For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿ

  |

  ತಮಿಳು ನಟ ವಿಜಯ್ ಅಭಿನಯದ ಬಹು ನಿರೀಕ್ಷೆಯ ಮಾಸ್ಟರ್ ಸಿನಿಮಾದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚೆನ್ನೈನಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಚಿತ್ರದಲ್ಲಿ ಇಳಯದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಂಡರೆ ವಿಜಯ್ ಸೇತುಪತಿ ವಿಲನ್ ಆಗಿ ಮಿಂಚಿದ್ದಾರೆ.

  ಇಬ್ಬರು ಘಟಾನುಘಟಿ ಕಲಾವಿದರು ಒಂದೆ ಸಿನಿಮಾದಲ್ಲಿ ಅಭಿನಯಿಸಿರುವುದನ್ನು ನೋಡಲು ಅಬಿಮಾನಿಗಳು ಕಾತರರಾಗಿದ್ದಾರೆ. ಅಂದ್ಹಾಗೆ ವಿಜಯ್ ಸೇತುಪತಿ ಮಾಸ್ಟರ್ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಎನ್ನುವ ಬಗ್ಗೆ ಇಳಯದಳಪತಿ ವಿಜಯ್ ಬಹಿರಂಗ ಪಡಿಸಿದ್ದಾರೆ.

  ವಿಜಯ್ ದಳಪತಿಗೆ ವಿಜಯ್ ಸೇತುಪತಿ ಕಿಸ್: ವೈರಲ್ ಆಯ್ತು ಫೋಟೊವಿಜಯ್ ದಳಪತಿಗೆ ವಿಜಯ್ ಸೇತುಪತಿ ಕಿಸ್: ವೈರಲ್ ಆಯ್ತು ಫೋಟೊ

  ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ನಾವು ಸಾಕಷ್ಟು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳನ್ನು ನೋಡಿದ್ದೇವೆ. ಆದರೆ ಈ ಸಿನಿಮಾದಲ್ಲಿ ಸೇತುಪತಿ ಪಾತ್ರ ತುಂಬ ವಿಶೇಷವಾಗಿದೆ" ಎಂದು ಹೇಳಿದರು.

  "ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಎಂದು ನಾನು ವಿಜಯ್ ಸೇತುಪತಿ ಅವರನ್ನು ಕೇಳಿದೆ. ವಿಜಯ್ ನಾಲ್ಕು ಪದಗಳಲ್ಲಿಯೆ ನೀವು ಅಂದರೆ ನನಗೆ ತುಂಬ ಇಷ್ಟ ಎಂದು ಕೇವಲ ನಾಲ್ಕು ಪದಗಳಲ್ಲಿಯೆ ಹೇಳಿ ನನ್ನ ಬಾಯಿ ಮುಚ್ಚಿಸಿದರು" ಎಂದು ಹೇಳಿದರು.

  ವಿಜಯ್ ಗೋಸ್ಕರ ಸೇತುಪತಿ ಮಾಸ್ಟರ್ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ನಟ ವಿಜಯ್, ಸೇತುಪತಿ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  English summary
  "I asked him why he agreed to do the film and he shut me down by saying four words. I really like you." said Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X