For Quick Alerts
  ALLOW NOTIFICATIONS  
  For Daily Alerts

  ಎಸ್‌ಪಿಬಿ ಅಗಲಿಕೆಗೆ ಜೈಪುರದಿಂದಲೇ ಸಂತಾಪ ಸೂಚಿಸಿದ ವಿಜಯ್ ಸೇತುಪತಿ, ರಾಧಿಕಾ

  |

  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಗೆ ಇಡೀ ಭಾರತವೇ ಮರುಗಿದೆ. ತಮಿಳುನಾಡಿನ ತಮ್ಮ ತೋಟದ ಮನೆಯಲ್ಲಿ ಖ್ಯಾತ ಗಾಯಕ ಅಂತಿಮ ಸಂಸ್ಕಾರ ಮಾಡಲಾಯಿತು. ತಮಿಳು ನಟ ವಿಜಯ್ ಸೇರಿದಂತೆ ಹಲವು ಗಣ್ಯರು ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದರು.

  ಎಸ್‌ಪಿಬಿ ಅವರ ಅಂತಿಮಯಾತ್ರೆಯಲ್ಲಿ ಭಾಗಿಯಾಗದ ಕಾರಣ ಜೈಪುರದಲ್ಲೇ ಸಂತಾಪ ಸೂಚಿಸಿದ್ದಾರೆ ತಮಿಳು ನಟ ವಿಜಯ್ ಸೇತುಪತಿ.

  ವಿಜಯ್ ಸೇತುಪತಿ, ಹಿರಿಯ ನಟಿ ರಾಧಿಕಾ ಶರತ್ ಕುಮಾರ್, ರಾಜೇಂದ್ರ ಪ್ರಸಾದ್, ತಾಪ್ಸಿ ಪೆನ್ನು, ಯೋಗಿಬಾಬು ಅವರೆಲ್ಲರೂ ಚಿತ್ರೀಕರಣ ನಿಮಿತ್ತ ಜೈಪುರಕ್ಕೆ ತೆರಳಿದ್ದರು. ಈ ನಡುವೆ ಎಸ್‌ಪಿಬಿ ನಿಧನ ಸುದ್ದಿ ತಿಳಿದಿದೆ.

  ಈ ಹಿನ್ನೆಲೆ ಜೈಪುರದಲ್ಲಿಯೇ ಎಸ್‌ಪಿಬಿ ಅವರ ಭಾವಚಿತ್ರ ಇಟ್ಟು ಅಂತಿಮ ನಮನ ಸಲ್ಲಿಸಲಾಗಿದೆ. ದೀಪ ಹಚ್ಚುವ ಮೂಲಕ ಖ್ಯಾತ ಗಾಯಕನಿಗೆ ವಿದಾಯ ಹೇಳಿದ್ದಾರೆ. ಈ ಫೋಟೋವನ್ನು ರಾಧಿಕಾ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ''ಲೆಜೆಂಡ್‌ಗೆ ನಮ್ಮಿಂದ ವಿದಾಯ'' ಎಂದು ತಿಳಿಸಿದ್ದಾರೆ.

  SPB Special : Shree Harsha about the Legend ಅವರ ತರ ಜೀವನ ನಡೆಸೋಕೆ ಯಾರಿಂದಲೂ ಆಗಲ್ಲ | Filmibeat Kannada

  ಸೆಪ್ಟೆಂಬರ್ 25 ರಂದು ಬಾಲಸುಬ್ರಹ್ಮಣ್ಯಂ ಅವರ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ರಾಧಿಕಾ ಶರತ್ ಕುಮಾರ್ ಮತ್ತು ರಾಜೇಂದ್ರ ಪ್ರಸಾದ್ ಟ್ವಿಟ್ಟರ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ವಿಡಿಯೋ ಹಂಚಿಕೊಂಡಿದ್ದ ರಾಜೇಂದ್ರ ಪ್ರಸಾದ್ ಗೆಳೆಯನ ಅಗಲಿಕೆಗೆ ಕಣ್ಣೀರು ಹಾಕಿದ್ದರು.

  English summary
  Vijay Sethupathi, Radhika, Taapsee Pannu & Rajendra Prasad bid floral tribute to legendary singer SP Balasubrahmanyam from the shooting location of their upcoming film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X