For Quick Alerts
  ALLOW NOTIFICATIONS  
  For Daily Alerts

  'ಬೀಸ್ಟ್' ಸಿನಿಮಾದ ನಿರ್ದೇಶಕನ ವಿರುದ್ಧ ಹರಿಹಾಯ್ದ ವಿಜಯ್ ತಂದೆ

  |

  ಭಾರಿ ಮಹಾತ್ವಾಕಾಂಕ್ಷೆಯೊಂದಿಗೆ ತೆರೆ ಕಂಡಿದ್ದ ತಮಿಳಿನ ಸ್ಟಾರ್ ನಟ ವಿಜಯ್‌ ನಟನೆಯ 'ಬೀಸ್ಟ್' ಸಿನಿಮಾ ನೆಲಕಚ್ಚಿದೆ. ಸಿನಿಮಾದ ಬಗ್ಗೆ ಸ್ವತಃ ವಿಜಯ್ ಅಭಿಮಾನಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ವಿಜಯ್‌ರ ತಂದೆ ಸಹ 'ಬೀಸ್ಟ್' ಸಿನಿಮಾದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  ಅದಮ್ಯ ವಿಶ್ವಾಸದೊಂದಿಗೆ 'ಬೀಸ್ಟ್' ಸಿನಿಮಾವು 'ಕೇಜಿಎಫ್ 2' ಸಿನಿಮಾದ ಎದುರಾಳಿಯಾಗಿ ಬಿಡುಗಡೆ ಆಗಿತ್ತು. ಏಪ್ರಿಲ್ 14 ರಂದು 'ಕೆಜಿಎಫ್ 2' ಬಿಡುಗಡೆ ಆದರೆ, ಏಪ್ರಿಲ್ 13 ರಂದೇ 'ಬೀಸ್ಟ್' ಸಿನಿಮಾ ಬಿಡುಗಡೆ ಆಗಿತ್ತು. ಆದರೆ 'ಕೆಜಿಎಫ್ 2' ಹವಾ ಮುಂದೆ 'ಬೀಸ್ಟ್' ಕೊಚ್ಚಿಕೊಂಡು ಹೋಯಿತು, ಜೊತೆಗೆ ಸಿನಿಮಾದ ಕತೆ ಸಹ ಆಕರ್ಷಣೀಯವಾಗಿಲ್ಲದಿರುವುದು 'ಬೀಸ್ಟ್' ನೆಲಕಚ್ಚಲು ಮತ್ತೊಂದು ಪ್ರಮುಖ ಅಂಶ.

  KGF 2 vs Beast box office collection: 'ಬೀಸ್ಟ್' ಹಾಗೂ 'ಕೆಜಿಎಫ್ 2' ಕಲೆಕ್ಷನ್ ನಡುವಿನ ಅಂತರವೆಷ್ಟು?KGF 2 vs Beast box office collection: 'ಬೀಸ್ಟ್' ಹಾಗೂ 'ಕೆಜಿಎಫ್ 2' ಕಲೆಕ್ಷನ್ ನಡುವಿನ ಅಂತರವೆಷ್ಟು?

  ಇದೀಗ ಸಿನಿಮಾ ಬಗ್ಗೆ ವಿಜಯ್‌ರ ತಂದೆ ಎಸ್ಎ ಚಂದ್ರಶೇಖರ್ ತೀವ್ರ ಅಸಮಾಧಾನಗೊಂಡಿದ್ದು, ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  Recommended Video

  KGF 2 Making Video | Ramika Sen | ಶೂಟಿಂಗ್ ಸೆಟ್ ನಲ್ಲಿ ರಮಿಕಾ ಸೇನ್ | Raveena Tandon | Prashanth Neel

  ಸಂದರ್ಶನವೊಂದರಲ್ಲಿ ಮಾತನಾಡಿರುವ ಎಸ್ಎ ಚಂದ್ರಶೇಖರ್, ''ಅಂತರಾಷ್ಟ್ರೀಯ ಭಯೋತ್ಪಾದಕೆಯ ವಿಷಯದ ಬಗ್ಗೆ ಸಿನಿಮಾ ಮಾಡಬೇಕಾದರೆ ದೊಡ್ಡ ಮಟ್ಟದಲ್ಲಿ ಕತೆ ಹೇಳಬೇಕಾಗುತ್ತದೆ. ಅದನ್ನು ಬಿಟ್ಟು ಒಂದು ಮಾಲ್‌ನಲ್ಲಿ ಹಿರೋ ಅನ್ನಿಟ್ಟು ಅಂತರಾಷ್ಟ್ರೀಯ ಮಟ್ಟದ ವಿಷಯದ ಕತೆ ಹೇಳಲಸಾಧ್ಯ'' ಎಂದು ನಿರ್ದೇಶಕ ಕತೆಯನ್ನು ಹ್ಯಾಂಡಲ್ ಮಾಡಿರುವ ರೀತಿಯನ್ನು ಟೀಕಿಸಿದ್ದಾರೆ.

  Thalapathy Vijay: ದಳಪತಿ ವಿಜಯ್ 10 ವರ್ಷ ಸಂದರ್ಶನ ಕೊಡದೆ ಇರಲು ಕಾರಣ ಇದೇ!Thalapathy Vijay: ದಳಪತಿ ವಿಜಯ್ 10 ವರ್ಷ ಸಂದರ್ಶನ ಕೊಡದೆ ಇರಲು ಕಾರಣ ಇದೇ!

