14 ವರ್ಷಗಳ ಬಳಿಕ ಒಂದಾಗಲಿರುವ ವಿಜಯ್-ತ್ರಿಶಾ: ಆಗಲೇ ಕೇಳಿ ಬಂದಿತ್ತು ಗುಸು-ಗುಸು

By ಫಿಲ್ಮಿಬೀಟ್ ಡೆಸ್ಕ್

ಸಾಮಾನ್ಯವಾಗಿ ಬೆಳ್ಳಿ ತೆರೆಯ ಮೇಲೆ ಹಿಟ್ ಆದ ಜೋಡಿಗಳು ಪದೇ-ಪದೇ ರಿಪೀಟ್ ಆಗುತ್ತಿರುತ್ತವೆ. ಹಿಟ್ ಆದರೂ ಆ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡದೇ ಇರುವುದು ಬಲು ಅಪರೂಪ.

ಈಗ ಜೋಡಿಗಳನ್ನು ರಿಪೀಟ್ ಮಾಡುವ ಪದ್ಧತಿ ಕಡಿಮೆಯಾದರೂ ದಶಕದ ಹಿಂದೆ ಈ ಆಚರಣೆ ಚಿತ್ರರಂಗದಲ್ಲಿ ತುಸು ಹೆಚ್ಚಿಗೆ ಇತ್ತು. ಹಲವು ಭಾಷೆಗಳಲ್ಲಿ ಹಲವು ಹಿಟ್ ಜೋಡಿಗಳಿದ್ದವು. ಅದರಲ್ಲಿ ಒಂದು ವಿಜಯ್ ಹಾಗೂ ತ್ರಿಷಾ ಜೋಡಿ.

ಈ ಜೋಡಿ ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ತಮಿಳಿನಲ್ಲಿ ನೀಡಿದ್ದರು. ಆದರೆ ಒಂದು ದಶಕಕ್ಕೂ ಹೆಚ್ಚು ಕಾಲವಾದರೂ ಮತ್ತೆ ಒಟ್ಟಿಗೆ ನಟಿಸಿರಲಿಲ್ಲ. ಇದೀಗ ಹದಿನಾಲ್ಕು ವರ್ಷದ ಬಳಿಕ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ!

ವಿಜಯ್‌ರ 67 ನೇ ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದು, ಇದೀಗ ಹದಿನಾಲ್ಕು ವರ್ಷಗಳ ಬಳಿಕ ತ್ರಿಷಾ ಹಾಗೂ ವಿಜಯ್ ಒಟ್ಟಿಗೆ ನಟಿಸಲಿದ್ದಾರೆ. ಇದು ವಿಜಯ್ ಹಾಗೂ ತ್ರಿಷಾ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ

ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ

ವಿಜಯ್ ಹಾಗೂ ತ್ರಿಷಾ ನಾಲ್ಕು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 'ತಿರುಪಾಚ್ಚಿ', 'ಆತಿ', 'ಗಿಲ್ಲಿ' ಹಾಗೂ 'ಕುರುವಿ' ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾಗಳಲ್ಲಿ 'ತಿರುಪಾಚ್ಚಿ', 'ಗಿಲ್ಲಿ' ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ರಾಜಮೌಳಿ ನಿರ್ದೇಶನದ 'ಛತ್ರಪತಿ' ಸಿನಿಮಾದ ರೀಮೇಕ್ ಆಗಿದ್ದ 'ಕುರುವಿ' 2008 ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಅದಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿರಲಿಲ್ಲ. ಇದೀಗ ಹದಿನಾಲ್ಕು ವರ್ಷದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ.

ತ್ರಿಷಾ-ವಿಜಯ್ ಸಂಬಂಧದ ಬಗ್ಗೆ ಗಾಳಿ ಸುದ್ದಿ

ತ್ರಿಷಾ-ವಿಜಯ್ ಸಂಬಂಧದ ಬಗ್ಗೆ ಗಾಳಿ ಸುದ್ದಿ

2008 ರ ಸಮಯದಲ್ಲಿ ತ್ರಿಷಾ ಹಾಗೂ ವಿಜಯ್ ಅವರ ಸಂಬಂಧದ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಿದ್ದವು. ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಪೂರಕವಾಗಿ ಇಬ್ಬರೂ ಒಟ್ಟಿಗೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದ್ಯಾವುವೂ ನಿಜವಾಗಲಿಲ್ಲ. ಆ ಗಾಳಿಸುದ್ದಿಗಳ ಪರಿಣಾಮವೋ ಏನೋ ಇಬ್ಬರೂ ಒಟ್ಟಿಗೆ ನಟಿಸುವುದನ್ನೇ ಬಿಟ್ಟುಬಿಟ್ಟರು.

20 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ತ್ರಿಷಾ

20 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ತ್ರಿಷಾ

ತ್ರಿಷಾ ನಾಯಕಿಯಾಗಿ ಪದಾರ್ಪಣೆ ಮಾಡಿ 20 ವರ್ಷಗಳಾಗಿವೆ. ಈಗಲೂ ಸಾಕಷ್ಟು ಸಿನಿಮಾಗಳು ಅವರ ಕೈಯಲ್ಲಿವೆ. ಇತ್ತೀಚೆಗಷ್ಟೆ ತ್ರಿಷಾ ನಟಿಸಿದ್ದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಇದರ ಜೊತೆಗೆ 'ಸತ್ತುರಂಗ ವೇಟ್ಟೈ', ಮಲಯಾಳಂನ 'ರಾಮ್', ತಮಿಳಿನ 'ದಿ ರೋಡ್' ಹಾಗೂ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾಗಳಲ್ಲಿ ತ್ರಿಷಾ ನಟಿಸುತ್ತಿದ್ದಾರೆ.

ವಿಜಯ್‌ ಮುಂದಿನ ಸಿನಿಮಾಗಳು

ವಿಜಯ್‌ ಮುಂದಿನ ಸಿನಿಮಾಗಳು

ಇನ್ನು ನಟ ವಿಜಯ್‌ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರಲ್ಲೊಬ್ಬರು. ವಿಜಯ್ ನಟನೆಯ 'ವಾರಿಸು' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ, ನಿರ್ಮಾಪಕ ದಿಲ್ ರಾಜು. ವಂಶಿ ಪೈಡಪಲ್ಲಿ ನಿರ್ದೇಶಕ. ಅದಾದ ಬಳಿಕ ಲೋಕೇಶ್ ಕನಕರಾಜ್ ಜೊತೆಗಿನ ಸಿನಿಮಾ ಆರಂಭವಾಗಲಿದೆ. ಈ ಸಿನಿಮಾವು ಹಾಲಿವುಡ್ ಸಿನಿಮಾ ಒಂದರಿಂದ ಸ್ಪೂರ್ತಿ ಪಡೆದ ಸಿನಿಮಾ ಎನ್ನಲಾಗುತ್ತಿದೆ. ಅದಾದ ಬಳಿಕ ಬಾಲ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Super star Vijay and Trisha acting in one movie after 14 years. Both were acted in four movies till now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X