For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗಳ ಸಂಖ್ಯೆ ಕಡಿಮೆ ಮಾಡಿದ ವಿಜಯ್ ಸೇತುಪತಿ

  |

  ಭಾರತ ಚಿತ್ರರಂಗದ ಅತ್ಯಂತ ಬ್ಯುಸಿ ನಟ ವಿಜಯ್ ಸೇತುಪತಿ. ಒಟ್ಟೊಟ್ಟಿಗೆ 10-12 ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ ವಿಜಯ್. ವಿಜಯ್ ಸೇತುಪತಿ ಮನೆಯ ಮುಂದೆ ಪ್ರತಿದಿನವೂ ನಿರ್ದೇಶಕರು ಚಿತ್ರಕತೆ ಹಿಡಿದು ಕಾಯುತ್ತಿರುತ್ತಾರೆ.

  ಆದರೆ ನಟ ವಿಜಯ್ ಸೇತುಪತಿ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡುತ್ತಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಬದಲಿಗೆ ವರ್ಷಕ್ಕೆ ಇಷ್ಟು ಸಿನಿಮಾ ಎಂದು ತಮಗೆ ತಾವೇ ನಿಯಮ ಹೇರಿಕೊಂಡಿದ್ದಾರೆ.

  ವಿಜಯ್ ಸೇತುಪತಿ ಕೈಯಲ್ಲಿ ಹಲವಾರು ಸಿನಿಮಾಗಳು ಬಾಕಿ ಇವೆ. ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುದರಿಂದ ವಿಜಯ್ ಸೇತುಪತಿ ಸಹಜವಾಗಿಯೇ ಒತ್ತಡ ಅನುಭವಿಸುತ್ತಿದ್ದಾರೆ ಹಾಗಾಗಿ ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

  ಈಗಾಗಲೇ ಹಲವು ಸಿನಿಮಾಗಳನ್ನು ವಿಜಯ್ ಸೇತುಪತಿ ಕೈಬಿಟ್ಟಿದ್ದಾರೆ. ಹಿಂದಿಯಲ್ಲಿ ಅಮೀರ್ ಖಾನ್ ಜತೊಗೆ ನಟಿಸುವ ಅವಕಾಶ ವಿಜಯ್ ಸೇತುಪತಿಗೆ ಒದಗಿಬಂದಿತ್ತು. ಆದರೆ ಅದನ್ನು ಕೈ ಬಿಟ್ಟರು ವಿಜಯ್ ಸೇತುಪತಿ. ''ನನ್ನ ಬಳಿ ಈಗಾಗಲೇ ಸಾಕಷ್ಟು ಸಿನಿಮಾಗಳು ಇವೆ ಅಮೀರ್ ಖಾನ್ ಸಿನಿಮಾಕ್ಕೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಆ ಸಿನಿಮಾದಲ್ಲಿ ನಟಿಸಲಿಲ್ಲ'' ಎಂದಿದ್ದರು.

   'ಪುಷ್ಪ', 'ಸಲಾರ್' ಸಿನಿಮಾಕ್ಕೆ ಕೇಳಲಾಗಿತ್ತು

  'ಪುಷ್ಪ', 'ಸಲಾರ್' ಸಿನಿಮಾಕ್ಕೆ ಕೇಳಲಾಗಿತ್ತು

  ತೆಲುಗಿನ 'ಪುಷ್ಪ' ಸಿನಿಮಾಕ್ಕಾಗಿಯೂ ವಿಜಯ್‌ ಸೇತುಪತಿ ಅವರನ್ನು ಕೇಳಲಾಗಿತ್ತು. ಆದರೆ ಆ ಸಿನಿಮಾದ ಅವಕಾಶವನ್ನೂ ವಿಜಯ್ ನಿರಾಕರಿಸಿದರು. ಆ ಸಿನಿಮಾದ ಅವಕಾಶ ಕೊನೆಗೆ ಮಲಯಾಳಂನ ಫಹಾದ್ ಫಾಸಿಲ್‌ಗೆ ಹೋಯಿತು. ತೆಲುಗಿನ ಇನ್ನೂ ಕೆಲವು ದೊಡ್ಡ ನಟರ ಸಿನಿಮಾಗಳನ್ನೇ ವಿಜಯ್ ಸೇತುಪತಿ ರಿಜೆಕ್ಟ್ ಮಾಡಿದ್ದಾರೆ. ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾಕ್ಕಾಗಿ ವಿಜಯ್ ಸೇತುಪತಿ ಅವರನ್ನು ಕೇಳಲಾಗಿತ್ತು ಆದರೆ ಅವರು ನಟಿಸಲು ನಿರಾಕರಿಸಿದರು ಎನ್ನಲಾಗುತ್ತಿದೆ. ತಮಿಳಿನಲ್ಲಿಯೂ ಕೆಲವು ಸಿನಿಮಾಗಳನ್ನು ವಿಜಯ್ ಸೇತುಪತಿ ನಿರಾಕರಿಸಿದ್ದಾರೆ.

