For Quick Alerts
  ALLOW NOTIFICATIONS  
  For Daily Alerts

  ಐಶಾರಾಮಿ ಕಾರು ವಿವಾದ: ಹೈಕೋರ್ಟ್ ಆದೇಶದಿಂದ ವಿಜಯ್‌ ನಿರಾಳ

  |

  ದುಬಾರಿ ಸಂಭಾವನೆ ಪಡೆವ ತಮಿಳಿನ ಸ್ಟಾರ್ ನಟ ವಿಜಯ್ ದುಬಾರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

  ಐಶಾರಾಮಿ ಮನೆ, ಐಶಾರಾಮಿ ಕಾರು, ಕೋಟ್ಯಂತರ ಮೌಲ್ಯದ ಆಸ್ತಿ, ಬೀಚ್ ಹೌಸ್ ಎಲ್ಲವೂ ವಿಜಯ್ ಬಳಿ ಇದೆ. ಅದರಲ್ಲೂ ವಿಜಯ್‌ಗೆ ಕಾರುಗಳ ಹುಚ್ಚು ತುಸು ಹೆಚ್ಚೇ ಇದೆ. ಆದರೆ ಇದೇ ಕಾರಿನ ಕ್ರೇಜ್‌ ವಿಜಯ್‌ರನ್ನು ಸಮಸ್ಯೆಗೆ ನೂಕಿತ್ತು.

  2005ರಲ್ಲಿ ನಟ ವಿಜಯ್ ಬಿಎಂಡಬ್ಲು ಎಕ್ಸ್‌5 ಕಾರನ್ನು ಅಮೆರಿಕದಲ್ಲಿ ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಂಡಿದ್ದರು. ವಿದೇಶದಿಂದ ಐಶಾರಾಮಿ ಕಾರು ಖರೀದಿಸಿದ ಕಾರಣ ಆಮದು ತೆರಿಗೆಯನ್ನು ವಿಜಯ್‌ ಪಾವತಿಸಬೇಕಿತ್ತು. ಆದರೆ ವಿಜಯ್‌, ಎಂಟ್ರಿ ಟ್ಯಾಕ್ಸ್‌(ತೆರಿಗೆ) ವಿನಾಯಿತಿ ನೀಡಬೇಕು ಎಂದು ಅರ್ಜಿ ಹಾಕಿದ್ದರು. ಅದು ವಿವಾದಕ್ಕೆ ಕಾರಣವಾಗಿದ್ದಲ್ಲದೆ, ನ್ಯಾಯಾಲವು ವಿಜಯ್‌ಗೆ ಛೀಮಾರಿ ಸಹ ಹಾಕಿತ್ತು. ಆದರೆ ಈಗ ಆ ಪ್ರಕರಣದಲ್ಲಿ ವಿಜಯ್‌ಗೆ ರಿಲೀಫ್ ದೊರೆತಿದೆ.

  ದಂಡ ಸಹಿತ 46.19 ಲಕ್ಷ ಪಾವತಿಸುವಂತೆ ನೊಟೀಸ್!

  ದಂಡ ಸಹಿತ 46.19 ಲಕ್ಷ ಪಾವತಿಸುವಂತೆ ನೊಟೀಸ್!

  2005 ರಲ್ಲಿ ಕಾರು ಖರೀದಿಸಿ, ತೆರಿಗೆ ಮನ್ನಾಕ್ಕೆ ವಿಜಯ್‌ ಅರ್ಜಿ ಹಾಕಿದ್ದರಾದರೂ ಅರ್ಜಿಯ ಇತ್ಯರ್ಥ ಆಗಿರಲಿಲ್ಲ. ಆ ಬಳಿಕ ಕಾರನ್ನು ವಿಜಯ್ ಮಾರಿಬಿಟ್ಟಿದ್ದರು. ಆದರೆ 2021 ರಲ್ಲಿ ವಿಜಯ್‌ರ ಮತ್ತೊಂದು ಐಶಾರಾಮಿ ಕಾರಿನ ತೆರಿಗೆ ವಿನಾಯಿತಿ ಅರ್ಜಿ ಪ್ರಕರಣ ಸುದ್ದಿಗೆ ಬಂದಾಗ ತೆರಿಗೆ ಇಲಾಖೆಯು 2005 ರಲ್ಲಿ ಆಮದು ಮಾಡಿಕೊಂಡಿದ್ದ ಬಿಎಂಡಬ್ಲು ಎಕ್ಸ್‌5 ಕಾರಿನ ಆಮದು ತೆರಿಗೆ 7.98 ಲಕ್ಷ ಹಾಗೂ ತಡವಾಗಿ ತೆರಿಗೆ ಪಾವತಿ ಮಾಡುತ್ತಿರುವುದಕ್ಕೆ ದಂಡವಾಗಿ 38.21 ಲಕ್ಷ ಕಟ್ಟುವಂತೆ ನೊಟೀಸ್ ನೀಡಿದ್ದರು.

  ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ದ ವಿಜಯ್

  ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ದ ವಿಜಯ್

  ತೆರಿಗೆ ಇಲಾಖೆಯ ನೊಟೀಸ್‌ ವಿರುದ್ಧ ಅರ್ಜಿ ಹಾಕಿಕೊಂಡಿದ್ದ ವಿಜಯ್, ತಾವು ಆಗ ರಾಜ್ಯ ಸರ್ಕಾರಕ್ಕೆ ತೆರಿಗೆ ವಿನಾಯಿತಿಗೆ ಮನವಿ ಸಲ್ಲಿಸಿದ್ದಾಗಿಯೂ ಆಗಿನ ಸಮಯದಲ್ಲಿ ಸೂಕ್ತ ಡೀಲರ್ ಇಲ್ಲದ ಕಾರಣ ಅವಶ್ಯಕ ವಸ್ತು ಆಮದು ನಿಯಮದ ಅಡಿ ಕಾರನ್ನು ಆಮದು ಮಾಡಿಕೊಂಡಿದ್ದಾಗಿಯೂ ಹೇಳಿದ್ದರು. ಅಲ್ಲದೆ ಆಗಿನ ಸಮಯದಲ್ಲಿ ಆಮದು ತೆರಿಗೆ ವಿನಾಯಿತಿ ಬಗ್ಗೆ ಸ್ಪಷ್ಟ ಕಾನೂನುಗಳು ಸಹ ಇರಲಿಲ್ಲವಾದ್ದರಿಂದ ಆಗ ತೆರಿಗೆ ಪಾವತಿ ಮಾಡಲಿಲ್ಲ ಎಂದಿದ್ದರು.

  ಕಾರು ಮಾರಾಟ ಮಾಡಿರುವ ನಟ ವಿಜಯ್

  ಕಾರು ಮಾರಾಟ ಮಾಡಿರುವ ನಟ ವಿಜಯ್

  2005 ರಲ್ಲಿ ಬಿಎಂಡಬ್ಲು ಎಕ್ಸ್‌5 ಖರೀದಿಸಿದ್ದ ವಿಜಯ್ ನಾಲ್ಕು ವರ್ಷ ಅದನ್ನು ಬಳಸಿ ಬಳಿಕ ದೀಪಕ್ ಮುರಳಿ ಎಂಬುವರಿಗೆ 2009 ರಲ್ಲಿ ಮಾರಾಟ ಮಾಡಿದ್ದರು. 2005 ರಲ್ಲಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು 2019 ರ ಜೂನ್ 28 ರಂದು ಎಂ ದಂಡಪಾಣಿ ರದ್ದು ಮಾಡಿದ್ದರು. ಆದರೆ ಅದಾದ ಬಳಿಕ ತೆರಿಗೆ ಇಲಾಖೆಯು ವಿಜಯ್‌ ದಂಡ ಸಹಿತ 46.24 ಲಕ್ಷ ಹಣ ಪಾವತಿಸಬೇಕು ಎಂದು ನೊಟೀಸ್ ನೀಡಿತ್ತು.

  Recommended Video

  Niveditha Gowda ಹೊಸ ಸಾಧನೆಗೆ ಅಭಿಮಾನಿಗಳೆಲ್ಲಾ ಖುಷ್ *Sandalwood | Filmibeat Kannada
  2019 ರಿಂದ ಅಷ್ಟೆ ತೆರಿಗೆ ಹಾಗೂ ದಂಡ ಪಾವತಿ

  2019 ರಿಂದ ಅಷ್ಟೆ ತೆರಿಗೆ ಹಾಗೂ ದಂಡ ಪಾವತಿ

  ಆದರೆ ಈ ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ವಿಜಯ್ ಸಲ್ಲಿಸಿದ್ದ ಅರ್ಜಿಯ ರದ್ದಾದ ದಿನದಿಂದ ಈಗಿನ ವರೆಗೆ ಮಾತ್ರವೇ ದಂಡ ಪಾವತಿ ಮಾಡಬೇಕೆಂದು ಆದೇಶ ನೀಡಿದೆ. ಹಾಗಾಗಿ ತೆರಿಗೆ ಹಣ 7.96 ಲಕ್ಷ ಹಾಗೂ ಅದಕ್ಕೆ ಆಗುವ ಮೂರು ವರ್ಷದ ದಂಡವನ್ನಷ್ಟೆ ಲೆಕ್ಕಾಚಾರ ಮಾಡಿ ವಿಜಯ್ ಪಾವತಿಸಬೇಕಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವಿಜಯ್‌ರ ರೋಲ್ಸ್‌ ರಾಯ್ಸ್ ಘೋಸ್ಟ್ ಕಾರಿನ ಕುರಿತಾಗಿಯೂ ಇದೇ ರೀತಿ ವಿವಾದವಾಗಿತ್ತು. ಕೊನೆಗೆ ವಿಜಯ್‌ ಕಾರಿನ ಪೂರ್ಣ ಆಮದು ತೆರಿಗೆ ಮಾಡಿದ್ದರು.

  English summary
  Actor Vijay gets relief from Madras high court in car entry tax case. He imported a BMW x5 car from US in 2005. But he did not paid entry tax for that.
  Saturday, July 16, 2022, 22:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X