For Quick Alerts
  ALLOW NOTIFICATIONS  
  For Daily Alerts

  ರಾಜೀವ್ ಗಾಂಧಿ ಹತ್ಯೆ ಅಪರಾಧಿಯನ್ನು ಬಿಡುಗಡೆ ಮಾಡಿ: ವಿಜಯ್ ಸೇತುಪತಿ

  |

  ನಟ ವಿಜಯ್ ಸೇತುಪತಿ ನಟನೆಯ ಜೊತೆಗೆ ಸಾಮಾಜಿಕ ವಿಷಯಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿರುತ್ತಾರೆ.

  ಕಾವೇರಿ ವಿವಾದ, ಜಾತಿ ಅಸಮಾನತೆ, ರೈತ ಹೋರಾಟ ಮುಂತಾದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದ್ದಾಗ್ಗೆ ಹಂಚಿಕೊಳ್ಳುವ ವಿಜಯ್ ಸೇತುಪತಿ, ಇದೀಗ ವಿವಾದಾತ್ಮಕ ವಿಷಯ ಒಂದರ ಬಗ್ಗೆ ಅಭಿಪ್ರಾಯ ಹೊರಗೆಡವಿದ್ದಾರೆ.

  ಮಾಜಿ ಪ್ರಧಾನಿ ರಾಜೀವ್ ಹತ್ಯೆ ಅಪರಾಧಿಗಳಲ್ಲಿ ಒಬ್ಬರನ್ನು ಶೀಘ್ರವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನಟ ವಿಜಯ್ ಸೇತುಪತಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಪ್ರಕಟಿಸಿದ್ದಾರೆ ವಿಜಯ್ ಸೇತುಪತಿ.

  ಪೆರರಿವಾಳನ್ ಅನ್ನು ಬಿಡುಗಡೆ ಮಾಡಿ: ಸೇತುಪತಿ

  ಪೆರರಿವಾಳನ್ ಅನ್ನು ಬಿಡುಗಡೆ ಮಾಡಿ: ಸೇತುಪತಿ

  ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಯಾದ ಪರೆರಿವಾಳನ್ ಅನ್ನು ಬಿಡುಗಡೆ ಮಾಡುವಂತೆ ನಟ ವಿಜಯ್ ಸೇತುಪತಿ ಮನವಿ ಮಾಡಿದ್ದಾರೆ. ಪೆರರಿವಾಳನ್ ಈಗಾಗಲೇ 28 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

  'ಪೆರರಿವಾಳನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ'

  'ಪೆರರಿವಾಳನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ'

  ಪೆರರಿವಾಳನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೆರರಿವಾಳನ್ ಪೆರೋಲ್ ಮೇಲೆ ಹೊರಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೆರರಿವಾಳನ್ ತಂದೆಯ ಆರೋಗ್ಯವೂ ತೀವ್ರವಾಗಿ ಕ್ಷೀಣಿಸಿದೆ. ಅವರ ತಾಯಿ ತಮ್ಮ ಇಡೀ ಜೀವನ, ಮಗನನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನದಲ್ಲಿಯೇ ಕಳೆದಿದ್ದಾರೆ ಎಂದು ವಿಜಯ್ ಸೇತುಪತಿ ವಿಡಿಯೋದಲ್ಲಿ ಹೇಳಿದ್ದಾರೆ.

  ಪೆರರಿವಾಳನ್ ಗೆ ಮರಣದಂಡನೆ ವಿಧಿಸಲಾಗಿತ್ತು

  ಪೆರರಿವಾಳನ್ ಗೆ ಮರಣದಂಡನೆ ವಿಧಿಸಲಾಗಿತ್ತು

  ಪೆರರಿವಾಳನ್‌ಗೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆ ನಂತರ 2014 ರಲ್ಲಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಲಾಯಿತು. ರಾಜೀವ್ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಸ್ಪೋಟಕಕ್ಕೆ ಬ್ಯಾಟೆರಿಗಳನ್ನು ಪೆರರಿವಾಳನ್ ತಯಾರಿಸಿ ಕೊಟ್ಟಿದ್ದ ಹಾಗಾಗಿ ಆತನನ್ನು ಬಂಧಿಸಲಾಗಿತ್ತು.

  Act 1978 : ಬುಡದಿಂದ ಬಾಲದವರೆಗೂ ಕಟ್ ಮಾಡಿದ್ರೆ ಎಲ್ಲಾ ಸರಿ ಆಗುತ್ತೆ | Bramhanda Guruji | Filmibeat Kannada
  1991 ರ ಮೇ 21 ರಂದು ರಾಜೀವ್ ಗಾಂಧಿ ಹತ್ಯೆ

  1991 ರ ಮೇ 21 ರಂದು ರಾಜೀವ್ ಗಾಂಧಿ ಹತ್ಯೆ

  1991 ರ ಮೇ 21 ರಂದು ರಾಜೀವ್ ಗಾಂಧಿ ಹತ್ಯೆ ಮಾಡಲಾಗಿತ್ತು. ತಮಿಳುನಾಡಿನ ತಿರುಪೆರಂಬದೂರ್‌ ನಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿ ರಾಜೀವ್ ಗಾಂಧಿಯನ್ನು ಕೊಲ್ಲಲಾಗಿತ್ತು. ಟಿ.ರಾಜರತ್ನಂ, ನಳಿನಿ, ಪೆರರಿವಾಳನ್, ಸುತೇಂದ್ರರಾಜ, ವಿ.ಶ್ರೀಹರನ್ ಅನ್ನು ಅಪರಾಧಿಗಳು ಎಂದು ತೀರ್ಪು ಪ್ರಕಟಿಸಲಾಗಿದೆ.

  English summary
  Actor Vijay Sethupathi demand to release Rajiv Gandhi assassin convict Perarivalan. He posted a video on his twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X