For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ಆನಂದ್ ರಾಜ್ ಸೋದರನ ಆತ್ಮಹತ್ಯೆ ಕೇಸಿಗೆ ತಿರುವು ಕೊಟ್ಟ ಪತ್ರ

  By ಜೇಮ್ಸ್ ಮಾರ್ಟಿನ್
  |

  ಸ್ಟಾರ್ ನಟ ವಿಜಯ್ ಅವರ ಇತ್ತೀಚಿನ ಸಿನಿಮಾ ಬಿಗಿಲ್(ವಿಶಿಲ್ ಎಂದು ಓದಿಕೊಳ್ಳಿ) ನಲ್ಲಿ ನಟಿಸಿದ್ದ ಹಿರಿಯ ನಟ ಆನಂದ್ ರಾಜ್ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ವಿಲನ್. ಕನ್ನಡದಲ್ಲೂ ಕೆಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಆನಂದ್ ರಾಜ್ ಅವರ ಸೋದರ ಕನಗಸಭೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷ ವಯಸ್ಸಿನ ಕನಗಸಭೈ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

  ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

  ಕನಗಸಭೈ ಅವರಿಗೆ ಮದುವೆಯಾಗಿರಲಿಲ್ಲ. ಚೆನ್ನೈ ಬಿಟ್ಟು ಪಾಂಡಿಚೇರಿಯಲ್ಲಿ ವಾಸಿಸುತ್ತಿದ್ದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಕನಗಸಭೈಗೆ ವಿವಿಧ ರಾಜಕೀಯ ಪಕ್ಷಗಳ ನಂಟಿತ್ತು. ಕೆಲ ಪಕ್ಷಗಳಿಗೆ ಫಂಡ್ ನೀಡುತ್ತಿದ್ದರು. ಆದರೆ ಇತ್ತೀಚೆಗೆ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರು.

  ಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತುಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತು

  ಸುಮಾರು 50 ಕೋಟಿ ರು ಸಾಲದ ಹೊರೆ ಹೊತ್ತುಕೊಂಡಿದ್ದರು. ಸಾಲದ ಬಾಧೆ, ಮಾನಸಿಕವಾಗಿ ಅವರನ್ನು ಕುಗ್ಗಿಸಿತ್ತು. ಕನಗಸಭೈ ಶವವಿದ್ದ ರೂಮಿನಲ್ಲಿ ಪತ್ರವೊಂದು ಸಿಕ್ಕಿದ್ದು, ಕನಗಸಭೈ ಬರೆದ ಸೂಸೈಡ್ ನೋಟ್ ಎಂದು ಪೊಲೀಸರು ಪರಿಗಣಿಸಿದ್ದಾರೆ. ಈ ಪತ್ರದಲ್ಲಿ ಮೇಲ್ನೋಟಕ್ಕೆ ಮಾನಸಿಕ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿದ್ದಾಗಿ ತಿಳಿದು ಬರುತ್ತದೆ. ಆದರೆ, ಪತ್ರದಲ್ಲಿ ಬರೆದಿರುವ ಒಬ್ಬರ ಹೆಸರು ಬೇರೆಯದ್ದೇ ತಿರುವು ನೀಡುತ್ತಿದೆ.

  ಜನಪ್ರಿಯ ವಿಲನ್ ಎನಿಸಿಕೊಂಡಿರುವ ಆನಂದ್ ರಾಜ್

  ಜನಪ್ರಿಯ ವಿಲನ್ ಎನಿಸಿಕೊಂಡಿರುವ ಆನಂದ್ ರಾಜ್

  ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯ ವಿಲನ್ ಎನಿಸಿಕೊಂಡಿರುವ ಆನಂದ್ ರಾಜ್ ಅವರ ಕಿರಿಯ ಸೋದರ ಕನಗಸಭೈ. 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ಆನಂದ್ ರಾಜ್ ಮೂಲಕ ಚಿತ್ರರಂಗದ ಜೊತೆ ಕನಗಸಭೈಗೂ ನಂಟು ಬೆಳೆದಿತ್ತು. ಆದರೆ, ಚೆನ್ನೈನಲ್ಲಿ ನೆಲೆಸದೆ ಪಾಂಡಿಚೇರಿಯಲ್ಲಿದ್ದುಕೊಂಡು ಚಿತ್ರರಂಗ ಹಾಗೂ ರಾಜಕೀಯ ಪಕ್ಷಗಳ ಜೊತೆ ವ್ಯವಹರಿಸುತ್ತಿದ್ದರು.

