For Quick Alerts
  ALLOW NOTIFICATIONS  
  For Daily Alerts

  ವಿಜಯ್ 'ದಳಪತಿ 65' ಚಿತ್ರದ ಅದ್ದೂರಿ ಮುಹೂರ್ತ: ಪೂಜಾ ಹೆಗ್ಡೆ ಗೈರಾಗಿದ್ದೇಕೆ?

  |

  ತಮಿಳು ಸ್ಟಾರ್ ನಟ ದಳಪತಿ ವಿಜಯ್ ವಿಜಯ್ ಮುಂದಿನ ಸಿನಿಮಾ ಯಾವುದು, ಯಾವಾಗ ಪ್ರಾರಂಭವಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೆ ಇವತ್ತು (ಮಾರ್ಚ್ 31) ಅಧಿಕೃತವಾಗಿ ಸಿನಿಮಾ ಮುಹೂರ್ತ ನೆರವೇರುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.

  ವಿಜಯ್ ಮುಂದಿನ ಸಿನಿಮಾ ದಳಪತಿ 65(ತಾತ್ಕಾಲಿಕ ಹೆಸರು)ಗೆ ಇಂದು ಅದ್ದೂರಿ ಮುಹೂರ್ತ ಮಾಡಲಾಗಿದೆ. ಚೆನ್ನೈನಲ್ಲಿ ನಡೆದ ಪೂಜೆ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಆದರೆ ನಾಯಕಿ ಪೂಜಾ ಹೆಗ್ಡೆ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

  ದಿಲ್ ರಾಜು ಮೆಗಾ ಪ್ಲಾನ್: ಪ್ರಶಾಂತ್ ನೀಲ್-ವಿಜಯ್ ಜೊತೆ ಒಪ್ಪಂದ?

  ಸನ್ ಟಿವಿ ಸ್ಟುಡಿಯೋದಲ್ಲಿ ಸಿನಿಮಾದ ಪೂಜಾ ಕಾರ್ಯ ನೆರವೇರಿದೆ. ಫಾರ್ಮಲ್ಸ್ ನಲ್ಲಿ ಎಂಟ್ರಿ ಕೊಟ್ಟಿದ್ದ ನಟ ವಿಜಯ್ ಕೂಲ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ದಳಪತಿ ಹೊಸ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಮಾಸ್ಟರ್ ಸಿನಿಮಾ ಬಳಿಕ ವಿಜಯ್ ನಟಿಸುತ್ತಿರುವ ಚಿತ್ರ ಇದಾಗಿದ್ದು, ಸಿನಿಮಾದ ಶೀರ್ಷಿಕೆ ಏನಾಗಿರಲಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  ಇನ್ನು ನಟಿ ಪೂಜಾ ಹೆಗ್ಡೆ ಮೊದಲ ಬಾರಿಗೆ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಇಂದು ನಡೆದ ಅದ್ದೂರಿ ಪೂಜೆ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಪೂಜಾ ಸಾಮಾಜಿಕ ಜಾಲತಾಣದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದ ಕಾರಣ ಪೂಜಾ ಇಂದಿನ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.

  ಈ ಬಗ್ಗೆ ಬಹಿರಂಗ ಪಡಿಸಿರುವ ಪೂಜಾ, 'ಚಿತ್ರೀಕರಣ ಕಾರಣ ಇವತ್ತಿನ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ನನ್ನ ಹೃದಯ ಸಿನಿಮಾತಂಡದ ಜೊತೆ ಇದೆ. ಅತಿ ಶೀಘ್ರದಲ್ಲೇ ತಂಡ ಸೇರಿಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

  ದಳಪತಿ 65 ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದ್ದು, ಮೇ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಸನ್ ಪಿಚ್ಚರ್ಸ್ ಬಂಡವಾಳ ಹೂಡುತ್ತಿದೆ.

  ಅಂದಹಾಗೆ ಸನ್ ಪಿಚ್ಚರ್ಸ್ ಜೊತೆ ವಿಜಯ್ ಅವರ 4ನೇ ಸಿನಿಮಾ ಇದಾಗಿದೆ. ಈ ಮೊದಲು ವೆಟ್ಟೈಕಾರನ್, ಸುರ ಮತ್ತು ಸರ್ಕಾರ್ ಸಿನಿಮಾಗಳು ಸನ್ ಪಿಚ್ಚರ್ಸ್ ನಿರ್ಮಾಣದಲ್ಲಿ ಮೂಡಿಬಂದಿದೆ. ಇದೀಗ ವಿಜಯ್ 65ನೇ ಸಿನಿಮಾ ಕೂಡ ಸನ್ ಪಿಚ್ಚರ್ಸ್ ಬಂಡವಾಳ ಹೂಡುತ್ತಿರುವುದು ವಿಶೇಷ.

  ಕೊರೊನಾ ಸೋಂಕಿಗೆ ಒಳಗಾದ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ | Filmibeat Kannada

  ಚಿತ್ರದ ಪ್ರಮುಖ ದೃಶ್ಯಗಳನ್ನು ರಷ್ಯಾದಲ್ಲಿ ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಆದರೀಗ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ರಷ್ಯಾ ಚಿತ್ರೀಕರಣದ ಕೆಲವು ಭಾಗಗಳನ್ನು ಚೆನ್ನೈನಲ್ಲಿ ಸೆರೆಹಿಡಿಯಲು ಸಿನಿಮಾತಂಡ ನಿರ್ಧರಿಸಿದೆ. ಮೇ ತಿಂಗಳಿಂದ ಚಿತ್ರೀಕರಣ ಪ್ರಾರಂಭ ಮಾಡುವ ವಿಜಯ್ ಮತ್ತು ತಂಡ ಮುಂದಿನ ವರ್ಷ ಪೊಂಗಲ್ ಗೆ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆ.

  English summary
  Tamil Actor Vijay starrer Thalapathy65 movie launched with Pooja in chennai. Actress Pooja hegde obscene in muhurt event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X