Don't Miss!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಲಿವುಡ್‌ಗೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ: ನಟ ಪ್ರಭುದೇವ 60ನೇ ಚಿತ್ರದಲ್ಲಿ ನಟನೆ
ತಮ್ಮ ಕಂಚಿನ ಕಂಠದಿಂದಲೇ ಫೇಮಸ್ ಆಗಿರುವ ನಟ ವಸಿಷ್ಠ ಸಿಂಹ ಕನ್ನಡ ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜನವರಿ 26ರಂದು ನಟಿ ಹರಿಪ್ರಿಯಾ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ನಟ ವಸಿಷ್ಠ ಸಿಂಹ, ಇದೀಗ ಮತ್ತೊಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಅದೇನೆಂದರೆ, ನಟ ಪ್ರಭುದೇವ ಅವರ 60ನೇ ಸಿನಿಮಾ 'ವೂಲ್ಫ್ 'ನಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಇಂದು ಟೈಟಲ್ ಲುಕ್ ರಿವೀಲ್ ಮಾಡಲಾಗಿದೆ.
ವಸಿಷ್ಠ ಸದ್ಯ ಕನ್ನಡದ 'Love ಲೀ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ರಿಲೀಸ್ ಆಗಲು ರೆಡಿಯಾಗಿದೆ. ಈ ನಡುವೆಯೇ ಸದ್ದಿಲ್ಲದೇ ವಸಿಷ್ಠ ಸಿಂಹ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ನಟ ಪ್ರಭುದೇವ ಅವರ 60ನೇ ಚಿತ್ರ 'ವೂಲ್ಫ್ 'ನಲ್ಲಿ ನಟಿಸಿರುವುದಾಗಿ ಹೇಳಿದ್ದಾರೆ.
"ನಾಯಿ
ಮರಿ
ಕೊಟ್ಟು
ಹರಿಪ್ರಿಯಾರನ್ನು
ಪಟಾಯಿಸಿಕೊಂಡಿಲ್ಲ..
ತುಂಬಾ
ಕಷ್ಟಪಟ್ಟಿದ್ದೀನಿ"
-ವಸಿಷ್ಠ
ಸಿಂಹ
'ವೂಲ್ಫ್ ' ಸಿನಿಮಾಗೆ ಈ ಹಿಂದೆ ಎಸ್.ಜೆ ಸೂರ್ಯ ಅವರ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಾಗೂ ನಟಿ ರೈ ಲಕ್ಷ್ಮೀ ಅಭಿನಯದ 'ಸಿಂಡರೆಲ್ಲಾ' ಸಿನಿಮಾವನ್ನು ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ವಿನೂ ವೆಂಕಟೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ.

ಪ್ರಭುದೇವ ಜೊತೆ ವಸಿಷ್ಠ ಸಿಂಹ
ಸಂದೇಶ್ ಎನ್ ನಿರ್ಮಿಸಿರುವ ಈ ಚಿತ್ರವೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. 'ವೂಲ್ಫ್ ' ಸಿನಿಮಾದಲ್ಲಿ ವಸಿಷ್ಠ ಸಿಂಹ ಸೇರಿದಂತೆ ಅಂಜು ಕುರಿಯನ್, ಅನುಸೂಯ ಭಾರದ್ವಾಜ್, ರೈ ಲಕ್ಷ್ಮೀ, ಶ್ರೀಗೋಪಿಕಾ ಮತ್ತು ರಮೇಶ್ ತಿಲಕ್ ಬ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 'ವೂಲ್ಫ್ ' ಚಿತ್ರವನ್ನು ಪುದುಚೇರಿ, ಚನ್ನೈ, ಬೆಂಗಳೂರು, ಅಂಡಮಾನ್ ಮತ್ತು ನಿಕೋಬಾರ್ ನ ವಿಶಿಷ್ಟ ಸ್ಥಳಗಳಲ್ಲಿ 25 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಮಾರ್ಚ್‌ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

'Love ಲೀ' ಸಿನಿಮಾ ಏನಾಯ್ತು?
ವಸಿಷ್ಠ ಸಿಂಹ ನಟನೆಯ 'Love ಲೀ' ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿನಿರಸಿಕರ ಗಮನ ಸೆಳೆಯುತ್ತಿದ್ದು, ಸದ್ಯ ಚಿತ್ರೀಕರಣ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾಗಾಗಿ ಉಡುಪಿಯ ಪಡುಕರೆಯ ಕಡಲ ತೀರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಮನೆಯ ಸೆಟ್ ನಿರ್ಮಿಸಲಾಗಿತ್ತು. ಇದೀಗ ಶೇಕಡಾ 80ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಲಂಡನ್ ನಲ್ಲಿ ಶೂಟಿಂಗ್ ಮಾಡಲು ತಯಾರಿ ನಡೆಸಿದೆ. ಚೇತನ್ ಕೇಶವ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.

ಸೀಕ್ರೆಟ್ ಆಗಿತ್ತು ಈ ಜೋಡಿ
ಸ್ಯಾಂಡಲ್‌ವುಡ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ, ಈ ವಿಷಯವನ್ನು ಮಾಧ್ಯಮ ಹಾಗೂ ಸ್ಯಾಂಡಲ್‌ವುಡ್‌ನ ಸಹೋದ್ಯೋಗಿಗಳಿಂದ ರಹಸ್ಯವಾಗಿಯೇ ಇಟ್ಟಿದ್ದರು. ಇನ್ನೇನು ಒಂಟಿಯಾಗಿದ್ದು ಸಾಕು ಜಂಟಿಯಾಗಿರೋಣ ಅಂತ ನಿರ್ಧರಿಸಿದಾಗ, ತಮ್ಮ ಲವ್ ಸ್ಟೋರಿಯನ್ನು ಈ ಜೋಡಿ ರಿವೀಲ್ ಮಾಡಿದೆ. ಕೆಲವು ದಿನ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡದ್ದ ಜೋಡಿ ಹಕ್ಕಿಗಳು ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇದೇ ದಿನ ವೈವಾಹಿಕ ಜೀವನಕ್ಕೆ ಎಂಟ್ರಿ
ಜನವರಿ 26ರಂದು ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ವಿವಾಹವಾಗಲಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಪ್ತರು ಹಾಗೂ ಕುಟುಂಬದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಇನ್ನು ಈ ಜೋಡಿ ಜನವರಿ 28ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಟುಕೊಂಡಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಾರೆಯರಿಗೆ ಆರತಕ್ಷತೆಗೆ ಆಹ್ವಾನವನ್ನು ನೀಡಲಾಗಿದೆ.