  ಸಹೋದರನ ಆತ್ಮಹತ್ಯೆಯಿಂದ ಆನಂದ್ ಕಂಗಾಲು

  ಸಹೋದರನ ಆತ್ಮಹತ್ಯೆಯಿಂದ ಆನಂದ್ ಕಂಗಾಲು

  ಆನಂದ್ ರಾಜ್ ಸಹೋದರನ ಆತ್ಮಹತ್ಯೆಯಿಂದ ತಮಿಳು ಚಿತ್ರರಂಗದಲ್ಲೂ ಒಂದು ಮಟ್ಟದ ಸಂಚಲನ ಮೂಡಿದೆ. ಕನಗಸಭೈ ಯಾರ ಯಾರ ಜೊತೆ ಹಣಕಾಸು ವ್ಯವಹಾರ ನಡೆಸಿದ್ದರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. 55 ವರ್ಷ ವಯಸ್ಸಿನ ಕನಕಸಭೈ ಸಾವು ಅವರ ಕುಟುಂಬಕ್ಕೆ ತೀವ್ರ ನೋವು ತಂದಿದ್ದರೆ, ಚಿತ್ರರಂಗಕ್ಕೆ ಹಣಕಾಸಿನ ವ್ಯವಹಾರ, ಸಾಲಸೋಲದ ಸಮಸ್ಯೆ ಯಾವ ತಿರುವು ನೀಡಲಿದೆ ಕಾದು ನೋಡಬೇಕಿದೆ.

  ಚಿಟ್ ಫಂಡ್ ವ್ಯವಹಾರದಲ್ಲಿ ನಷ್ಟ

  ಚಿಟ್ ಫಂಡ್ ವ್ಯವಹಾರದಲ್ಲಿ ನಷ್ಟ

  ತಮಿಳುನಾಡಿನಲ್ಲಿ ಕನಗಸಭೈ ಚಿಟ್ ಫಂಡ್ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಮಧ್ಯೆ, ಅವರು ಇತ್ತೀಚೆಗೆ ಈ ಚಿಟ್ ಫಂಡ್‌ ವ್ಯವಹಾರ ಕೈಕೊಟ್ಟು, ಕೋಟ್ಯಂತರ ರುಪಾಯಿ ಸಾಲ ಮಾಡಿಕೊಂಡಿದ್ದರು. ಹೊಸದಾಗಿ ಐಷಾರಾಮಿ ಬಂಗಲೆಯೊಂದನ್ನು ಖರೀದಿಸಿದ್ದರು. ಇದಕ್ಕಾಗಿ ಮಾಡಿಕೊಂಡಿದ್ದ ಸಾಲ ತೀರಿಸಲು ಆಗದೆ ನೊಂದಿದ್ದರು. ಸಾಲ ಕೊಟ್ಟವರು ಪೀಡಿಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆಪ್ತರು ಆರೋಪಿಸಿದ್ದಾರೆ.

  ಪೊಲೀಸ್ ತನಿಖೆಯಿಂದ ಹೊಸ ವಿಷಯ ಬಹಿರಂಗ

  ಪೊಲೀಸ್ ತನಿಖೆಯಿಂದ ಹೊಸ ವಿಷಯ ಬಹಿರಂಗ

  ಪೊಲೀಸ್ ತನಿಖೆಯ ಸಂದರ್ಭದಲ್ಲಿಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕನಗಸಭೈ ಆತ್ಮಹತ್ಯೆ ಪತ್ರವನ್ನು ಪರಿಶೀಲಿಸಿದ ಪೊಲೀಸರು, ಆನಂದ್ ರಾಜ್ ಅವರ ಮತ್ತೊಬ್ಬ ಸೋದರ ಭಾಸ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ರದ ಪ್ರಕಾರ, ಅವರ ಸಾವಿಗೆ ಅನ್ನಯ್ಯ ಭಾಸ್ಕರ್ ಮತ್ತು ಅವರ ಮಗ ಶಿವಚಂದ್ರನ್ ಕಾರಣ ಎಂದು ತಿಳಿದು ಬಂದಿದೆ. ಸದ್ಯ ವಿಚಾರಣೆ ಜಾರಿಯಲ್ಲಿದ್ದು, ಪ್ರಕರಣ ಇನ್ನಷ್ಟು ತಿರುವು ಪಡೆಯುವ ಸಾಧ್ಯತೆಯಿದೆ.

  English summary
  Veteran actor Anandraj's younger brother Kanagasabai(55) has committed suicide at his house in Pondicherry. Kanagasabai's suicide note has given twist to the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X