For Quick Alerts
  ALLOW NOTIFICATIONS  
  For Daily Alerts

  5 ದಿನಕ್ಕೆ 'ವಾರಿಸು' ಕಲೆಕ್ಷನ್ 150 ಕೋಟಿ: 'ಥುನಿವು' 200, 300 ಎಷ್ಟು?

  |

  ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡ್ತಿವೆ. ಕಾಲಿವುಡ್‌ನಲ್ಲಿ ದಳಪತಿ ವಿಜಯ್ 'ವಾರಿಸು' ಹಾಗೂ ಅಜಿತ್ ನಟನೆಯ 'ಥುನಿವು' ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್‌ನಲ್ಲಿ ನೆಕ್‌ ಟು ನೆಕ್ ಫೈಟ್ ನಡೀತಿದೆ.

  ಎರಡೂ ಸಿನಿಮಾಗಳಿಗೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು 2 ಸಿನಿಮಾಗಳನ್ನು ನೋಡಲು ಮುಗಿ ಬಿದ್ದಿದ್ದರು. ಫಸ್ಟ್ ವೀಕೆಂಡ್‌ ಯಾವ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಲೆಕ್ಕಾಚಾರ ನಡೀತಿದೆ. ಇದೀಗ 'ವಾರಿಸು' ಸಿನಿಮಾ 5 ದಿನಕ್ಕೆ 150 ಕೋಟಿ ರೂ. ಕಲೆಕ್ಷನ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಇದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, 'ಥುನಿವು' ಟೀಂ ಎಷ್ಟು ಕೋಟಿ ಘೋಷಣೆ ಮಾಡಬಹುದು ಎನ್ನುವ ಚರ್ಚೆ ಶುರುವಾಗಿದೆ.

  ಸಂಕ್ರಾಂತಿ ಪ್ರಯುಕ್ತ ರಿಲೀಸ್ ಆದ 4 ಪರಭಾಷಾ ಚಿತ್ರಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಳಿಸಿ ಗೆದ್ದವರಾರು?ಸಂಕ್ರಾಂತಿ ಪ್ರಯುಕ್ತ ರಿಲೀಸ್ ಆದ 4 ಪರಭಾಷಾ ಚಿತ್ರಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಳಿಸಿ ಗೆದ್ದವರಾರು?

  ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ನಡುವೆ ಭಾರೀ ಪೈಪೋಟಿ ಇದೆ. ಪದೇ ಪದೇ ಫ್ಯಾನ್ಸ್ ವಾರ್ ನಡೀತಾನೇ ಇರುತ್ತೆ. ಈ ಹಿಂದೆ ಕೂಡ ಇಬ್ಬರ ಸಿನಿಮಾ ಒಟ್ಟೊಟ್ಟಿಗೆ ಥಿಯೇಟರ್‌ಗೆ ಬಂದು ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. ಈ ಸಂಕ್ರಾಂತಿ ಫೈಟ್‌ನಲ್ಲಿ ಗೆದ್ದವರು ಯಾರು? ಎನ್ನುವ ಚರ್ಚೆ ಇನ್ನು ಮುಂದುವರೆದಿದೆ.

  'ವಾರಿಸು' ಗಳಿಕೆ 150 ಕೋಟಿ

  'ವಾರಿಸು' ಗಳಿಕೆ 150 ಕೋಟಿ

  ದಳಪತಿ ವಿಜಯ್ ನಟನೆಯ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ವಾರಿಸು'. ತೆಲುಗಿನ ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹಾಕಿದ್ದಾರೆ. ಚಿತ್ರವನ್ನು 'ವಾರಸುಡು' ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿ 2 ದಿನ ತಡವಾಗಿ ರಿಲೀಸ್ ಮಾಡಲಾಗಿದೆ. ತುಂಬು ಕುಟುಂಬದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ವಿಜಯ್ ನಟನೆ ನೋಡಲು ಪ್ರೇಕ್ಷಕರು ಥಿಯೇಟರ್ ಮುಂದೆ ಕ್ಯೂ ನಿಂತಿದ್ದಾರೆ. ಸದ್ಯ ಸಿನಿಮಾ 5 ದಿನಕ್ಕೆ 150 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಫೀಷಿಯಲ್ ಆಗಿ ಹೇಳಿದೆ.

  'ಥುನಿವು' ಗಳಿಕೆ 200 ಕೋಟಿನಾ?

  'ಥುನಿವು' ಗಳಿಕೆ 200 ಕೋಟಿನಾ?

