಹಾಗೂ ಅಜಿತ್ ಕುಮಾರ್ ನಟನೆಯ ಚಿತ್ರಗಳು ಬಿಡುಗಡೆಯಾಗಿದ್ದು, ಎರಡೂ ಚಿತ್ರಗಳ ನಡುವೆ ಒಂಬತ್ತು ವರ್ಷಗಳ ಬಳಿಕ ಮತ್ತೆ ಸಂಕ್ರಾಂತಿ ಮುಖಾಮುಖಿ ಏರ್ಪಟ್ಟಿದೆ.
ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡ ಕಾರಣ ಎರಡೂ ಚಿತ್ರಗಳ ಪೈಕಿ ಯಾವ ಚಿತ್ರಗಳು ಹೆಚ್ಚು ಹಣ ಗಳಿಸಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿ ಬಳಗಗಳಲ್ಲಿ ಇತ್ತು. ಬಿಡುಗಡೆ ದಿನ ವಾರಿಸು ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡರೆ, ತುನಿವು ಸಾಧಾರಣಕ್ಕಿಂತ ಉತ್ತಮ ಎಂಬ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿಯೂ ಸಹ ಈ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡವು. ಅದರಲ್ಲಿಯೂ ಬೆಂಗಳೂರಿನ ಹಲವೆಡೆ ಮಧ್ಯರಾತ್ರಿಯಿಂದಲೇ ಪ್ರದರ್ಶನಗಳು ಆರಂಭಗೊಂಡವು. ಕರ್ನಾಟಕದಾದ್ಯಂತ ವಾರಿಸು ಬಿಡುಗಡೆಯ ದಿನ 1067 ಪ್ರದರ್ಶನಗಳನ್ನು ಪಡೆದುಕೊಂಡಿತ್ತು ಹಾಗೂ ತುನಿವು 820 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಹೀಗೆ ವಾರಿಸುಗಿಂತ ತುನಿವು ಚಿತ್ರ ಕಡಿಮೆ ಪ್ರದರ್ಶನ ಪಡೆದುಕೊಂಡರೂ ಸಹ ಕಲೆಕ್ಷನ್ ವಿಚಾರದಲ್ಲಿ ಒಳ್ಳೆಯ ಪೈಪೋಟಿಯನ್ನೇ ನೀಡಿದೆ. ಹಾಗಿದ್ದರೆ ರಾಜ್ಯದಲ್ಲಿ ಬಿಡುಗಡೆಯ ದಿನ ಯಾವ ಚಿತ್ರ ಎಷ್ಟು ಗಳಿಸಿದೆ, ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ರಾಜ್ಯದಲ್ಲಿ ಯಾವ ಚಿತ್ರದ ಗಳಿಕೆ ಎಷ್ಟು?
ವಿಜಯ್ ನಟನೆಯ ವಾರಿಸು ಚಿತ್ರ ರಾಜ್ಯಾದ್ಯಂತ ಬಿಡುಗಡೆಯ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿದೆ. ಹೌದು, ವಿಜಯ್ ನಟನೆಯ ವಾರಿಸು ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 5.65 ಕೋಟಿ ಗಳಿಕೆ ಮಾಡಿದ್ದು, ತುನಿವು ಚಿತ್ರ 4.77 ಕೋಟಿ ಗಳಿಸಿದೆ. ಹೀಗೆ ಕಲೆಕ್ಷನ್ ವಿಚಾರದಲ್ಲಿ ವಾರಿಸು ಮೊದಲ ದಿನ ಗೆದ್ದರೂ ಸಹ ಕಡಿಮೆ ಪ್ರದರ್ಶನಗಳಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡಿರುವ ತುನಿವು ಒಳ್ಳೆಯ ಪೈಪೋಟಿ ನೀಡಿದೆ.

ಮೈಸೂರಿನಲ್ಲಿ ಯಾವ ಚಿತ್ರದ ಕಲೆಕ್ಷನ್ ಹೆಚ್ಚು?
ಮೈಸೂರು ನಗರದಲ್ಲಿ ಬಿಡುಗಡೆಯ ದಿನ ವಾರಿಸು 65 ಪ್ರದರ್ಶನಗಳನ್ನು ಪಡೆದುಕೊಂಡಿತ್ತು ಹಾಗೂ ತುನಿವು ಚಿತ್ರ 56 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಇನ್ನು ವಾರಿಸು ಮೊದಲ ದಿನ ಮೈಸೂರಿನಲ್ಲಿ 18.7 ಲಕ್ಷ ಪಡೆದುಕೊಂಡರೆ, ತುನಿವು ಚಿತ್ರ ಮೈಸೂರಿನಲ್ಲಿ 16.8 ಲಕ್ಷ ಪಡೆದುಕೊಂಡಿದೆ. ಹೀಗೆ ಮೊದಲ ದಿನ ಮೈಸೂರಿನಲ್ಲಿ ತುನಿವು ವಿರುದ್ಧ ವಾರಿಸು ಗೆದ್ದಿದ್ದು, ಎರಡನೇ ದಿನದ ಬುಕಿಂಗ್ ಗಮನಿಸಿದರೆ ತುನಿವು ಹೆಚ್ಚು ಗಳಿಸುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ ಹೆಚ್ಚು ಗಳಿಸಿದ ಚಿತ್ರ?
ಮೈಸೂರಿನಂತೆ ಮಂಗಳೂರಿನಲ್ಲಿಯೂ ತುನಿವುಗಿಂತ ವಾರಿಸು ಚಿತ್ರ ಹೆಚ್ಚು ಪ್ರದರ್ಶನ ಹಾಗೂ ಕಲೆಕ್ಷನ್ ಮಾಡಿದೆ. ಮಂಗಳೂರಿನಲ್ಲಿ ಬಿಡುಗಡೆಯ ದಿನ ತುನಿವು 3.69 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದರೆ, ವಾರಿಸು 5.75 ಲಕ್ಷ ಕಲೆಕ್ಷನ್ ಮಾಡಿತು. ಹೀಗೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ತುನಿವುಗಿಂತ ವಾರಿಸು ಹೆಚ್ಚು ಕಲೆಕ್ಷನ್ ಮಾಡಿದ್ದರೆ, ಬಳ್ಳಾರಿ, ಕಲಬುರಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ವಾರಿಸುಗಿಂತ ತುನಿವು ಹೆಚ್ಚು ಗಳಿಸಿದೆ. ಇನ್ನು ತುನಿವು ತೆಲುಗು ಡಬ್ ಬಿಡುಗಡೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಹೆಚ್ಚು ಗಳಿಕೆ ಮಾಡಿದೆ ಎನ್ನಬಹುದು,