  ಒತ್ತಡ ಕಡಿಮೆ ಮಾಡಿಕೊಳ್ಳಲು ನಿರ್ಧಾರ

  ಒತ್ತಡ ಕಡಿಮೆ ಮಾಡಿಕೊಳ್ಳಲು ನಿರ್ಧಾರ

  ವಿಜಯ್ ಸೇತುಪತಿಗೆ ಪ್ರತಿದಿನ ಹಲವು ಕತೆಗಳನ್ನು ಹೇಳಲಾಗುತ್ತದೆಯಂತೆ. ಪ್ರತಿದಿನ ಹಲವಾರು ನಿರ್ದೇಶಕರು, ನಿರ್ಮಾಪಕರು ವಿಜಯ್ ಸೇತುಪತಿ ಮನೆಮುಂದೆ ಸಾಲುಗಟ್ಟುತ್ತಾರೆ. ಆದರೆ ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಒತ್ತಡ ಹೆಚ್ಚಾಗಿದ್ದು, ಸಿನಿಮಾಗಳಲ್ಲಿ ನಟನೆಯನ್ನು ಕಡಿಮೆ ಮಾಡುವುದಕ್ಕೆ ಸೇತುಪತಿ ನಿರ್ಧರಿಸಿದ್ದಾರೆ. ಹಾಗಾಗಿಯೇ ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳುವ ಬದಲಿಗೆ ವಿಶೇಷವಾಗಿ, ಭಿನ್ನವಾದ ಕತೆಗಳನ್ನಷ್ಟೆ ವಿಜಯ್ ಸೇತುಪತಿ ಒಪ್ಪಿಕೊಳ್ಳುತ್ತಿದ್ದಾರೆ.

  ರಿಯಾಲಿಟಿ ಶೋ ನಡೆಸಿಕೊಡಲಿರುವ ವಿಜಯ್ ಸೇತುಪತಿ

  ರಿಯಾಲಿಟಿ ಶೋ ನಡೆಸಿಕೊಡಲಿರುವ ವಿಜಯ್ ಸೇತುಪತಿ

  ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಸಹ ವಿಜಯ್ ಸೇತುಪತಿ ಪಾಲ್ಗೊಂಡಿದ್ದಾರೆ. ತಮಿಳಿನ ಮಾಸ್ಟರ್ ಶೆಫ್‌ನ ಮುಖ್ಯ ನಿರೂಪಕರಾಗಿದ್ದಾರೆ ವಿಜಯ್. ಸಿನಿಮಾಗಳಲ್ಲಿ ನಟಿಸುವುದಕ್ಕಿಂತಲೂ ಕಡಿಮೆ ರಿಸ್ಕ್‌ ಹಾಗೂ ಹೆಚ್ಚು ಲಾಭವಾದ ಟಿವಿ ರಿಯಾಲಿಟಿ ಶೋ ಅನ್ನು ವಿಜಯ್ ಸೇತುಪತಿ ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳಿನ ಮಾಸ್ಟರ್ ಶೆಫ್‌ನ ಪ್ರೊಮೊ ರಾಮನಗರದಲ್ಲಿ ಚಿತ್ರೀಕರಣವಾಗಿದೆ. ಇದೇ ಶೋ ಅನ್ನು ತೆಲುಗಿನಲ್ಲಿ ತಮನ್ನಾ ನಿರಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಸುದೀಪ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರೂಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

  ವಿಜಯ್ ಸೇತುಪತಿ ಕೈಲಿ ಹಲವು ಸಿನಿಮಾಗಳಿವೆ

  ವಿಜಯ್ ಸೇತುಪತಿ ಕೈಲಿ ಹಲವು ಸಿನಿಮಾಗಳಿವೆ

  ವಿಜಯ್ ಸೇತುಪತಿ ಕೈಯಲ್ಲಿ ಪ್ರಸ್ತುತ 20 ಸಿನಿಮಾಗಳಿವೆ! 'ಲಾಭಂ', 'ನವರಸ', 'ತುಘಲಕ್ ದರ್ಬಾರ್' ಸಿನಿಮಾಗಳು ಬಿಡುಗಡೆಗೆ ತಯಾರಾಗಿದೆ. 'ಅನ್ನಾಬೆಲ್ ಸುಬ್ರಹ್ಮಣ್ಯಮ್', ಕಮಲ್ ಹಾಸನ್ ಜೊತೆಗೆ 'ವಿಕ್ರಂ', ವೆಟ್ರಿಮಾರನ್ ನಿರ್ದೇಶಿಸಲಿರುವ 'ವಿದುತಲೈ', ಪೊನ್ರಮ್ ನಿರ್ದೇಶನದ ಹೊಸ ಸಿನಿಮಾ, ಕಿಶೋರ್ ನಿರ್ದೇಶನದ ಗಾಂಧಿ ಟಾಕ್ಸ್, 'ಊದುಕುವಂ 2', ಸೀನು ರಾಮಸ್ವಾಮಿ ನಿರ್ದೇಶನದ 'ಮಾ ಮಣಿದನ್', ನಯನತಾರಾ ಜೊತೆಗೆ 'ಕಾತು ವಾಕುಲ ರೆಂಡು ಕಾದಲ್', 'ಕಡೈಸಿ ವಿವಾಸೈ', 'ಯಾದುಂ ಊರೆ ಯಾವದುಂ ಕೆಲಿರೆ', 'ಇದಂ ಪೊರುಂ ಇವಲ್' ಮತ್ತು ತೆಲುಗಿನ ಹೊಸ ಸಿನಿಮಾ ಒಂದನ್ನು ವಿಜಯ್ ಸೇತುಪತಿ ಒಪ್ಪಿಕೊಂಡಿದ್ದಾರೆ.

  English summary
  Actor Vijay Sethupathi not acting in too many movies. He is choosing stories if they were good only.
  Monday, August 2, 2021, 9:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X