  ''ವಿಜಯ್‌ರ ಸ್ಟಾರ್‌ಡಮ್‌ ಅನ್ನೇ ನೆಚ್ಚಿಕೊಂಡು ಚಿತ್ರಕತೆಯ ಮೇಲೆ ಗಮನ ಹರಿಸದಿದ್ದರೆ ಹೀಗೆಯೇ ಆಗುತ್ತದೆ. ವಿಜಯ್ ಸ್ಟಾರ್‌ಡಮ್ ಜೊತೆಗೆ ಸಿನಿಮಾದಲ್ಲಿ ಚಿತ್ರಕತೆಯೂ ಇರಬೇಕಾಗುತ್ತದೆ. ಆದರೆ ನಿರ್ದೇಶಕ ಅದನ್ನು ಮರೆತು ಸಿನಿಮಾ ಮಾಡಿದ್ದಾನೆ'' ಎಂದು ನೇರವಾಗಿ ನಿರ್ದೇಶಕನ್ನು ಟೀಕಿಸಿದ್ದಾರೆ ಚಂದ್ರಶೇಖರ್.

  ನಿರ್ದೇಶಕ ನೆಲ್ಸನ್, ಈ ಸಿನಿಮಾ ಮಾಡುವ ಮುನ್ನ ಹೆಚ್ಚು ಹೋಮ್‌ವರ್ಕ್ ಮಾಡಿಲ್ಲ ಎಂದಿರುವ ಚಂದ್ರಶೇಖರ್, ಈಗಿನ ಯುವ ನಿರ್ದೇಶಕರು ಮೊದಲೆರಡು ಸಿನಿಮಾಕ್ಕೆ ಬಹಳ ಕಷ್ಟಪಡುತ್ತಾರೆ. ಆದರೆ ಯಾವಾಗ ಅವರಿಗೆ ಸ್ಟಾರ್ ನಟನ ಸಿನಿಮಾ ಸಿಗುತ್ತದೆಯೋ ಆಗ ಎಲ್ಲವನ್ನೂ ಸ್ಟಾರ್‌ಡಮ್‌ ಮೇಲೆ ಹಾಕಿ ತಾವು ಆರಾಮವಾಗಿಬಿಡುತ್ತಾರೆ'' ಎಂದಿದ್ದಾರೆ ಚಂದ್ರಶೇಖರ್. ಅವರಂದಂತೆಯೇ ನೆಲ್ಸನ್‌ರ ಮೊದಲೆರಡು ಸಿನಿಮಾ ಹಿಟ್ ಆಯಿತು. ಮೊದಲ ಬಾರಿಗೆ ಸ್ಟಾರ್ ನಟನೊಟ್ಟಿಗೆ ಸಿನಿಮಾ ಮಾಡಿದ ಸಿನಿಮಾ ಫ್ಲಾಪ್ ಆಗಿದೆ.

  KGF 2 v/s Beast: 'ಕೆಜಿಎಫ್ 2' ಹೊಡೆತಕ್ಕೆ ದಿಕ್ಕಾಪಾಲಾದ 'ಬೀಸ್ಟ್': ಕಲೆಕ್ಷನ್‌ನಲ್ಲಿ ಭಾರಿ ಇಳಿಕೆKGF 2 v/s Beast: 'ಕೆಜಿಎಫ್ 2' ಹೊಡೆತಕ್ಕೆ ದಿಕ್ಕಾಪಾಲಾದ 'ಬೀಸ್ಟ್': ಕಲೆಕ್ಷನ್‌ನಲ್ಲಿ ಭಾರಿ ಇಳಿಕೆ

  ಅಸಲಿಗೆ ವಿಜಯ್ ಹಾಗೂ ತಂದೆ ಎಸ್ ಚಂದ್ರಶೇಖರ್ ನಡುವಿನ ಸಂಬಂಧ ಅಷ್ಟೇನೂ ಸರಿ ಇಲ್ಲ. ಚಂದ್ರಶೇಖರ್ ಸಹ ಮಗನ ಸ್ಟಾರ್‌ಡಮ್ ಅನ್ನು ಅಭಿಮಾನಿಗಳ ಪ್ರೀತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಪುತ್ರ ವಿಜಯ್ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ವಿಜಯ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, 'ನನ್ನ ತಂದೆ ಮಾಡಿರುವ ರಾಜಕೀಯ ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ'' ಎಂದು ನೇರವಾಗಿ ಹೇಳಿದ್ದರು.

  ಇನ್ನು 'ಬೀಸ್ಟ್' ಸಿನಿಮಾಕ್ಕೆ ಮರಳುವುದಾದರೆ, ಸಿನಿಮಾದಲ್ಲಿ ವಿಜಯ್ ಮಾಜಿ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದು, ಭಯೋತ್ಪಾದಕರಿಂದ ವಶಕ್ಕೆ ಒಳಗಾದ ಮಾಲ್‌ನಲ್ಲಿ ವಿಜಯ್ ಇರುತ್ತಾರೆ, ಆ ಮಾಲ್ ಅನ್ನು ಭಯೋತ್ಪಾದಕರಿಂದ ವಿಜಯ್ ಹೇಗೆ ಕಾಪಾಡುತ್ತಾರೆ ಎಂಬುದು ಸಿನಿಮಾದ ಕತೆ. ಸಿನಿಮಾದ ನಾಯಕಿ ಪೂಜಾ ಹೆಗ್ಡೆ, ಸಿನಿಮಾ ಆರಂಭದ ಒಂದು ದಿನ ಒಳ್ಳೆಯ ಕಲೆಕ್ಷನ್ ಮಾಡಿತಾದರೂ ಬಳಿಕ ಮಕಾಡೆ ಮಲಗಿತು.

  English summary
  Vijay's father SA Chandrashekhar lambasted on Beast movie director Nelson for not handling the movie's story well. He criticize Nelson for Beast movie's poor collection.
  Wednesday, April 20, 2022, 16:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X