  ಕಾಲಿವುಡ್, ಟಾಲಿವುಡ್‌ನಲ್ಲಿ ಸಿನಿಮಾ ಕಲೆಕ್ಷನ್‌ಗಳ ಲೆಕ್ಕಾಚಾರ ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ಅಭಿಮಾನಿಗಳನ್ನು ಮೆಚ್ಚಿಸಲು ಕೆಲವೊಮ್ಮೆ ಸಿನಿಮಾ ನಿರ್ಮಾಪಕರು ಅಸಲಿ ಕಲೆಕ್ಷನ್‌ಗಿಂತ ಹೆಚ್ಚು ಘೋಷಣೆ ಮಾಡುತ್ತಾರೆ ಎನ್ನಲಾಗುತ್ತದೆ. ಈ ಹಿಂದೆ ಹಲವು ಸಿನಿಮಾಗಳ ವಿಚಾರದಲ್ಲಿ ಇದೇ ರೀತಿ ಆಗಿತ್ತು. 'ವಾರಿಸು' ಸಿನಿಮಾ ನಿರ್ಮಾಪಕರು ಕೂಡ ಪ್ರತಿಷ್ಠೆಯ ಕಾರಣಕ್ಕೆ ಈ ರೀತಿ ಮಾಡಿರುವ ಎನ್ನುವ ಅನುಮಾನ ಕೆಲವರದ್ದು. ಹಾಗಾದರೆ 'ಥುನಿವು' ಕಲೆಕ್ಷನ್ 200 ಕೋಟಿ ಎಂದು ಘೋಷಿಸುತ್ತಾರಾ? ಎಂದು ಊಹಿಸುತ್ತಿದ್ದಾರೆ.

  'ವಾರಿಸು' ಕಲೆಕ್ಷನ್ ಬಗ್ಗೆ ಚರ್ಚೆ

  'ವಾರಿಸು' ಕಲೆಕ್ಷನ್ ಬಗ್ಗೆ ಚರ್ಚೆ

  ದಳಪತಿ ವಿಜಯ್ ಸಿನಿಮಾಗಳು ನಿಜಕ್ಕೂ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡ್ತಾವೆ. ರಜಿನಿಕಾಂತ್‌ ರೇಂಜ್‌ನಲ್ಲಿ ಕಾಲಿವುಡ್‌ನಲ್ಲಿ ದಳಪತಿಗೆ ಕ್ರೇಜ್ ಇದೆ. ಒಂದೇ ಭಾಷೆಯಲ್ಲಿ ವಿಜಯ್ ಸಿನಿಮಾ 200, 300 ಕೋಟಿ ಗಳಿಕೆ ಕಂಡಿರುವ ದಾಖಲೆ ಇದೆ. ಆದರೆ 5 ದಿನಕ್ಕೆ 'ವಾರಿಸು' 150 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವುದನ್ನು ಒಪ್ಪಲು ಕೆಲವರು ಸಿದ್ಧರಿಲ್ಲ. ಯಾಕಂದ್ರೆ ಸಿನಿಮಾ ಬಗ್ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಂಕ್ರಾಂತಿಗೆ ಸಂಭ್ರಮದಲ್ಲಿ ನೋಡಬೇಕು ಎನ್ನುವ ಕಾರಣಕ್ಕೆ ಪ್ರೇಕ್ಷಕರು ನೋಡಿದ್ದಾರೆ. ಹಾಗಾಗಿ 150 ಕೋಟಿ ಕಲೆಕ್ಷನ್ ಎನ್ನುವುದು ಸುಳ್ಳು ಎನ್ನುವುದು ಕೆಲವರ ವಾದ.

  'ಥುನಿವು' ಕಲೆಕ್ಷನ್ ಎಷ್ಟು?

  'ಥುನಿವು' ಕಲೆಕ್ಷನ್ ಎಷ್ಟು?

  ಸಂಕ್ರಾಂತಿಗೆ ತಮಿಳಿನಲ್ಲಿ 'ವಾರಿಸು' ಹಾಗೂ 'ಥುನಿವು' ಸಿನಿಮಾಗಳ ನಡುವೆ ಪೈಪೋಟಿ ಇದ್ದರೆ ತೆಲುಗಿನಲ್ಲಿ 'ವೀರ ಸಿಂಹರೆಡ್ಡಿ' ಹಾಗೂ 'ವಾಲ್ತೇರು ವೀರಯ್ಯ' ನಡುವೆ ಫೈಟ್ ಇದೆ. ಫಸ್ಟ್ ವೀಕೆಂಡ್‌ನಲ್ಲಿ 'ವಾಲ್ತೇರು ವೀರಯ್ಯ' 108 ಕೋಟಿ, 'ವೀರ ಸಿಂಹರೆಡ್ಡಿ' 104 ಕೋಟಿ ಗಳಿಸಿರುವುದಾಗಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಘೋಷಿಸಿದೆ. ಆದರೆ 'ಥುನಿವು' ಸಿನಿಮಾ ಕಲೆಕ್ಷನ್ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ. ಕೆಲವರು ಲೆಕ್ಕಾಚಾರದ ಪ್ರಕಾರ 4 ಸಿನಿಮಾಗಳೂ ಕೂಡ 100 ಕೋಟಿ ಗಡಿ ದಾಟಿವೆ. ಆದರೆ ಇಷ್ಟು ಬೇಗ 'ವಾರಿಸು' ಗಳಿಕೆ 150 ಕೋಟಿ ಎನ್ನುವುದನ್ನು ಕೆಲವರು ಒಪ್ಪುತ್ತಿಲ್ಲ.

  English summary
  Varisu vs Thunivu: Varisu crosses 150Cr collection worldwide in just 5 days. Fans of Ajith and Vijay debate as to whose film is bigger at the box office. Know more.
  Monday, January 16, 2023, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X